ತಾಲ್ಲೂಕಿನ ಗಡಿಭಾಗಕ್ಕೆ ಶಾಸಕರ ಭೇಟಿ..!

ಚಳ್ಳಕೆರೆ

       ಕಳೆದ ಹಲವಾರು ದಿನಗಳ ಆರೋಗ್ಯ, ಆರಕ್ಷಕ ಹಾಗೂ ಇತರೆ ಇಲಾಖೆಗಳ ಸಹಕಾರದಿಂದ ಈ ಭಾಗದಲ್ಲಿ ಕೊರೋನಾ ವೈರಾಣು ವ್ಯಾಪಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದ ವ್ಯಕ್ತಿಯೊಬ್ಬರು ಆಂಧ್ರ ಪ್ರದೇಶದ ಕೊರೋನಾ ಪೀಡಿತರನ್ನು ಭೇಟಿ ಮಾಡಿದ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು, ಯಾರೂ ಸಹ ಆಂಧ್ರದಿಂದ ಕರ್ನಾಟಕದ ಕಡೆಗೆ ಹೆಜ್ಜೆ ಇಡದಂತೆ ಎಚ್ಚರಿಕೆ ವಹಿಸಬೇಕೆಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.

       ಅವರು, ಭಾನುವಾರ ಜಾಜೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪಿಯಲ್ಲಿರುವ ದೊಡ್ಡ ಓಬಯ್ಯನಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಆಂಧ್ರ ಪ್ರದೇಶದಿಂದ ಕರ್ನಾಟಕ ಗಡಿಗೆ ಯಾರೂ ಸಹ ನುಸಳದಂತೆ ಬೇಲಿ ಹಾಕಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಮಾತನಾಡಿದರು. ತಾಲ್ಲೂಕಿನ ಗಡಿಭಾಗದಲ್ಲಿರುವ ಈ ಗ್ರಾಮದಲ್ಲಿ ಬಹುತೇಕ ಬಡ ಮತ್ತು ಅನಕ್ಷರಸ್ಥ ಕುಟುಂಬಗಳು ಹೆಚ್ಚಿದ್ದು, ಕೊರೋನಾ ವೈರಾಣು ಯಾವುದೇ ಸಂದರ್ಭದಲ್ಲೂ ನಮ್ಮ ಪ್ರದೇಶಕ್ಕೆ ಕಾಲಿಡಬಹುದಾಗಿದೆ. ಆದ್ದರಿಂದ ಆರೋಗ್ಯ ಮತ್ತು ಆರಕ್ಷಕ ಇಲಾಖೆ ಅಧಿಕಾರಿಗಳು ಈ ಭಾಗದಲ್ಲಿರುವ ಎಲ್ಲಾ ಗ್ರಾಮಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಯಾರೂ ಸಹ ನಮ್ಮ ಗಡಿಯತ್ತ ಪ್ರವೇಶ ಪಡೆಯದಂತೆ ಸದಾಕಾಲ ಜಾಗೃತಿಯಿಂದ ಕಾರ್ಯನಿರ್ವಹಿಸಬೇಕೆಂದರು.

       ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಪ್ರೇಮಸುಧಾ ಮಾತನಾಡಿ, ಆಂಧ್ರ ಪ್ರದೇಶದ ಗಂಟೆಓಬಯ್ಯನಹಟ್ಟಿ ಗ್ರಾಮದ ಯುವತಿಯೋರ್ವಳು ಜಾಜೂರಿನ ಓಬಳೇಶ್ ಎಂಬುವವರನ್ನು ವಿವಾಹವಾಗಿದ್ದು, ಅವರು ಭೇಟಿ ನೀಡಿ ಬಂದಿದ್ದು, ಗಂಟೆಓಬಯ್ಯನಹಟ್ಟಿಯ ಓರ್ವ ವ್ಯಕ್ತಿ ಅನಂತಪುರದಲ್ಲಿ ಕೊರೋನಾ ಪಾಸಿಟಿವ್ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿ ಸಂಪರ್ಕ ಪಡೆದ ಎಲ್ಲರನ್ನೂ ಪರೀಕ್ಷೆಗೆ ಒಳಡಿಸಲಾಗಿದ್ದು, ಯಾವುದೇ ರೀತಿಯ ಅಪಾಯವಿಲ್ಲವೆಂದರು.

      ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಕಂದಯಾಧಿಕಾರಿಗಳಾದ ರಫೀ, ಹಿರಿಯಪ್ಪ, ತಿಪ್ಪೇಸ್ವಾಮಿ, ಪಿಎಸ್‍ಐ ಮಹೇಶ್, ಆರೋಗ್ಯ ಇಲಾಖೆಯ ಎನ್.ಪ್ರೇಮಕುಮಾರ್, ಜಾಜೂರು ಆರೋಗ್ಯ ಕೇಂದ್ರದ ವೈದ್ಯ ಶ್ರೀನಿವಾಸ್, ಹನುಮಕ್ಕ, ನಗರಸಭಾ ಸದಸ್ಯ ಬಿ.ಟಿ.ರಮೇಶ್‍ಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಸ್ಥಿತರಿದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link