ತಿಪಟೂರು:
ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ
ಇಂದಿನ ವಿದ್ಯಾರ್ಥಿಗಳಿಗೆ ಅಂತರ್ಜಾಲದಿಂದ ಉಪಯೋವಿದೆ ಆದರೆ ಆದೆ ಅಂತರ್ಜಾಲಕ್ಕೆ ದಾಸರಾಗಿ ತಮ್ಮ ಭವಿಷ್ಯಕ್ಕೆ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಾರೆ ಇಂದಿನ ಆದುನಿಕ ಗಾದೆ ಎಂದತೆ ಮೊಬೈಲ್ ಒಂದು ಬಾರಿ ನನ್ನನ್ನು ತಲೆತಗ್ಗಿಸಿ ನೋಡು ನಾನು ನಿನ್ನನ್ನು ತಲೆ ಎತ್ತದಂತೆ ಮಾಡುತ್ತೇನೆ ಎಂದರೆ, ಪುಸ್ತಕವು ನನ್ನನ್ನು ಒಂದು ಬಾರಿ ತಲೆ ಬಗ್ಗಿಸಿ ನೋಡು ನಿನ್ನನ್ನು ತಲೆ ಎತ್ತುವಂತೆ ಮಾಡುತ್ತೇನೆಂದು ಹೋಲುವಹಾಗೆ ವಿದ್ಯಾರ್ಥಿಗಳು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಅವಶ್ಯವಿರುವಷ್ಟು ಬಳಸಿದರೆ ಏನು ಅಪಾಯವಿಲ್ಲ ಆದರೆ ಅದನ್ನೇ ಹೆಚ್ಚಾಗಿ ಮಾಡಿದರೆ ತಮ್ಮ ಭವಿಷ್ಯವು ಎಲ್ಲಿಗೆ ಹೋಗಿನಿಲ್ಲುತ್ತದೋ ಗೊತ್ತಿವಲ್ಲವೆನ್ನುವಂತಹ ಸ್ಥಿತಿಗೆ ವಿದ್ಯಾರ್ಥಿಗಳು ತಲುಪಿದ್ದಾರೆ
ಮಕ್ಕಳಿರಲವ್ವ ಮನೆತುಂಬ ಹಿಂದಿನ ಗಾದೆ ಆದರೆ ಈಗಿನ ಪೋಷಕರು ಭಾರತದ ಜನಸಂಖ್ಯೆಯನ್ನು ಮನದಲ್ಲಿಟ್ಟುಕೊಂಡು ಒಂದೋ ಎರಡೋ ಮಕ್ಕಳನ್ನು ಸಾಕಿ ಸಲಹುತ್ತಿದ್ದಾರೆ ಆದರೆ ಆ ಇರುವ ಎರಡು ಮಕ್ಕಳನ್ನು ನೋಡಿಕೊಳ್ಳಲಾಗದೆ ಮಕ್ಕಳಿಗೆ ಒಂದೊಂದು ಮೊಬೈಲ್‍ಕೊಟ್ಟು ಸುಮ್ಮನೆ ಮಾಡುವಂತಾಗಿದೆ. ಮಗು ಅತ್ತರೆ ಸಾಕು ಮೊಬೈಲ್‍ಕೊಟ್ಟು ಸುಮ್ಮನೆ ಮಾಡುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ.
ಈಗ ಹಿಂದಿನ ಗಾದೆಯಲ್ಲಿ ಮಂಗನ ಕೈಗೆ ಮಾಣಿಕ್ಯಕೊಟ್ಟರೆ ತಿರುಗಿಸಿ ತಿರುಗಿಸಿ ನೋಡಿದಂತೆ ಇಂದು ಮಕ್ಕಳ ಕೈನಲ್ಲಿನ ಮೊಬೈಲ್ ಆತ್ಮಹತ್ಯೆ, ಕೊಲೆ ಮುಂತಾದ ಅಪಾರಾಧ ಕೃತ್ಯಗಳಿಗೆ ಸಾಕ್ಷಿಯಾಗುತ್ತಿದ್ದು ಇದರಿಂದ ಎಷ್ಟು ಮಕ್ಕಳು ತಮ್ಮ ಬುದ್ಧಿಸ್ಥಿರತೆ, ಕಣ್ಣುಗಳನ್ನು ಕಳೆದುಕೊಳ್ಳುತ್ತಿದ್ದಾರೆ.
ಮೊಬೈಲ್ ನಿಂದ ಗ್ರಾಮೀಣ ಕ್ರೀಡೆಗಳು ಮಾಯಾ :
15-20 ವರ್ಷಗಳ ಹಿಂದೆ ಮಕ್ಕಳಿಗೆ ಆಟಸಾಮಾನುಗಳ ಕೊತರೆಇತ್ತು, ಆಗ ಮಕ್ಕಳೆಲ್ಲರೂ ಒಂದೆಡೇ ಸೇರಿ ಸೂರುಚೆಂಡು, ಲಗೋರಿ, ಗೋಲಿ, ಕೊಕ್ಕೆ ಕೋಲು, ಚಿನ್ನದಾಂಡು, ಕುಂಟೆಬಿಲ್ಲೆ, ಆನೆಕುದುರೆ, ಚೌಕಾಬಾರಾ, ಕಣ್ಣಾಮುಚ್ಚಾಲೆ, ಪಗಡೆ, ಮಉಂತಾದ ಕ್ರೀಡೆಗಳನ್ನು ಆಡುತ್ತಿದ್ದವು ಆದರೆ ಇಂದಿನ ಮಕ್ಕಳಿಗಿರಲಿ ಪೋಷಕರಿಗೂ ಗೊತ್ತಿಲ್ಲ ಅವರಿಗೆ ಗೊತ್ತಿರುವುದು ಒಂದೆ ಅದೇ ಮೊಬೈಲ್ ಮತ್ತು ಟಿ.ವಿ ಈ ನಾನು ಎಲ್ಲಾ ಕ್ರೀಡೆಗಳನ್ನು ಬಲ್ಲೆ ಎನ್ನುವ ಮಕ್ಕಳೇ ಹೆಚ್ಚು ಎಲ್ಲಿ ಆಡುತ್ತೀಯಾ ಎಂದರೆ ಮೋಬೈಲ್ ಎಂದು ತೋರಿಸುವ ಮಕ್ಕಳು. ಅಂದು ಮಕ್ಕಳನ್ನು ಮನೆಗೆ ಕರೆಯುವುದೇ ಪೋಷಕರಿಗೆ ಸವಾಲಾಗಿತ್ತು ಅಂದು ಮಕ್ಕಳು ಮನೆ ಬಿಟ್ಟು ಬಯಲಿನಲ್ಲಿಯೇ ಹೆಚ್ಚಿನ ಸಮಯವನ್ನು ಕಳೆದು ಮಣ್ಣಿನಲ್ಲಿ, ನೀರಿನಲ್ಲಿ, ಮರದಮೇಲೆ, ಹೊಲಗಡ್ಡೆ, ಕಣಗಳಲ್ಲಿ ಆಡಿದರು ಕಾಯಿಲೆಗಳು, ಡಸ್ಟ್ ಅಲರ್ಜಿಗಳು ಬರುತ್ತಿರಲಿಲ್ಲ. ಆದರಿಂದು ಮಕ್ಕಳನ್ನು ಹೊರಗೆ ಬಿಟ್ಟರೆ ಕ್ಲೀನ್ ಇಲ್ಲ, ಅವರಿಗೆ ಡಸ್ಟ್ ಅಲರ್ಜಿಯಾಗುತ್ತದೆ, ಎಂದು ಹೊರಗೆ ಕಳುಹಿಸದ ಪೋಷಕರು ಈಗ ಅವರನ್ನು ಮನೆಯ ಹೊರಗಡೆ ಹೋಗಿ ಆಟವಾಡು ಎಂದರು ಆಟವಾಡದ ಪರಿಸ್ಥಿರಿಗೆ ಮಕ್ಕಳು ತಲುಪಿದ್ದಾರೆ ಇದಕ್ಕೆ ಕಾರಣವೆಂದರೆ ಮೊಬೈಲ್, ಕಂಪ್ಯೂಟರ್ ಇದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯು ಕಮ್ಮಿಯಾಗುತ್ತಿರುವುದು ಮುಂದೆ ಮಕ್ಕಳ ಭವಿಷ್ಯದ ಮೇಲೆ ಅತಿಹೆಚ್ಚಿನ ಪರಿಣಾಮವನ್ನು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಯಂತ್ರಿಸಿ :
ಸರ್ಕಾರಿ ಆದೇಶದಂತೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇದಿಸಬೇಕು ಮೊನ್ನೆ ತಾನೆ ಉತ್ತರಕನ್ನಡದಲ್ಲಿ ಕಾಲೇಜಿನಲ್ಲಿ ಮೊಬೈಲ್ ನಿಷೇದವಿದ್ದರೂ ತಂದಿದ್ದಾರೆಂದು ವಿದ್ಯಾರ್ಥಿಗಳ ಕಣ್ಣಮುಂದೆಯೇ ಮೊಬೈಲ್ ಅನ್ನು ಶಿಕ್ಷಕರು ಹೊಡೆದುಹಾಕುತ್ತಿರುವುದು ತಾಜಾ ಉದಾಹರಣೆ. ಹಾಗೆಯೇ ತಿಪಟೂರು ನಗರದ ಕೆಲ ಕಾಲೇಜುಗಳಲ್ಲಿ ಸಂಪೂರ್ಣವಾಗಿ ಮೊಬೈಲ್ ನಿಷೇದವಿದೆ ಆದರೆ ಇನ್ನು ಕೆಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪಾಠ ಪ್ರವಚನವನ್ನು ಬಿಟ್ಟು ಮೋಬೈಲ್‍ನಲ್ಲಿ ಸೆಲ್ಫಿತೆಗೆದು ಪಾಠವನ್ನು ಹೇಗೆಮಾಡುತ್ತಿದ್ದಾರೆ ನೋಡು ಎಂದು ತಮ್ಮದೇ ಗ್ರೂಪ್‍ಗಳಲ್ಲಿ ಹರಿಯಬಿಡುತ್ತಿದ್ದಾರೆ. ಇನ್ನು ಪಾರ್ಕ್‍ನಲ್ಲಿ ವಿವಿಧ ಭಾವಭಂಗಿಗಳಲ್ಲಿ ಪೋಟೋ ತೆಗದು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.
ಪೋಲೀಸರಿಗೆ ಚಳ್ಳೆಹಣ್ಣು :
ಇತ್ತೀಚಿಗೆ ವಾಹನ ಸವಾರರಿಗೆ ಹೆಚ್ಚಿನ ದಂಡವನ್ನು ವಿಧಿಸುತ್ತಿರುವ ಪೋಲೀಸರಿಗೆ ಚಳ್ಳೆಹಣ್ಣು ತಿನ್ನಿಸಲೆಂದೇ ಬಂದಿರುವ ತಂತ್ರಜ್ಞಾನವೆಂದರೆ ವೈರ್‍ಲೆಸ್ ಹೆಡ್‍ಸೆಟ್, ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಸಿದರೆ 1000 ದಂಡವಿಧಿಸುವ ಅವಕಾಶವಿರುತ್ತದೆ ಆದರೆ ಈಗ ಬಂದಿರುವ ವೈರ್‍ಲೆಸ್ ಹೆಡ್ ಸೆಟ್‍ಗೆ ಇದರಿಂದ ಬೇಡಿಕೆ ಹೆಚ್ಚಿದ್ದು ಕೆಲವರು ಕಳಪೆಗುಣಮಟ್ಟದ ಸಾಧನಗಳನ್ನು ಬಳಸಿ ಆರೋಗ್ಯದೊಂದಿಗೆ ಕಿವಿಯನ್ನು ಕಳೆದುಕೊಳ್ಳುತ್ತಿದ್ದಾರೆ ಇನ್ನು ಅದರಲ್ಲಿ ಮಾತನಾಡುವಾಗ ಚಾಲನೆಯಬಗ್ಗೆ ಗಮನ ಹರಿಸದೆ ಅಪಘಾತಮಾಡಿಕೊಂಡು ತಾವು ಸಾಯುವುದಲ್ಲದೇ ಇತರರನ್ನು ಸಾಯಿಸುತ್ತಿದ್ದಾರೆ.
ಶಾಲಾ ಕಾಲೇಜುಗಳಲ್ಲಿ ಸಂಪೂರ್ಣವಾಗಿ ಮೊಬೈಲ್ ನಿಷೇಧಿಸಿ :
ಶಾಲಾಕಾಲೇಜುಗಳಲ್ಲಿ ಸಂಪೂರ್ಣವಾಗಿ ಮೊಬೈಲ್ ನಿಷೇಧಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಬಹುದು ಮತ್ತು ಪಾಠ ಪ್ರವಚನಗಳತ್ತ ವಿದ್ಯಾರ್ಥಿಗಳು ಸೆಳೆಯಬುಹುದು ಇಂದು ಕಾಲೇಜಿಗೆ ಬರುವ ಎಲ್ಲಾ ವಿದ್ಯಾರ್ಥಿಗಳು ಮೊಬೈಲ್‍ಇಲ್ಲದೇ ಬರುತ್ತಿಲ್ಲ, ಇನ್ನು ಶಿಕ್ಷಕರುಗಳು ಅದರಲ್ಲೂ ಬೇರೆ ಊರುಗಳಿಂದ ಬರುವ ಶಿಕ್ಷಕರುಂತು ತಮ್ಮ ರೈಲುಗಾಡಿ ಎಲ್ಲಿದೆ ಎಂದು ತಿಳಿಯಲು ಯಾವಾಗಲೂ ಆನ್‍ಲೈನ್‍ನಲ್ಲಿಯೇ ಇರುತ್ತಾರೆ ಇವರು ವಿದ್ಯಾರ್ಥಿಗಳಿಗೆ ಹೇಗೆ ಪಾಠಮಾಡುತ್ತರೆಂಬುದು ಸಹ ತಿಳಿಯದಾಗಿದೆ.
ಕಣ್ಣು ಬೇಕೆಂದರೆ ಮೊಬೈಲ್ ಬಿಡಿ :
ಕಣ್ಣಿಗೆ ಹಾನಿಮಾಡುವುದರಲ್ಲಿ ಮೊಬೈಲ್ ಒಂದೇ ಅಲ್ಲ ಎಲ್ಲಾ ತರಹದ ಗ್ಯಾಜೆಟ್‍ಗಳಿಂದಲೂ ಅಪಾಯವವಿದೆ ಅದರಲ್ಲಿ ಮುಖ್ಯವಾಗಿ ಮೊಬೈಲ್ ಒಂದುನ್ನು ನಿಯಂತ್ರಿಸಿದರೆ ನಿಮ್ಮ ಕಣ್ಣುಗಳು ಇನ್ನಷ್ಟು ದಿನ ಆರೋಗ್ಯದಿಂದಿರುತ್ತವೆ ಮಕ್ಕಳು ಮೊಬೈಲ್ ನೋಡುವುದರಿಂದ ಅವರ ಅಕ್ಷಪಟಲದಮೇಲೆ ನೇರವಾಗಿ ಪರಿಣಾಮ ಬೀರಿ ಡ್ರೈಐ ಸಿಂಡ್ರೋಮ್ ಒಳಗಾಗುತ್ತಾರೆ.
ಯುವರಾಜ್ ಯಾದವ್, ನೇತ್ರ ತಜ್ಞರು
ಮಕ್ಕಳನ್ನು ಬಯಲಿಗೆ ಬಿಡಿ :
ನಮ್ಮ ಕಾಲದಲ್ಲಿ ಮಕ್ಕಳನ್ನು ಹೆಚ್ಚಾಗಿ ಬಯಲಲ್ಲಿ ಆಟವಾಡುತ್ತಿದ್ದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಬಲಿಷ್ಟರಾಗಿದ್ದರು ಮತ್ತು ಬೇಲಿ ತೋಟದಲ್ಲಿ ಸಿಗುತ್ತಿದ್ದ ಎರದೆ, ಅಮಟೆ, ಸೀಬೆಕಾಯಿ, ಕಾರೇಹಣ್ಣು ಮತ್ತಿತರರ ಹಣ್ಣುಗಳನ್ನು ತಿನ್ನುತ್ತಿದ್ದು ಮಕ್ಕಳಿಗೆ ಅವಶ್ಯಕವಾದ ಪೋಷಕಾಂಶಗಳು ದೊರೆಯುತ್ತಿದ್ದವು ಆದರೆ ಇಂದಿನ ಮಕ್ಕಳಿಗೆ ಇವುಗಳ ಅರಿವೇ ಇಲ್ಲ ಎಲ್ಲಾ ಮೊಬೈಲ್‍ನಲ್ಲೆ ಮುಳುಗಿ ಹೋದ್ದಿದ್ದಾರೆ.
ಚಕ್ರಪಾಣಿ ನಿವೃತ್ತ ಶಿಕ್ಷಕರು
ಎಲ್ಲರೂ ಸುಲೋಚನ ದಾರಿಗಳಾಗುತ್ತಿದ್ದಾರೆ :
ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳು ಪರಿಣಾಮ ಎಷ್ಟಿದೆ ಎಂದರೆ ಹಿರಿಯರಿಗೆ ದೃಷ್ಠಿದೋಷ ಬರುವುದು ಸಹಜ ಆದರೆ ಇಂದಿನ ಮಕ್ಕಳು ಇವುಗಳನ್ನು ಬಳಸಿ ಹೆಚ್ಚಾಗಿ ಕಣ್ಣನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಮುಂದೆ ಎಲ್ಲರೂ ಸುಲೋಚನಧಾರಿಗಳಾಗುತ್ತಾರೆ ಮಕ್ಕಳಿಗೆ ಮೊಬೈಲ್ ಬಳಸದಂತೆ ಪೋಷಕರು ಚಾಗ್ರತೆಹಿಸಬೇಕೆಂದರು.
ಬಾಲಕೃಷ್ಣ ಕ.ಸಾಪ ಅಧ್ಯಕ್ಷರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ