ಹರಪನಹಳ್ಳಿ
ಹರಪನಹಳ್ಳಿ ತಾಲ್ಲೂಕಿನ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ರೂ.1,47,63,033 ಅನುಷ್ಠಾನದಲ್ಲಿ ಕೆಲವು ಗಂಭೀರ ಸ್ವರೂಪ ನ್ಯೂನತೆಗಳು ಕಂಡುಬಂದಿದ್ದು ಹರಪನಹಳ್ಳಿ ತಾಲ್ಲೂಕಿನ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಶಂಕರನಾಯ್ಕ್, ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶೇಶಿ (ಹಾಲಿ ಪ್ರಾದೇಶಿಕ ಅರಣ್ಯ ವಿಭಾಗ ದಾವಣಗೆರೆ) ಹಾಗೂ ಹೊರಗುತ್ತಿಗೆ ತಾಂತ್ರಿಕ ಸಹಾಯಕ ಕುಮಾರ ನಾಯ್ಕ್ ಅವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗಿದೆ.
ಶನಿವಾರ ತಡ ರಾತ್ರಿ ಹರಪನಹಳ್ಳಿ ತಾಲ್ಲೂಕು ಪಂಚಾಯ್ತಿಯ ಕಾರ್ಯನಿರ್ವಹಾಣಾಧಿಕಾರಿ ಮಮತಾ ಹೊಸಗೌಡರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮಹಾತ್ಮ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆಂದು ನೀಡಿರುವ ದೂರಿನನ್ವಯ ಕ್ರಿಮಿನಲ್ ಮೊಕದ್ದಮೆಯನ್ನು ಹರಪನಹಳ್ಳಿ ಪಟ್ಟಣ ಪೊಲೀಸ್ ಠಾಣೆ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ.
ತಾಲೂಕಿನ ಕಂಚಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗ ಒಟ್ಟು 62,29,925 ರೂ ಗಳನ್ನು ಹಾಗೂ ಮಾಡ್ಲಿಗೇರಿ ಮತ್ತು ತೊಗರಿಕಟ್ಟೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಾಮಗಾರಿಗಳ 8,53,4008 ರೂಗಳು ಸೇರಿ ಒಟ್ಟಾರೆ 1,47,64,033 ರೂಗ ಹಗರಣದಲ್ಲಿ ಈ ಮೂವರು ಅಧಿಕಾರಿಗಳ ಪಾಲುದಾರಿಕೆ ಹೊಂದಿದ್ದಾರೆ ಎಂಬ ದೂರುಗಳಿವೆ. ಮೇಲಾಧಿಕಾರಿಗಳ ಆದೇಶದನ್ವಯ ಪರಿಶೀಲನೆ ನೆಡೆಸಿ ತಾಪಂ ಇಓ ಪ್ರಕರಣ ದಾಖಲೆಗೆ ದೂರು ನೀಡಿದ್ದಾರೆ.
ಪ್ರತ್ಯೇಕವಾಗಿ ಕಂಚಿಕೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹಗರಣಕ್ಕಾಗಿ ಅರಸಿಕೆರೆ ಪೊಲೀಸ್ ಠಾಣೆಯಲ್ಲಿ ಹಾಗೂ ಮಾಡ್ಲಗೇರಿ ಮತ್ತು ತೊಗರಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆರೆಗಾ ಕಾಮಗಾರಿ ಹಗರಣಕ್ಕಾಗಿ ಹರಪನಹಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.ಈ ಅಧಿಕಾರಿಗಳ ವಿರುದ್ಧ ಅ.11 ರಂದು ತಾಲ್ಲೂಕು ಪಂಚಾಯ್ತಿಯ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿ ವಿಚಕ್ಷಣ ದಳದಿಂದ ತನಿಖೆಯಾಗಬೇಕು ಎಂದು ತೀರ್ಮಾನಿಸಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ