ದಾವಣಗೆರೆ:
ನಗರದ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಮಲ್ಲಿಕಾ-2019ರ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಾನಪದ ಕಡದಕಟ್ಟೆ ತಿಮ್ಮಪ್ಪ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯು ಒಬ್ಬ ಅಬ್ದುಲ್ ಕಲಾಂ ಅಥವಾ ವಿಶ್ವೇಶ್ವರಾಯರಾಗಿ ಹೊರಹೊಮ್ಮಿ ತಮ್ಮ ಪೆÇೀಷಕರ ಆತ್ಮತೃಪ್ತಿಪಡಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಮೆಂಬರ್ ಟ್ರಸ್ಟಿ ಶ್ರೀಮತಿ ಜಿ.ಎಸ್.ಗಾಯಿತ್ರಿ ಸಿದ್ದೇಶ್ವರ ಮಾತನಾಡಿ, ಶೇ.90 ಮತ್ತು ಅದಕ್ಕಿಂತ ಹೆಚ್ಚು ಅಂಕಗಳಿಸುವ ವಿಧ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಕೊಡಮಾಡುವ ಬಂಗಾರದ ಪದಕಗಳ ಸಂಖ್ಯೆಗಳಲ್ಲಿ ಮುಂದಿನ ವರ್ಷಗಳಲ್ಲಿ ಗಣನೀಯವಾದ ಏರಿಕೆಯನ್ನು ಕಾಣಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಶೇ.90 ಕ್ಕೂ ಹೆಚ್ಚು ಅಂಕ ಗಳಿಸಿದ ನೀಲಾಂಬಿಕಾ ಜಿ ಆರ್, ನಿರ್ಮಲ ಅನಂತ್ ಹೆಗ್ಡೆ, ಅಪೂರ್ವ ಎಂ ಆರ್, ಪೂಜಾ ವಾಲಿಶೆಟ್ಟರ್, ಟಿ.ಶ್ರುತಿ, ಭೂಮಿಕಾ ಭಟ್, ಬಿಂದು ಕೆ.ಓ, ಬಾಲಗಣೇಶ ಇವರುಗಳಿಗೆ ಚಿನ್ನದ ಪದಕಗಳನ್ನು ಶ್ರೀಶೈಲ ಎಜ್ಯುಕೇಷನ್ ಟ್ರಸ್ಟ್‍ನ ಶ್ರೀಮತಿ ಜಿ ಎಸ್ ಗಾಯತ್ರಿ ಸಿದ್ದೇಶ್ವರ ನೀಡಿ ಸನ್ಮಾನಿಸಿದರು. ಅಲ್ಲದೆ, ಮೋನಿಷಾ ಜಿ, ಬಿಂದುಶ್ರೀ ಟಿ ಯು ಅವರಿಗೆ ತಲಾ 10 ಸಾವಿರ ರೂ. ನಗದು ಬಹುಮಾನ ನೀಡಿ ಗೌರವಿಸಲಾಯಿತು.
10ನೇ ರ್ಯಾಂಕ್ ಪಡೆದಿರುವ ಸಿವಿಲ್ ವಿಭಾಗದ ಪೃಥ್ವಿರಾಜ್ ಎಸ್ ಆರ್ ಅವರಿಗೆ ಸಂಸ್ಥೆಯು 4 ವರ್ಷದ ಬೋಧನಾ ಶುಲ್ಕ 1,54,000 ರೂ.ಗಳನ್ನು ಮರುಪಾವತಿಸುವ ಮೂಲಕ ಸನ್ಮಾನಿಸಲಾಯಿತು.ಈ ಎರಡು ದಿನಗಳ ವಾರ್ಷಿಕೋತ್ಸವದಲ್ಲಿ 22 ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.ಇದೇ ವೇಳೆ, ಅತಿಥಿಗಳಾದ ಕಡದಕಟ್ಟೆ ತಿಮ್ಮಪ್ಪ ಹಾಗೂ ರಜತ್ ಹೆಗ್ಡೆ ಇವರುಗಳಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಅಭಿನಂದಿಸಲಾಯಿತು.
ನಂತರ ಕನ್ನಡದ ಜನಪ್ರಿಯ ಕಾರ್ಯಕ್ರಮವಾದ ಜಿ ಕನ್ನಡ ವಾಹಿನಿಯ ಸ ರಿ ಗ ಮ ಪ-13 ರ ಗಾಯಕ ರಜತ್ ಹೆಗ್ಡೆ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ಪಿ. ಪ್ರಕಾಶ್ ವಹಿಸಿದ್ದರು. ಮಲ್ಲಿಕಾ ಮುಖ್ಯ ಸಂಯೋಜಕ ಡಾ. ಸುನೀಲ್ ಕುಮಾರ್ ಬಿ ಎಸ್, ಉಪ ಪ್ರಾಂಶುಪಾಲ ಡಾ. ಬಿ ಆರ್ ಶ್ರೀಧರ್, ಎಂ.ಬಿ.ಎ ವಿಭಾಗದ ನಿರ್ದೇಶಕ ಡಾ. ಬಿ ಬಕ್ಕಪ್ಪ, ಜಿ.ಎಂ.ಐ.ಟಿ. ಕಾಲೇಜಿನ ಆಢಳಿತಾಧಿಕಾರಿ ವೈ.ಯು. ಸುಭಾಷ್‍ಚಂದ್ರ, ಕಾರ್ಯದರ್ಶಿ ಜಿ.ಎಂ.ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.