ಕರ್ತವ್ಯ ಲೋಪ : ಸಿಬ್ಬಂದಿಗೆ ಎಚ್ಚರಿಕೆ ನೀಡಿದ ಸಚಿವರು

ಚಿಕ್ಕನಾಯಕನಹಳ್ಳಿ :

    ಕೊರೊನಾ ಪಾಸಿಟಿವ್ ಬಂದವರ ಸಂಪರ್ಕವಿದ್ದ ಕೆಲವರು ಹೋಂ ಕ್ವಾರಂಟೈನ್ ಆಗದೆ ಹೊರಗಡೆ ಓಡಾಡಿಕೊಂಡಿದ್ದಾರೆ ಅಂತಹವರನ್ನು ಆರೋಗ್ಯ ಇಲಾಖೆಯವರು ಪತ್ತೆ ಹಚ್ಚಿ ಹೋಂ ಕ್ವಾರಂಟೈನ್ ಮಾಡಿ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

    ಪಟ್ಟಣದ ತಾಲ್ಲೂಕು ಕಛೇರಿಯಲ್ಲಿ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳ ಹಾಗೂ ಪುರಸಭಾ ಸದಸ್ಯರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.ಸೋಂಕತರೆಂದು ತಿಳಿದಿದ್ದರೂ ಕ್ವಾರಂಟೈನ್ ಆಗಿರುವವರನ್ನು ಸೀಲ್ ಡೌನ್ ಪ್ರದೇಶಕ್ಕೆ ಬಿಟ್ಟ ಕಾರಣವೇನು, ಸೀಲ್ ಡೌನ್ ಆಗಿರುವ ಪ್ರದೇಶಗಳಿಗೆ ಪುನಃ ಅವರನ್ನು ಕರೆತರುವ ಕಾರಣವೇನಿತ್ತು ಎಂದು ಅಧಿಕಾರಿಗಳನ್ನು ಸಚಿವರು ಪ್ರಶ್ನಿಸಿದರು.

    ಇದಕ್ಕೆ ಪ್ರತಿಕ್ರಯಿಸಿದ ತಹಶೀಲ್ದಾರ್ ತೇಜಸ್ವಿನಿ, ಕ್ವಾರಂಟೈನ್ ಗೆ ಒಳಗಾಗಿದ್ದವರಿಗೆ 14 ದಿನಗಳ ಅವಧಿ ಮುಗಿದಿತ್ತು , ಹಾಗಾಗಿ ಟಿಎಚ್ ಓ ರವರು ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ ನಂತರ ಕ್ವಾರಂಟೈನ್ ಆಗಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲು ಹೇಳಿದ್ದರು, ಅದರಂತೆ ಅವರನ್ನು ಅವರ ಮನೆಗಳಿಗೆ ಕಳುಹಿಸಲಾಯಿತು, ಅವರನ್ನು ಮನೆಗೆ ಕಳುಹಿಸುವ ಮುನ್ನ ಮತ್ತೆ ಗಂಟಲು ದ್ರವವನ್ನು ತೆಗೆದುಕೊಳ್ಳಲಾಗಿತ್ತು ಅದರ ವರದಿ ಬಂದಾಗ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಮತ್ತೆ ಕ್ವಾರಂಟೈನ್ ಮಾಡಲಾಗಿದೆ ಎಂದು ತಿಳಿಸಿದರು.

    ಸೀಲ್ ಡೌನ್ ಆಗಿರುವ ಪ್ರದೇಶಗಳಿಗೆ ಸರ್ಕಾರದಿಂದ ಏನೂ ಕೊಡಲು ಆಗುವುದಿಲ್ಲ, ಅವರಿಗೆ ದಿನಬಳಕೆ ವಸ್ತುಗಳಿಗಾಗಿ ಸಹಾಯಕರಿಂದ ದಿನಕ್ಕೆ 2ಗಂಟೆಗಳ ಅವಧಿಯಂತೆ ಅಗತ್ಯ ವಸ್ತುಗಳನ್ನು ತಂದುಕೊಡುವ ಕೆಲಸ ಆಗಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

    ಪುರಸಭಾ ಸದಸ್ಯ ಮಂಜುನಾಥ್ ಮಾತನಾಡಿ ಪಾಸಿಟಿವ್ ಬಂದಿರುವ ಪ್ರಾಥಮಿಕ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬರು, ಹೋಂ ಕ್ವಾರಂಟೈನ್ ಆಗಿಲ್ಲ ಅವರು ಹೊರಗಡೆ ಓಡಾಡಿಕೊಂಡಿದ್ದಾರೆ ಎಂದು ಸಭೆಗೆ ತಿಳಿಸಿದರು.ಪುರಸಭಾ ಸದಸ್ಯೆ ರೇಣುಕಮ್ಮ ಮಾತನಾಡಿ, ಕ್ವಾರಂಟೈನ್ ಗೆ ಒಳಗಾಗಿದ್ದವರನ್ನು ಸಿಬ್ಬಂದಿ ಅವರ ಮನೆಗೆ ಕರೆದುಕೊಂಡು ಹೋಗಿ ಬಿಟ್ಟಿಲ್ಲ ಮದ್ಯದಲ್ಲೇ ಬಿಟ್ಟು ಹೋಗಿದ್ದಾರೆ ಎಂದು ದೂರಿದರು.

    ತಹಶೀಲ್ದಾರ್ ತೇಜಸ್ವಿನಿ ಮಾತನಾಡಿ, ಕೋವಿಡ್ ಕೇರ್ ಸೆಂಟರ್ ನ್ನು ಪಟ್ಟಣದಿಂದ ಹೊರವಲಯದಲ್ಲಿ ಇರಿಸುವ ವ್ಯವಸ್ಥೆ ಮಾಡಲಾಗಿದೆ ಹಾಗೂ ತಮಿಳುನಾಡು, ಮಹಾರಾಷ್ಟ್ರ, ರಾಜಸ್ಥಾನ್ ಹಾಗೂ ಹೊರ ರಾಜ್ಯದಿಂದ ಬಂದಂತಹವರನ್ನು ಕ್ವಾರಂಟೈನ್ ನಲ್ಲಿ ಇಟ್ಟಿದ್ದೇವೆ ಎಂದು ಸಭೆಗೆ ತಿಳಿಸಿದರು. ಸಭೆಯಲ್ಲಿ ತಹಶೀಲ್ದಾರ್ ತೇಜಸ್ವಿನಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಅಥಿಕ್ ಪಾಷ, ಮುಖ್ಯಾಧಿಕಾರಿ ಶ್ರೀನಿವಾಸ್ ಸೇರಿದಂತೆ ಪುರಸಭಾ ಸದಸ್ಯರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap