ಗುತ್ತಿಗೆದಾರನಿಗೆ ಗ್ರಹಚಾರ ಬಿಡಿಸಿದ ಶಾಸಕ…!!!

ಮಂಡ್ಯ: 

     ರೈತರ ಪಾಲಿಗೆ ಭಾಗ್ಯದ ನಿಧಿಯಂತಾಗಿರುವ ಗಂಗಾಕಲ್ಯಾಣ ಯೋಜನೆ ಫಲಾನುಭವಿಗಳಿಗೆ ನೀಡುತ್ತಿರುವ ಸಲಕರಣೆಗಲು  ತೀರಾ ಕಳಪೆಯದ್ದಾಗಿದೆ ಎಂದು ಶಾಸಕರು ಗುತ್ತಿಗೆದಾರನ ಮೇಲೆ ಗರಂ ಆದ ಘಟನೆ ನಡೆದಿದೆ . ‘

    

ಇಂತಹ  ಸಾಮಗ್ರಿಗಳನ್ನು ಸರಬರಾಜು ಮಾಡಿದ್ದಕ್ಕೆ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ, ಸರಬರಾಜು ಗುತ್ತಿಗೆದಾರನನ್ನು  ತರಾಟೆಗೆ ತೆಗೆದುಕೊಂಡ ಘಟನೆ ಇಂದು ವರದಿಯಾಗಿದೆ .

    ಮಂಡ್ಯ ಜಿಲ್ಲೆಯ ಕೆಆರ್ ಪೇಟೆಯಲ್ಲಿ,ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯ ಅಡಿಯಲ್ಲಿ 26ಕ್ಕೂ ಹೆಚ್ಚಿನ ವಿವಿಧ ಫಲಾನುಭವಿಗಳಿಗೆ ಪಂಪ್‍ಸೆಟ್ ಸರಬರಾಜು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮಕ್ಕೆ ಸರಬರಾಜು ಮಾಡಿದ್ದ ಪೈಪುಗಳು ತಿರಾ ಕಳಪೆಯದ್ದಾಗಿದೆ ಎಂದು ತಿಳಿದು ಬಂದಿದೆ.

      ಗುತ್ತಿಗೆದಾರ ಸರಬರಾಜು ಮಾಡಿದ್ದ ಪೈಪುಗಳು ಐಎಸ್‍ಐ ಗುಣಮಟ್ಟದ ಮುದ್ರೆಯಿಲ್ಲದ ಕಳಪೆ ಗುಣಮಟ್ಟದ ವಿವಿಧ ಸಾಮಗ್ರಿಗಳನ್ನು ತಪಾಸಣೆ ನಡೆಸಿದ ಶಾಸಕ ಡಾ.ನಾರಾಯಣಗೌಡ ಸರಬರಾಜುದಾರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ,ಸರಬರಾಜು ಮಾಡಲು ಬಂದಿದ್ದವನಿಗೆ, ಯಾರ ಮನೆ ಹಾಳು ಮಾಡಲು ಬಂದಿದ್ದೀಯಾ ನೀನು, ರೈತರಿಗೆ ಸರ್ಕಾರ ದುಡ್ಡು ಕೊಡುತ್ತಿದೆ. ಬಂದು ದುಡ್ಡು ಹೊಡೆದುಕೊಂಡು ಹೋಗಲು ನಿಮ್ಮ ಮನೆ ಆಸ್ತಿ ಅಲ್ಲ ಇದು. ರೈತರ ಮನೆ ಹಾಳು ಮಾಡುತ್ತೀರಾ ನೀವು ಎಂದು ತರಾಟೆಗೆ ತೆಗೆದುಕೊಂಡು ಆಕ್ರೋಶ ಹೊರಹಾಕಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ