ಚಿತ್ರದುರ್ಗ;
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಚಿತ್ರದುರ್ಗವತಿಯಿಂದ ನಡೆದ ಮಿಷನ್ ಸಾಹಸಿ ಒಂದು ದಿನದ ಕಾರ್ಯಾಗಾರವನ್ನು ಇಂದು ಬೆಳಗ್ಗೆ 11 ಗಂಟೆಗೆ ಸೆಂಟ್ ಮೇರಿಸ್ ಕಾಲೇಜಿನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀಮತಿ ಸುಮನ ಎಸ್ ಅಂಗಡಿ ಹೆಣ್ಣು ಮನೆಗೆ ಅಷ್ಟೇ ಸಿಮೀತವಲ್ಲ ಎಲ್ಲಾ ಕ್ಷೇತ್ರದಲ್ಲೂ ಪ್ರಾಮುಖ್ಯತೆ ಪಡೆಯಬೇಕು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕೆಂದರೆ ಪಠ್ಯ ಪುಸ್ತಕಗಳಲ್ಲಿ ಇಂತಹ ವಿಷಯಗಳು ಸಿಗುವುದಿಲ್ಲ ನಮಗೆ ಜ್ಞಾನ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೇ ಆತ್ಮ ರಕ್ಷಣೆಗೆ ನೀಡಬೇಕಾಗಿದೆ ಎಂದರು.
ನಂತರ ಪ್ರಸ್ತಾವಿಕ ನುಡಿಯನ್ನಾಡಿದ ಭಾರ್ಗವಿ ದ್ರಾವಿಡ್ ರವರು ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆಗಾಗಿ ಎಲ್ಲಾ ರೀತಿಯ ತರಬೇತಿಯನ್ನು ಪಡೆಯಬೇಕಾಗುತ್ತದೆ ಮೊದಲು ನಮ್ಮ ರಕ್ಷಣೆ ನಾವೇ ಮಾಡಿಕೊಳ್ಳಬೇಕು ಸಮಾಜದಲ್ಲಿ ಎಲ್ಲಾ ರೀತಿಯ ದೌರ್ಜನ್ಯಗಳು ಅತ್ಯಾಚಾರಗಳು ಹಾಗೂ ಕೊಲೆಗಳಂತಹ ಕೃತ್ಯಗಳು ನಡೆಯುತ್ತಿರುವುದು ನಮ್ಮ ದೌರ್ಬಲ್ಯಕ್ಕೇ ಕಾರಣ. ಆದ ಕಾರಣ ನಾವು ಮಾಸಿಕವಾಗಿ ಹಾಗೂ ದೈಹಿಕವಾಗಿ ಸಧೃಡವಾಗಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರಜಿನಿಜಾಂತ್ ಪ್ರಾಂತ ವಿದ್ಯಾರ್ಥಿನಿ ಸಹಾ ಪ್ರಮುಖ, ಎ.ವಿ.ಬಿ.ಪಿ ಕರ್ನಾಟಕ ಹಾಗೂ ಶಶಿಕಲಾ ಅಧ್ಯಾಪಕರು ಸೆಂಟ್ ಮೇರಿಸ್ ಕಾಲೇಜು ಹಾಗೂ ಜಿಲ್ಲಾ ಸಹ ಸಂಚಾಲಕ ಕೃಷ್ಣಮೂರ್ತಿ ಕಾರ್ಯಕರ್ತರಾದ ಸ್ಪೂರ್ತಿ, ನಿಶಾ, ನೀತು, ಸತೀಶ್, ನಗರ ಕಾರ್ಯದರ್ಶಿ ಸುನಿಲ್, ನವೀನ್ ಹಾಜರಾಗಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ