ಹರಪನಹಳ್ಳಿ:
ತಾಲ್ಲೂಕಿನ ಹಲವಾಗಲು ಪೊಲೀಸ್ ಠಾಣೆಗೆ ಸೋಮವಾರ ಭೇಟಿ ನೀಡಿದ ಶಾಸಕ ಜಿ.ಕರುಣಾಕರರೆಡ್ಡಿ ನೂತನ ಪೊಲೀಸ್ ವಸತಿಗೃಹ ಕಟ್ಟಡ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಪಿಎಸ್‍ಐ ಟಿ.ಎನ್.ತಿಪ್ಪೇಸ್ವಾಮಿ ಮಾತನಾಡಿ, ಹಲವಾಗಲು ಪೊಲೀಸ್ ಠಾಣೆಗೆ ವಿಶಾಲವಾದ ಸ್ಥಳಾವಕಾಶವಿದೆ. ಪೊಲೀಸ್ ಕವಾಯತು ಹಾಗೂ ಕ್ರೀಡೆಗಳಿಗೆ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡಿಕೊಟ್ಟರೆ ಅನುಕೂಲವಾಗುವುದು ಎಂದು ಮನವಿ ಮಾಡಿದರು.
ಶಾಸಕ ಕರುಣಾಕರರೆಡ್ಡಿ ಮಾತನಾಡಿ, ಠಾಣೆಗೆ ಕಾಂಪೌಂಡ್ ನಿರ್ಮಾಣ ಕುರಿತಂತೆ ಗೃಹ ಮಂಡಳಿಗೆ ಪ್ರಸ್ತಾವನೆ ಕಳುಹಿಸಲಾಗುವುದು. ಠಾಣೆ ವಿಸ್ತಿರ್ಣದ ಬಗ್ಗೆ ಮಾಹಿತಿ ನೀಡುವಂತೆ ಪಿಎಸ್‍ಐ ಅವರಿಗೆ ಸೂಚಿಸಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ಮುಖಂಡರಾದ ಆರ್.ಲೋಕೇಶ್, ಲಿಂಬ್ಯಾನಾಯ್ಕ, ಮಲ್ಲೇಶ್, ರಾಘವೇಂದ್ರ ಶೆಟ್ಟಿ, ಸತ್ತೂರು ಹಾಲೇಶ್, ಕೃಷ್ಣಾ, ಕರಿಗೌಡ, ಸಂತೋಷ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ