ಬೆಂಗಳೂರು
ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಮಾಯಾಂಗನೆಯಂತೆ ವರ್ತಿಸುತ್ತಿದ್ದಾರೆ. ಜಯಲಲಿತಾರನ್ನು ಅವರು ಮೀರಿಸ್ತಾರೆ ಎನ್ನುವ ಮೂಲಕ ಮಂಡ್ಯ ಸಂಸದ ಶಿವರಾಮೇಗೌಡ, ಸುಮಲತಾ ವಿರುದ್ಧ ಮತ್ತೆ ವಾಗ್ದಾಳಿ ಮಾಡಿದರು.
ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಸುಮಲತಾ ಅಂಬರೀಶ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಟೂರಿಂಗ್ ಟಾಕೀಸ್ 18ರ ನಂತರ ಪ್ಯಾಕ್ ಮಾಡಿಕೊಂಡು ಹೋಗುತ್ತೆ.ಆಮೇಲೆ ನಾವೇ ನಿಮಗೆ ಆಗಬೇಕು ಎಂದು ಹೇಳಿದರು.
ಡೆಡ್ ಹಾರ್ಸ್ ಎಂದು ಚಲುವರಾಯಸ್ವಾಮಿಯನ್ನು ಟೀಕೆ ಮಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಇಂದು ಬಹಿರಂಗವಾಗಿ ಕ್ಷಮೆ ಕೋರಿದರು.ನನ್ನ ಮಾತಿನಿಂದ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ.ದಯಮಾಡಿ ನಿಖಿಲ್ ಪರವಾಗಿ ಪ್ರಚಾರಕ್ಕೆ ಬನ್ನಿ ಎಂದು ಮನವಿ ಮಾಡಿದರು. ನಿಖಿಲ್ ಕುಮಾರಸ್ವಾಮಿಗೆ ಹಿನ್ನಡೆಯಾಗುವ ಸಾಧ್ಯತೆಯಿಂದ ಕ್ಷಮೆ ಕೋರಿದ್ದಾರೆ ಎಂದು ಹೇಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
