ಎಲ್ಲಾ ಗ್ರಾಮಗಳಿಗೂ ಶೌಚಾಲಯದ ಸೌಲಭ್ಯದ ಜೊತೆಗೆ ನಿವೇಶನದ ಭಾಗ್ಯ: ಶಾಸಕ ರಘುಮೂರ್ತಿ.

ಚಳ್ಳಕೆರೆ

     ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಪ್ರತಿಯೊಂದು ಗ್ರಾಮಕ್ಕೂ ಸ್ಮಶಾನ ಹಾಗೂ ನಿವೇಶನ ರಹಿತರಿಗೆ ನಿವೇಶವನ್ನು ಗುರುತಿಸುವ ನಿಟ್ಟಿನಲ್ಲಿ ಗ್ರಾಮಲೆಕ್ಕಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಕಂದಾಯಾ ಇಲಾಖೆ ಅಧಿಕಾರಿಗಳು ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ಕಾರ್ಯನಿರ್ವಹಿಸುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ನೀಡಿದರು.

     ಅವರು, ಶನಿವಾರ ಇಲ್ಲಿನ ತಾಲ್ಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಗ್ರಾಮಲೆಕ್ಕಾಧಿಕಾರಿಗಳ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಂಡು ಕ್ಷೇತ್ರ ವ್ಯಾಪ್ತಿಯಲ್ಲಿ ಈ ಎರಡೂ ಪ್ರಮುಖ ಕಾರ್ಯಗಳು ಯಾವುದೇ ಲೋಪವಿಲ್ಲದಂತೆ ನಡೆಯಬೇಕಿದ್ದು, ಇದಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ರಜಾ ಸೇರಿದಂತೆ ಯಾವುದೇ ರೀತಿಯ ಕಾರಣ ತಿಳಿಸಿದೆ ಯಾವ ಗ್ರಾಮದ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನಿದೆ ಎಂಬುವುದನ್ನು ನಿಖರವಾಗಿ ದಾಖಲೆ ಸಹಿತ ಪತ್ತೆ ಹಚ್ಚಬೇಕು. ಈ ನಿಟ್ಟಿನಲ್ಲಿ ಮತ್ತೊಮ್ಮೆ ಡಿ.21ರಂದು ಅಧಿಕಾರಿಗಳ ಸಭೆ ಕರೆದು ಸೌಲಭ್ಯಗಳನ್ನು ನೀಡುವ ಕುರಿತು ಮುಕ್ತವಾಗಿ ಚರ್ಚಿಸಲಾಗುವುದು ಎಂದರು.

      ಪ್ರಸ್ತುತ ಇಲ್ಲಿನ ತಾಲ್ಲೂಕು ಕಚೇರಿಯ ಕಟ್ಟಡ ಕೆಲವು ಭಾಗಗಳಲ್ಲಿ ಬಿರುಕು ಬಿಟ್ಟಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನೆಲೆಯಲ್ಲಿ ತಾಲ್ಲೂಕು ಕಚೇರಿಯ ಕಟ್ಟಡದ ನಿರ್ಮಾಣ ಕಾರ್ಯ ಸರ್ಕಾರ 87 ಲಕ್ಷ ಮಂಜೂರು ಮಾಡಿದ್ದು, ಈ ಬಗ್ಗೆ ಯೋಜನೆಯನ್ನು ತಯಾರಿಸಿಕೊಡುವಂತೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಲಕ್ಷ್ಮನಾರಾಯಣರವರಿಗೆ ಶಾಸಕರು ಸೂಚಿಸಿದರು.

     ಇತ್ತೀಚಿಗಷ್ಟೇ ನಗರಸಭೆಯ ಸಭಾಂಗಣದಲ್ಲಿ ಬಜೆಟ್ ಪೂರ್ವಭಾವಿ ಸಭೆ ನಡೆಸಿದ್ದು, ಸಭೆಯ ಬಗ್ಗೆ ಮಾಹಿತಿ ನೀಡದ ಪ್ರಭಾರ ಪೌರಾಯುಕ್ತ ಪಾಲಯ್ಯನವರ ಕ್ರಮದ ಬಗ್ಗೆ ಅಸಮದಾನ ವ್ಯಕ್ತ ಪಡಿಸಿದ ಶಾಸಕರು, ನಗರದ ಅಭಿವೃದ್ಧಿಯಲ್ಲಿ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಬೇಕಿದೆ. ಪ್ರಸ್ತುತ ನಗರಸಭೆಯಲ್ಲಿರುವ ಎಲ್ಲಾ ಸದಸ್ಯರು ಶೀಘ್ರದಲ್ಲೇ ಅಧಿಕಾರಿವನ್ನು ಪಡೆಯಲಿದ್ದು, ಸರ್ಕಾರದ ವಿವಿಧ ಯೋಜನೆಗಳನ್ನು ಜಾರಿಗೊಳಿಸಲು ಎಲ್ಲಾ ಸದಸ್ಯರಿಗೂ ಸಮಾನ ಅವಕಾಶ ನೀಡುವಂತೆ ಶಾಸಕರು ಪ್ರಭಾರ ಪೌರಾಯುಕ್ತರಿಗೆ ಸೂಚಿಸಿದರು.

     ನಗರ ವ್ಯಾಪ್ತಿಯಲ್ಲೂ ಸಹ ನಿವೇಶನ ರಹಿತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದ್ದು ಇನ್ನೊಮ್ಮೆ ನಿವೇಶನ ರಹಿತರ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಪ್ರಭಾರ ಪ್ರೌರಾಯುಕ್ತರಿಗೆ ಸೂಚಿಸಿದ ಶಾಸಕರು ನಗರ ವ್ಯಾಪ್ತಿಯಲ್ಲಿ ನಿವೇಶನ ರಹಿತರೆಲ್ಲರೂ ನಿವೇಶನ ಪಡೆಯುವಂತಹ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.

     ನಗರದ ಬಳ್ಳಾರಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಜಿಟಿಟಿಸಿ ಕೇಂದ್ರದ ಕಾಮಗಾರಿಯನ್ನು ಸಹ ಶಾಸಕರು ವೀಕ್ಷಿಸಿ ಕೆಲವೊಂದು ಬದಲಾವಣೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಜಿಟಿಟಿಸಿ ಕೇಂದ್ರದ ಹಿಂಭಾಗದಲ್ಲೇ ನೂತನವಾಗಿ ಅಸ್ವಸ್ಥಿತ್ವಕ್ಕೆ ಬಂದಿರುವ ಹೊಸ ಬಡಾವಣೆಯ ನಿವಾಸಿಗಳನ್ನು ಭೇಟಿ ಮಾಡಿ ಅಲ್ಲಿನ ಕುಂದುಕೊರತೆಗಳ ಬಗ್ಗೆಯೂ ಸಹ ಚರ್ಚೆ ನಡೆಸಿದರು. ಕಳೆದ ವರ್ಷ ವೆಂಕಟೇಶ್ವರ ನಗರದಲ್ಲಿ ನಡೆದ ಅಗ್ನಿದುರಂತದ ಸುಮಾರು 35ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿಗೆ ಸ್ಥಳಾಂತರಿಸಿದ್ದು ಮೂಲಭೂತ ಸೌಕರ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು.

     ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಪ್ರಭಾರ ಕಂದಾಯಾಧಿಕಾರಿ ರಾಜೇಶ್, ನಗರಸಭಾ ರಮೇಶ್‍ಗೌಡ, ವೈ.ಪ್ರಕಾಶ್, ಟಿ.ಮಲ್ಲಿಕಾರ್ಜುನ, ಮುಖಂಡರಾದ ಪಾಲಯ್ಯ, ಕೃಷ್ಣ, ಆರ್.ಪ್ರಸನ್ನಕುಮಾರ್, ಭರಮಣ್ಣ ಮುಂತಾದವರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap