ಶಾಸಕರಿಗೆ ಸಂಸದರನ್ನು ಟೀಕಿಸುವ ನೈತಿಕತೆ ಇಲ್ಲ; ತಾಳಿಕಟ್ಟೆ ಗಂಗಾಧರ್

ಹೊಳಲ್ಕೆರೆ

         ಲೋಕಸಭಾ ಸದಸ್ಯರಾದ ಬಿ.ಎನ್.ಚಂದ್ರಪ್ಪ ಅವರು ಈ ಕ್ಷೇತ್ರ ಕಂಡ ಅತ್ಯಂತ ಕ್ರೀಯಾಶೀಲ ಸಂಸದರು. ಸೌಮ್ಯ ಸ್ವಭಾವದವರಾಗಿದ್ದು, ಅವರನ್ನು ಸೋಮಾರಿ ಎಂದು ಟೀಕಿಸಿರುವ ಹೊಳಲ್ಕೆರೆಯ ಶಾಸಕ ಎಂ.ಚಂದ್ರಪ್ಪ ಅವರ ಹೇಳಿಕೆಯನ್ನು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಗಂಗಾಧರ್ ಖಂಡಿಸಿದ್ದಾರೆ

       ಬಿ.ಎನ್.ಚಂದ್ರಪ್ಪ ಅವರು ಸಂಸದರಾದ ಬಳಿಕ ಇಡೀ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ ಐದು ವರ್ಷಗಳ ಕಾಲ ಕ್ಷೇತ್ರದಲ್ಲಿ ಸುತ್ತಾಡಿ ಜನರ ಸಮಸ್ಯೆಗಳನ್ನು ಆಲಿಸಿ ಸಾಧ್ಯವಾದಷ್ಟು ಬಗೆಹರಿಸಿದ್ದಾರೆ. ಸಂಸದರ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿದ್ದಾರೆ. ಎಲ್ಲೂ ಲೋಪವಾಗದಂತೆ ನೋಡಿಕೊಂಡಿದ್ದಾರೆ. ಎಲ್ಲಾ ವರ್ಗದ ಜನರೊಂದಿಗೆ ಒಡನಾಟವಿಟ್ಟುಕೊಂಡು ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇಂತಹ ಒಬ್ಬ ಕ್ರೀಯಾಶೀಲ ಸಂಸದರನ್ನು ಈ ಕ್ಷೇತ್ರ ನೋಡಿಯೇ ಇಲ್ಲ. ಆದರೂ ರಾಜಕೀಯ ಕಾರಣಕ್ಕಾಗಿ ಟೀಕಿಸಿರುವುದು ಸರಿಯಾದ ನಡವಳಿಕೆಯಲ್ಲವೆಂದು ಬಿ.ಗಂಗಾಧರ್ ಹೇಳಿದ್ದಾರೆ

        ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿಯೇ ಸಾಮಾನ್ಯ ಜನರ ಕೈಗೆ ಸಿಗುವಂತಹ ಸಂಸದರು ಯಾರೂ ಆಯ್ಕೆಯಾಗಿರಲಿಲ್ಲ. ತಮ್ಮ ಸಂಸದರ ನಿಧಿಯ ಜೊತೆ ರಾಜ್ಯ ಸರ್ಕಾರದ ಅನುದಾನವನ್ನೂ ತಂದು ಅಭಿವೃದ್ದಿಗೆ ಶ್ರಮಿಸಿದ್ದಾರೆ. ಆದರೆ ಹೊಳಲ್ಕೆರೆಯ ಶಾಸಕರು ಸಾಮಾನ್ಯ ಜನರ ಜೊತೆ ಬೆರೆಯುವ ಗುಣ ಬೆಳೆಸಿಕೊಂಡಿಲ್ಲ. ಮೊನ್ನೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಹೆಸರಿನಲ್ಲಿ ಅವರು ಆಯ್ಕೆಯಾಗಿದ್ದಾರೆಯೇ ಹೊರೆತು ತಮ್ಮ ಸಾಮಥ್ರ್ಯದಿಂದ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಗಂಗಾಧರ್ ನುಡಿದಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link