ಇಂದಿನ ಯುವಜನತೆಗೆ ಮೋಬೈಲ್ ಸಂಸ್ಕೃತಿ ಎಷ್ಟು ಅವಶ್ಯಕವೋ ಅಷ್ಟೇ ದುಶ್ಪರಿಣಾಮ: ನ್ಯಾ. ಪ್ರೇಮ ವಸಂತರಾವ್ ಪವಾರ್

ಹೊಳಲ್ಕೆರೆ:

       ಇಂದಿನ ಯುವಕರು ಮೋಬೈಲ್ ಸಂಸ್ಕತಿ ಮತ್ತು ಮಾದಕ ವ್ಯಸನಗಳಿಗೆ ತುತ್ತಾಗಿ ತಮ್ಮ ಭವಿಷ್ಯವನ್ನೇ ಹಾಳು ಮಡಿಕೊಳ್ಳುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಪ್ರೇಮಾ ವಸಂತರಾವ್‍ಪವಾರ್ ಕಳವಳ ವ್ಯಕ್ತಪಡಿಸಿದರು.

      ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಅಭಿಯೋಜನಾ ಇಲಾಖೆ ಆರೋಗ್ಯ ಇಲಾಖೆ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ರೀಯ ಯುವ ದಿನಾಚರಣೆ ಹಾಗೂ ಮಾದಕ ವಸ್ತು ವ್ಯಸನದಿಂದ ನೊಂದ ವ್ಯಕ್ತಿಗಳಿಗೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

        ದೇಶದ ಅಭಿವೃಧ್ದಿಗೆ ಯಾವುದೇ ಕುಂದು ಕೊರತೆ ಆಗಬಾರದೆಂಬ ದೃಷ್ಟಿಯಿಂದ ಕಾನೂನು ಸೇವಾ ಪ್ರಾಧಿಕಾರ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ದುಶ್ಚಟಗಳ ಅರಿವು ಮೂಡಿಸುವಲ್ಲಿ ಪ್ರಯತ್ನಪಡುತ್ತಿದೆ. ಯುವ ದಿನಾಚರಣೆ ಶ್ರೀಸ್ವಾಮಿ ವಿವೇಕಾನಂದ ಜನ್ಮ ದಿನಾಚರಣೆ ಅಂಗವಾಗಿ ದೇಶದೆಲ್ಲಡೆ ಆಚರಣೆ ಮಾಡಲಾಗುತ್ತಿದೆ. ಈ ಆಚರಣೆ 1965ರಿಂದ ರಾಷ್ಟ್ರಾದ್ಯಾಂತ ಆಚರಿಸುತ್ತಿದ್ದು ಸ್ವಾಮಿ ವಿವಾಕಾನಂದರ ವಾಣಿಯಂತೆ ಗುರಿ ಮುಟ್ಟುವವರೆಗೆ ಏನ್ನಾದರೂ ಸಾಧಿಸಿ ತೋರಿಸಬೇಕು. ಇದರ ಅರ್ಥವನ್ನು ಯುವಕರಿಗೆ ತಿಳಿಯುವಂತೆ ಮಾಡುವುದೇ ಕಾನೂನು ಪ್ರಾಧಿಕಾರದ ಮುಖ್ಯ ಉದ್ದೇಶವಾಗಿದೆ.

        ಇಂದಿನ ಯುವಕರು ದೇಶದ ಅಭಿವೃಧ್ದಿಗೆ ಸಾಮಾಜಿಕ ಕಳಕಳಿ ಜಾಗೃತಿಯ ಜೊತೆಗೆ ಆದರ್ಶವನ್ನು ಯುವ ಜನರು ಪಾಲಿಸಬೇಕೆಂದು ತಿಳಿಸಿ ಯಾವುದೇ ಸಂದರ್ಭದಲ್ಲಿಯು ದುಶ್ಚಟ ಮದ್ಯ ವ್ಯಸನಕ್ಕೆ ಮಾರು ಹೋಗದೇ ತಮ್ಮ ತಮ್ಮ ಉಜ್ವಲ ಭವಷ್ಯವನ್ನು ಇಂದಿನ ಯುವ ಜನತೆ ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.

         ಮುಖ್ಯ ಉಪನ್ಯಾಸಕರಾಗಿ ಜಿಲ್ಲಾ ಮನೋ ತಜ್ಞ ಡಾ.ಮಂಜುನಾಥ್ ಆರ್. ಮಾತನಾಡಿ ಮನುಷ್ಯ ಆಕ್ಸಮಿಕವಾಗಿ ದುಶ್ಚಟಗಳಿಗೆ ಬಲಿಯಾಗಿ ಅದರಿಂದ ಅಲ್ಪ ಮಜವನ್ನು ಅನುಭವಿಸಿ ನಂತರ ಇದನ್ನೇ ಮುಂದುವರಿಸಿ ದುಶ್ಚಟದ ಗುಲಾಮನಾಗುತ್ತಾನೆ. ಮಧ್ಯ ವ್ಯಸನದಿಂದ ಮಧ್ಯ ಸೇವನೆಯಿಂದ ಮನುಷ್ಯನ ರಕ್ತದೊಳಗೆ ಸೇರಿ ಮೆದುಳಿನ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತದೆ.

         ಇದನ್ನು ಬಿಡಿಸಿಕೊಳ್ಳುವುದು ಕಷ್ಟ ಸಾಧ್ಯವಾದ ಮಾತು. ಮೆದುಳು ತನ್ನ ಕ್ರಿಯೇಯನ್ನು ಸ್ಥಗಿತಗೊಳಿಸಿದಾಗ ನರಗಳ ಶಕ್ತಿ ದೌರ್ಬಲ್ಯವಾಗಿ ಬೇರೆ ಬೇರೆ ಕಾಯಿಲೆಗಳಿಗೆ ತುತ್ತಾಗಿ ತನ್ನ ಜೀವನವನ್ನೆ ಕೊನೆಗೊಳಿಸುತ್ತಾನೆ ಆದ್ದರಿಂದ ಯುವಕರು ಬೀಡಿ, ಸಿಗರೇಟು ಮಧ್ಯ ಮುಂತಾದ ವ್ಯಸನಗಳಿಗೆ ಮಾರು ಹೋಗಬೇಡಿ ಎಂದು ಸಲಹೆ ನೀಡಿದರು.

         ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಜಿ.ಇ.ರಂಗಸ್ವಾಮಿ ಮಾತನಾಡಿ ಸ್ವಾಮಿ ವಿವೇಕನಾನಂದರ ವಾಣಿಯಂತೆ ಯುವಕರು ಏಳಿ ಎದ್ದೇಳಿ ಎಂಬ ಮಂತ್ರವನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣದಿಂದ ಮಾದಕ ವಸ್ತುಗಳ ಬಗ್ಗೆ ಅದರ ಉಪಯೋಗದ ಬಗ್ಗೆ ಪೂರ್ವಪರ ಆಲೋಚನೆ ಮಾಡಿ ಯಾವುದೇ ಕೆಟ್ಟ ದುಶ್ಚಟಗಳಿಗೆ ಬಲಿಯಾಗಬೇಡಿ. ನಾವು ವಿಕಾಸನ ಜೀವನವನ್ನು ಮಾಡಬೇಕು ಮನುಷ್ಯ ಮನುಷ್ಯನ ಜೀವನ ಅಲ್ಪ ಮನುಷ್ಯ ಮನುಷ್ಯನನ್ನು ಪ್ರೀತಿ ಮಾಡಬೇಕು ನಿಶ್ವಾರ್ಥ ಭಾವನೆಯಿಂದ ಪ್ರಾಮಾಣಿಕವಾಗಿ ತಮ್ಮ ಭವಿಷ್ಯವನ್ನು ಪರಿಪೂರ್ಣ ಕಡೆಗೆ ಹೊಯ್ಯಬೇಕೆಂದು ತಿಳಿಸಿದರು.

        ಮುಖ್ಯ ಅತಿಥಿಯಾಗಿ ಪ್ರಾಚಾರ್ಯ ತಿಪ್ಪೇಶಪ್ಪ, ಮಾದಕ ವಸ್ತುಗಳಿಂದ ವಿದ್ಯಾರ್ಥಿಗಳು ದೂರವಿರಬೇಕು. ಯಾವುದೇ ಆಸೆ ಆಕಾಂಕ್ಷೆಗಳಿಗೆ ತಮ್ಮ ತನವನ್ನು ಉಪಯೋಗಿಸಬೇಡಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಘನ ಉಪಸ್ಥಿತಿಯಲ್ಲಿ ಪ್ರಧಾನ ಸವಿಲ್ ನ್ಯಾಯಾಧೀಶರಾದ ರವಿಕುಮಾರ್ ವಿ, ವಕೀಲರ ಸಂಘದ ಉಪಾಧ್ಯಕ್ಷ ಜಗದೀಶ್, ಕಾರ್ಯದರ್ಶಿ ಪ್ರದೀಪ್, ಅಪರ ಸರ್ಕಾರಿ ವಕೀಲರಾದ ಡಿ.ಜಯಣ್ಣ, ಎಪಿಪಿ ಪ್ರಶಾಂತ್ ಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಜಯಸಿಂಹ,

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link