ಮೀಸಲಾತಿಗೆ ಆಗ್ರಹಿಸಿ ತಹಸಿಲ್ದಾರ್ ಗೆ ಮನವಿ

ಮಧುಗಿರಿ:

    ಪರಿಶಿಷ್ಟ ಪಂಗಡದ ನಾಯಕ ಜನಾಂಗದವರಿಗೆ ಶೇ3 ರಿಂದ 7.5ಗೆ ಮೀಸಲಾತಿಯನ್ನು ಏರಿಸುವಂತೆ ಆಗ್ರಹಿಸಿ ಮಧುಗಿರಿ ತಾಲ್ಲೂಕು ನಾಯಕ ಸಂಘದ ವತಿಯಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟಿಸಿ ತಹಸೀಲ್ದಾರ್ ನಂದೀಶ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು

      ತಾಲ್ಲೂಕು ನಾಯಕ ಸಂಘದ ಅಧ್ಯಕ್ಷ ಸಿದ್ದಗಂಗಪ್ಪ ಮಾತನಾಡಿ ಈಗಾಗಲೇ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗದವರಿಗೆ ಶೇಕಡಾ 7.5 ರಷ್ಟು ಮೀಸಲಾತಿಯನ್ನು ಔದ್ಯೋಗಿಕವಾಗಿ , ಶೈಕ್ಷಣಿಕವಾಗಿ , ರಾಜಕೀಯವಾಗಿ ಮತ್ತು ಆರ್ಥಿಕವಾಗಿ ನೀಡಿದೆ . ಆದರೆ ರಾಜ್ಯ ಸರ್ಕಾರ ಈ ಕುರಿತು ಮೀಸಲಾತಿ ಪ್ರಮಾಣ ಹೆಚ್ಚು ಮಾಡುವಲ್ಲಿ ಮೀನಾಮೇಷ ಮಾಡುತ್ತಿದೆ . ಈಗ ನಮ್ಮ ಮನವಿ ಏನೆಂದರೆ , ಹಾಲೀ ಇರುವ ಶೇಕಡಾ 3 ಮೀಸಲಾತಿ ಪ್ರಮಾಣವನ್ನು ಶೇಕಡಾ 7 . 5 % ರಷ್ಟು ಹೆಚ್ಚಳ ಮಾಡುವಂತೆ ಮತ್ತು ನಾಯಕ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇವೆ ಎಂದರು

     ಕೊಡಿಗೇನಹಳ್ಳಿ ಹೋಬಳಿ ಮುಖಂಡ ಹೆಚ್ ಹನುಮಂತರಾಯಪ್ಪ ಮಾತನಾಡಿ ಘನ ಸರ್ಕಾರವು ಈಗ ಹೆಚ್ಚಿಗೆ ಆಗಿರುವ ನಾಯಕ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ 7 . 5% ಮೀಸಲಾತಿಯನ್ನು ನಾಯಕ ಜನಾಂಗಕ್ಕೆ ನೀಡಬೇಕಾಗಿದೆ ಮಧುಗಿರಿ ತಾಲ್ಲೂಕಿನಲ್ಲಿ ವಾಸವಾಗಿರುವ ಎಲ್ಲಾ ನಾಯಕ ಜನಾಂಗದ ಪರವಾಗಿ ಘನ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಈ ಮನವಿ ಪತ್ರವನ್ನು ಸಲ್ಲಿಸುತ್ತಿದ್ದೇವೆ. ಸರ್ಕಾರವು ನಮ್ಮ ಮನವಿಯನ್ನು ಅಂಗೀಕರಿಸಿ ಆದೇಶ ಹೊರಡಿಸಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ತಾಪಂ ಸದಸ್ಯ ಪ್ರವೀಣ್ ಕುಮಾರ್ ಗೌರವಧ್ಯಕ್ಷ ರಂಗಶ್ಯಾಮಣ್ಣ. ಕಾರ್ಯದರ್ಶಿ ಶಂಕರನಾರಾಯಣ ಬಾಬು. ಚಂದನ್. ವಕೀಲರಾದ ಪಾಂಡುರಂಗಯ್ಯ ಶ್ರೀನಿವಾಸ್, ಮುಖಂಡರಾದ ಜಗದೀಶ್, ಗರಣಿ ಗೀರೀಶ್. ಚಲಪತಿ. ಮಾಜಿ ಪುರಸಭಾ ಸದಸ್ಯೆ ಭಾಗ್ಯಮ್ಮ, ಚಂದ್ರಮ್ಮ ನಾಗರತ್ನ, ಲಕ್ಷ್ಮಮ್ಮ, ಸಂಜೀವಮೂರ್ತಿ, ಚಲಪತಿ, ಪ್ರೂಟ್ ಕೃಷ್ಣ, ತಿಮ್ಮರಾಜು, ಗೋಪಾಲ್, ಅಶ್ವತ್ಥಪ್ಪ, ಗುಟ್ಟೆ ರಂಗನಾಥ್, ನರಸೀಯಪ್ಪ, ಆಶ್ವತ್ಥನಾರಾಯಣ್, ನಾಗರಾಜು, ಲೋಕೇಶ್, ಬಿ.ಪಿ.ನಾಗರಾಜು, ಜಿ.ವಿ.ಗೀರೀಶ್ ಬಾಬು ಸೇರಿದಂತೆ ಸಮೂದಾಯದ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link