ಲಗೆಜ್ ವಾಹನ ಡಿಕ್ಕಿಹೊಡೆದು ಎಂ ಎನ್ ಸಿ ಉದ್ಯೋಗಿ ಸಾವು

ಬೆಂಗಳೂರು

    ಹಿಂದಿನಿಂದ ವೇಗವಾಗಿ ಬಂದ ಈಷರ್ ಲಗೇಜ್ ವಾಹನ ಡಿಕ್ಕಿ ಹೊಡೆದು ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಬಹು ರಾಷ್ಟ್ರೀಯ ಕಂಪನಿಯ ಹಿರಿಯ ಉದ್ಯೋಗಿಯೊಬ್ಬರು ಮೃತಪಟ್ಟಿರುವ ದುರ್ಘಟನೆ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮೃತಪಟ್ಟವರನ್ನು ಲಗ್ಗೆರೆಯ ಲವ-ಕುಶ ನಗರದ ಗಂಗಾಧರ್ (59)ಎಂದು ಗುರುತಿಸಲಾಗಿದೆ. ಲಗ್ಗೆರೆಯ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಹಿರಿಯ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದ ಗಂಗಾಧರ್ ಅವರು, ಶುಕ್ರವಾರ ಮಧ್ಯಾಹ್ನ 3.45ರ ವೇಳೆ ಸ್ಕೂಟರ್‍ನಲ್ಲಿ ಲಗ್ಗೆರೆ ಮುಖ್ಯರಸ್ತೆಯ ಬಾಲಗಂಗಾಧರ ಆರ್ಚ್ ಬಳಿ ಹೋಗುತ್ತಿದ್ದರು.

     ಈ ವೇಳೆ ಹಿಂದಿನಿಂದ ವೇಗವಾಗಿ ಬಂದ ಈಶರ್ ಲಗೇಜ್ ವಾಹನ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಗಂಗಾಧರ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಪ್ರಕರಣ ದಾಖಲಿಸಿರುವ ರಾಜಾಜಿನಗರ ಸಂಚಾರ ಪೊಲೀಸರು ಈಶರ್ ವಾಹನ ಚಾಲಕನನ್ನು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆಂದು ಡಿಸಿಪಿ ಸೌಮ್ಯಲತಾ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link