ಈ ಬಾರಿ ಅಲ್ಪಸಂಖ್ಯಾತರು ಬಿಜೆಪಿ ಮತ ನೀಡಲು ತೀರ್ಮಾನ ಮಾಡಿದ್ದೇವೆ : ಕೆ.ನಯಾಜ್ ಅಹಮ್ಮದ್

ತುಮಕೂರು

       ಸ್ವಾತಂತ್ರ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಾ ಬಂದಿದ್ದೇವೆಯಾದರೂ ಇಲ್ಲಿಯವರೆಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಮಾತ್ರ ಆಗಿಲ್ಲ ಈ ನಿಟ್ಟಿನಲ್ಲಿ ಈ ಬಾರಿ ಅಲ್ಪಸಂಖ್ಯಾತರು ಬಿಜೆಪಿ ಮತ ನೀಡಲು ತೀರ್ಮಾನ ಮಾಡಿದ್ದೇವೆ ಎಂದು ಅಲ್ಪಸಂಖ್ಯಾತರ ಪ್ರಗತಿಪರ ಮನಸ್ಕರ ವೇದಿಕೆಯ ಕೆ.ನಯಾಜ್ ಅಹಮ್ಮದ್ ತಿಳಿಸಿದರು.

     ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸ್ವಾತಂತ್ರ ಬಂದಾಗಿನಿಂದ ಅಲ್ಪಸಂಖ್ಯಾತರು ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತಾ ಬಂದಿದ್ದಾರೆ. ದೇಶದ ಅಭಿವೃದ್ಧಿಯಾಗಬೇಕಾದರೆ ಸರಕಾರದ ಪಾತ್ರ ಬಹುಮುಖ್ಯವಾಗಿರುತ್ತದೆ. ಆದರೆ ಅಲ್ಪಸಂಖ್ಯಾತರ ಅಭಿವೃದ್ಧಿ ಮಾಡುವಲ್ಲಿ ಮಾತ್ರ ಕಾಂಗ್ರೆಸ್ ಪಕ್ಷ ವಿಫಲವಾಗಿದೆ ಎಂದು ಆರೋಪಿಸಿದರಲ್ಲದೆ, ಮೋದಿ ಆಡಳಿತದಲ್ಲಿ ಅಲ್ಪಸಂಖ್ಯಾತರು ಅಭಿವೃದ್ಧಿ ಹೊಂದುತ್ತಿದ್ದಾರೆ. ಈ ನಿಟ್ಟಿನಲ್ಲಿ ಈ ಬಾರಿ ಮೋದಿಗೆ ಬೆಂಬಲ ನೀಡುತ್ತಾ, ಬಿಜೆಪಿಗೆ ಮತ ಹಾಕಲು ತೀರ್ಮಾನ ಮಾಡಿದ್ದೇವೆ ಎಂದರು.

       ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿವಿಧ ಕೋಮುಗಲಭೆಗಳು ಹೆಚ್ಚಾಗಿವೆ. ಈಗಿನ ಕೇಂದ್ರ ಸರ್ಕಾರದ ಆಡಳಿತದ ಅವಧಿಗೆ ಹೋಲಿಕೆ ಮಾಡಿದರೆ ಅಂದಿಗಿಂತ ಇಂದು ಸುಮಾರು ಪ್ರಕರಣಗಳು ಕಡಿಮೆಯಾಗಿವೆ. ವಾಜಪೇಯಿಯವರು ಪ್ರಧಾನಿಯಾಗಿದ್ದ ವೇಳೆ ಮತ್ತು ಮೋದಿ ಅವರ ಆಡಳಿತದಲ್ಲಿ ಅಲ್ಪಸಂಖ್ಯಾತರ ಸಮುದಾಯಕ್ಕೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಪಸಂಖ್ಯಾತರ ಸಮಾಜದ ಬಹಳಷ್ಟು ಸಮಸ್ಯೆಗಳು ಈಡೇರಿವೆ. ದೇಶದಲ್ಲಿ ಅಲ್ಪಸಂಖ್ಯಾತರು ಸುಖಶಾಂತಿಯಿಂದ ಇದ್ದಾರೆ ಎಂದರು.

       ನರೇಂದ್ರ ಮೋದಿ ಅವರು ಆ ರೀತಿ ಪ್ರಾಶಸ್ತ್ಯ ನೀಡಿದ್ದಾರೆ. ಆದರೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸರಕಾರ ಡೋಂಗಿ ಮಾಡುತ್ತಾ, ಓಲೈಕೆ ರಾಜಕಾರಣ ಮಾಡುತ್ತಿದೆ. ಜನತೆಯನ್ನು ಎದುರಿಸಿ ಮತ ಪಡೆಯುತ್ತಿದ್ದಾರೆ. ಚುನಾವಣೆ ಹತ್ತಿರ ಬಂದಾಗ ಮಾತ್ರ ನಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಚುನಾವಣೆ ಮುಗಿದ ಮೇಲೆ ದೂರ ವಿಡುತ್ತಾರೆ. ಮತ್ತೆ ಚುನಾವಣೆ ಬಂದಾಗ ಅಲ್ಪಸಂಖ್ಯಾತರನ್ನು ಓಲೈಸಲು ಬರುತ್ತಾರೆ ಎಂದು ದೂರಿದರು.

        ದೇಶದಲ್ಲಿ ವಿದ್ಯಾವಂತ ಅಲ್ಪಸಂಖ್ಯಾತರಿದ್ದಾರೆ. ಅವರೆಲ್ಲರೂ ಮೋದಿ ಅವರ ಅಧಿಕಾರ ನೋಡಿದ್ದಾರೆ. ಆದ್ದರಿಂದ ಅವರ ನೇತೃತ್ವದಲ್ಲಿ ಆಡಳಿತ ನಡೆಸುವ ಸಾಮಥ್ರ್ಯ ಇರುವ ಜಿಲ್ಲೆಯ ಬಸವರಾಜ್ ಅವರಿಗೆ ಬೆಂಬಲ ನೀಡಿ, ಮತ ನೀಡಲಾಗುತ್ತದೆ. ಬಸವರಾಜು ಅವರನ್ನು ನಿತ್ಯ ಕಾಣಬಹುದು. ನಮ್ಮ ಸಮಸ್ಯೆಗಳನ್ನು ಅವರ ಬಳಿ ತಿಳಿಸಿ ಪರಿಹರಿಸಿಕೊಳ್ಳಬಹುದು. ಅವರ ಗೆಲುವಿನಿಂದ ನಮಗೆ ಅನುಕೂಲವಾಗಲಿದೆ ಈ ನಿಟ್ಟಿನಲ್ಲಿ ನಮ್ಮ ಮತಗಳನ್ನು ಬಿಜೆಪಿ ಪಕ್ಷಕ್ಕೆ ನೀಡಲಿದ್ದೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ರಫೀಉಲ್ಲಾಖಾನ್, ಸನಾವುಲ್ಲಾಖಾನ್, ಶಬ್ಬೀರ್ ಅಹಮ್ಮದ್, ನದೀಮ್,ಅಬ್ದುಲ್ ಪಾಷಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link