ಲಾಕ್‍ಡೌನ್‍ಗೆ ದೇವನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ

ದಾವಣಗೆರೆ

     ದಿನದಿಂದ ದಿನಕ್ಕೆ ವೇಗವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಘೋಷಣೆಯಾಗಿರುವ ಭಾನುವಾರದ ಲಾಕ್‍ಡೌನ್‍ಗೆ ಮಧ್ಯ ಕರ್ನಾಟಕ ದೇವನಗರಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

      ಹೌದು… ಕಿಲ್ಲರ್ ಕೊರೊನಾ ಸೋಂಕು ನಿಯಂತ್ರಣ ಕ್ರಮವಾಗಿ ಘೋಷಣೆಯಾಗಿರುವ ಭಾನುವಾರದ ಲಾಕ್‍ಡೌನ್‍ಗೆ ಕಳೆದ ವಾರ ವ್ಯಾಪಕ ಸ್ಪಂದನೆ ವ್ಯಕ್ತವಾಗಿತ್ತು. ಆದರೆ, ಈ 2ನೇ ಭಾನುವಾರದ ಲಾಕ್‍ಡೌನ್‍ಗೆ ನಗರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.ಭಾನುವಾರದ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಹೀಗಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಜನರು ಇಲ್ಲದೆ ಬಿಕೋ ಎನುತ್ತಿತ್ತು. ಅಲ್ಲದೆ, ಕೆಎಸ್‍ಆರ್‍ಟಿಸಿ ಬಸ್, ಆಟೋ, ಕ್ಯಾಬ್‍ಗಳು ರಸ್ತೆಗಳಿಗೆ ಇಳಿಯದ ಕಾರಣ ರಸ್ತೆಗಳು ಖಾಲಿ, ಖಾಲಿಯಾಗಿ ಮೈದಾನಗಳಂತೆ ಕಂಡು ಬರುತ್ತಿದ್ದವು. ಆದರೆ, ಸೊಪ್ಪು ಮಾರುವ ಮಹಿಳೆಯರು ಮತ್ತು ಕೂಲಿ ಕಾರ್ಮಿಕರು ಕಾಲ್ನಡಿಗೆಯಲ್ಲಿಯೇ ನಡೆದುಕೊಮಡು ಹೊಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

      ಆದರೆ, ಅಲ್ಲೊಂದು ಇಲ್ಲೊಂದು ಅಟೋಗಳು ಓಡಾಡುತ್ತಿದ್ದ ದೃಶ್ಯಗಲು ಅಲ್ಲಲ್ಲಿ ಕಂಡು ಬಂದವು. ಅಲ್ಲದೆ, ದ್ವಿ ಚಕ್ರ ವಾಹನಗಳ ಸಂಚಾರ ತುಸು ಹೆಚ್ಚಾಗಿಯೇ ಇತ್ತು. ಹೀಗಾಗಿ ಅನಾವಶ್ಯಕವಾಗಿ ದ್ವಿ ಚಕ್ರ ವಾಹನಗಳಲ್ಲಿ ರೌಂಡ್ ಹಾಕುತ್ತಿದ್ದವರನ್ನು ಪೊಲೀಸರು ಬುದ್ಧಿ ಹೇಳಿ ಮನೆಗೆ ಕಳುಹಿಸುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಮಡು ಬಂದವು. ಅದರಲ್ಲೂ ಮಾಸ್ಕ್, ಹೆಲ್ಮೆಟ್ ಧರಿಸದೆ ಅನಾವಶ್ಯಕವಾಗಿ ರಸ್ತೆಗೆ ಇಳಿದಿದ್ದ ದ್ವಿಚಕ್ರ ಸವಾರರಿಗೆ ಬಿಸಿ ಮುಟ್ಟಿಸಲು ಸಂಚಾರಿ ಪೊಲೀಸರು ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸ್ಥಳ ದಂಡ ಹಾಕುತ್ತಿದ್ದ ದೃಶ್ಯಗಳು ಕಂಡು ಬಂತು.

     ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಟ್ಟೆ ಅಂಗಡಿಗಳು, ಸೆಲ್ಯೂನ್ ಶಾಪ್‍ಗಳು, ಮೊಬೈಲ್ ಶಾಪ್‍ಗಳು, ಗ್ಯಾರೇಜ್, ಮದ್ಯದ ಅಂಗಡಿ ಸೇರಿದಂತೆ ಇತರೆ ಉದ್ಯಮಗಳು ಬಂದ್ ಆಗಿದ್ದವು. ಆದರೆ, ಕಿರಾಣಿ ಅಂಗಡಿಗಳು, ಹಾಲಿನ ಅಂಗಡಿಗಳು, ಮಾಂಸ, ಮೀನಿನ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು ಎಂದಿನಂತೆ ತೆರೆದಿದ್ದವು.

    ಭಾನುವಾರದ ಸಂತೆ ಲಾಕ್‍ಡೌನ್ ಹಿನ್ನೆಲೆಯಲ್ಲಿ ರದ್ದಾಗಿದ್ದರೂ ಅಲ್ಲಲ್ಲಿ ತಳ್ಳುವ ಗಾಡಿಗಳಲ್ಲಿ ತರಕಾರಿ, ಹಣ್ಣುಗಳನ್ನು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದ ಮಾರ್ಕೇಟ್ ಪ್ರದೇಶದಲ್ಲಿ ಸಾಮಾನ್ಯವಾಗಿತ್ತು. ಅಲ್ಲದೆ, ಕಾಯಿ ಪೇಟೆ, ಗಡಿಯಾರ ಕಂಬ. ಕೆ.ಆರ್.ಮಾರುಕಟ್ಟೆ, ಹಳೇ ಡಿಸಿ ಕಚೇರಿ ಸೇರಿದಂತೆ ಇತರೆ ಮಾರುಕಟ್ಟೆ ಪ್ರದೇಶಗಳಲ್ಲಿ ವ್ಯಾಪಾರಸ್ಥರು ತರಕಾರಿಗಳನ್ನು ಹಾಕಿಕೊಂಡಿ ವ್ಯಾಪಾರಕ್ಕೆ ಕುಂತಿದ್ದರು. ಆದರೆ, ಹೇಳಿಕೊಳ್ಳುವ ರೀತಿ ವ್ಯಾಪಾರ ನಡೆಯದ ಹಿನ್ನೆಲೆಯಲ್ಲಿ ವ್ಯಾಪಾರಸ್ಥರು ಗ್ರಾಹಕರಿಗಾಗಿ ಕಾದು, ಕಾದು ಸುಸ್ತಾದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link