ಹರಪನಹಳ್ಳಿ :
ಪಟ್ಟಣದ ಹೊಸಪೇಟೆ ರಸ್ತೆ ಮಿನಿವಿದಾನ ಸೌಧದ ತಹಶೀಲ್ದಾರ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿವತಿಯಿಂದ ವರ್ಧಮಾನ ಮಹಾವೀರರ ಜಯಂತ್ಯುತ್ಸವವನ್ನು ನೀತಿ ಸಂಹಿತೆ ಹಿನ್ನೆಲೆ ಬುಧುವಾರ ಸರಳವಾಗಿ ಆಚರಿಸಿದರು.
ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ನೆರವೇರಿಸಲಾಯಿತು. ತಹಶೀಲ್ದಾರ ಪ್ರಸಾದ್ ಮಾತನಾಡಿ, ಜೈನ ಧರ್ಮ ಶಾಂತಿ ಪ್ರತಿಪಾದಿಸುವ ತ್ಯಾಗ ಪ್ರಧಾನ ಧರ್ಮ. ತೀರ್ಥಂಕರ ಮಹಾವೀರರು ಜಗತ್ತಿಗೆ ಅಹಿಂಸೆ ಮಾರ್ಗವನ್ನು ಸಾರಿದ್ದಾರೆ ಎಂದರು. ಲೋಕಸಭೆ ಚುನಾವಣೆ ಹಿನ್ನೆಲೆ ಸರಳವಾಗಿ ಆಚರಿಸಲಾಗಿದೆ. ಏ.23ರಂದು ನಡೆಯುವ ಮತದಾನ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಕಡ್ಡಾಯವಾಗಿ ಮತ ಚಲಾಯಿಸಿ ಎಂದು ಹೇಳಿದರು.
ಮುಖ್ಯಾಧಿಕಾರಿ ರೇಣುಕಾದೇಸಾಯಿ, ಆರ್‍ಐ ಶಕಿಲಾ, ಸುದೀರ್‍ನಾಯ್ಕ, ಕೃಷ್ಣಪ್ಪ, ಮಹೇಶ್ ಪೂಜಾರ, ಪದ್ಮರಾಜ್ ಜೈನ್, ಎನ್.ಕೆ.ಸಂತೋಷ, ಹಾಗೂ ಜೈನ್ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.