ಶಿರಾ
ಸುಮಾರು 26.40 ಕೋಟಿ ರೂಗಳ ವೆಚ್ಚದಲ್ಲಿ ಶಿರಾ ತಾಲ್ಲೂಕಿನ ತಾವರೇಕೆರೆ ಸಮೀಪದ ಚೀಲಹಳ್ಳಿಯ ಬಳಿ ನಿರ್ಮಾಣ ವಾಗುತ್ತಿರುವ ಕುರಿ-ಮೇಕೆ ಮಾಂಸ ಉತ್ಪಾದನಾ ವಧಾಗಾರಕ್ಕೆ ಕೇಂದ್ರ ಪಶು ಸಂಗಫನಾ ಸಚಿವ ಪ್ರಭು ಚೌಹಾಣ್ ಸೋಮವಾರ ಭೇಟಿ ನೀಡಿದರು.
ಶಿರಾ ತಾಲ್ಲೂಕಿನಲ್ಲಿ ಅತಿ ಹೆಚ್ಚು ಕುರಿಗಾಯಿಗಳಿದ್ದು ಕುರಿಗಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 26 ಕೊಟಿಗೂ ಹೆಚ್ಚು ಅನುದಾನವನ್ನು ವಧಾಗಾರ ನಿರ್ಮಾಣಕ್ಕೆ ನೀಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ವಧಾಗಾರ ಅಭಿವೃದ್ಧಿಗೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಭು ಚೌಹಾಣ್ ಹೇಳಿದರು.
ಶಿರಾ ಭಾಗವವಷ್ಟೇ ಅಲ್ಲದೆ ಇಡೀ ರಾಜ್ಯದಲ್ಲಿನ ಕುರಿಗಾರರ ಸಮಸ್ಯೆಗಳು ಹೆಚ್ಚುತ್ತಿವೆ. ಮರಣ ಹೊಂದಿದ ಕುರಿಗಳಿಗೆ ಅನುಗ್ರಹ ಯೋಜನೆಯಡಿ ನೀಡಲಾಗುತ್ತಿದ್ದ ಯೋಜನೆಯನ್ನು ಸ್ಥಗಿತಗೊಳಿಸಿ ನಂತರ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದರೂ ಈವರೆಗೇ ಆದೇಶ ಪ್ರಕಟಗೊಂಡಿಲ್ಲ ಕೂಡಲೇ ಸರ್ಕಾರ ಅನುಗ್ರಹ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕೆಂದು ಕುರಿ ಮತ್ತು ಉಣ್ಣೇ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಡಿ.ವೈ.ಪೋಪಾಲ್ ಸಚಿವರಿಗೆ ಮನವಿ ಮಾಡಿದರು.
ಶಿರಾ ಭಾಗದ ವಲಸೆಗಾರರು ಕುರಿಗಳನ್ನು ಮೇವಿಗಾಗಿ ಹೊರ ಜಿಲ್ಲೆ, ಹೊರ ರಾಜ್ಯಗಳತ್ತ ಕರೆದೊಯ್ದಾಗ ಅವರ ಮೇಲೆ ಹಲ್ಲೆ ಮಾಡಿರುವಂತಹ ಪ್ರಕರಣಗಳಿದ್ದು ಕುರಿಗಾಯಿಗಳಿಗೆ ಈ ಕೂಡಲೇ ಸರ್ಕಾರ ಭದ್ರತೆಯನ್ನು ಒದಗಿಸಬೇಕು ಎಂದು ಡಿ.ವೈ.ಪೋಪಾಲ್ ಮನವಿ ಮಾಡಿದರು.
ಶಿರಾ ನಗರದಲ್ಲಿ ಪಶುಪಾಲನಾ ಇಲಾಖೆಯ ವತಿಯಿಂದ ಕಳೆದ ಹಲವು ವರ್ಷಗಳ ಹಿಂದೆಯೇ ನಿರ್ಮಾಣಗೊಂಡ ಪಾಲಿ ಕ್ಲಿಕ್ ಈವರೆಗೂ ಉದ್ಘಾಟನೆಗೊಂಡೇ ಇಲ್ಲ. ಇದನ್ನು ಉದ್ಘಾಟಿಸಬೇಕೆಂಬ ಜರೂರತ್ತು ಯಾರಲ್ಲೂ ಇಲ್ಲವಾಗಿದೆ. ಇಷ್ಟೊಂದು ನಿರ್ಲಕ್ಷ್ಯವೇಕೆ? ಎಂಬ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಮಾರ್ಚ್ ತಿಂಗಳಲ್ಲಿ ಉದ್ಘಾಟಿಸಬೇಕಿತ್ತು. ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕುರಿ ಮತ್ತು ಉಣ್ಣೇ ಅಭಿವೃದ್ಧಿ ನಿಗಮದ ಸಹಾಯಕ ನಿರ್ದೇಶಕ ಡಾ.ಕೆ.ನಾಗಣ್ಣ, ಗೌ.ಮು.ನಾಗರಾಜು, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಎಸ್.ಆರ್.ಗೌಡ ಸೇರಿದಂತೆ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂಧಿ ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ