ತಿಪಟೂರು :
ತಾಲ್ಲೂಕಿನ ದಸರೀಘಟ್ಟದ ವಿಜೃಂಭಣೆಯಿಂದ ನಡೆಯುವ ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಚೌಡೇಶ್ವರಿ ದೇವಿಯ ಮುಳ್ಳುಗದ್ದಿಗೆ ಉತ್ಸವನ್ನು ಜಾತಿ ಭೇದ, ಮೇಲು ಕೀಳು, ಹಿಂದೂ ಮುಸ್ಲಿ, ಮಹಳೆಯರು ಮಕ್ಕಳು ಸೇರಿದಂತೆ ಎಲ್ಲರೂ ಮುಳ್ಳು ತುಳಿದು ಹರಕೆ ತೀರಿಸುವುದು ಸಾಮಾನ್ಯವಾಗಿತ್ತು
ಆದರೆ ಇವೆಲ್ಲಕ್ಕೀಮತಲೂ ಮುಖ್ಯವಾಗಿ ದೇವಿಯನ್ನು ನೋಡುವುದಕ್ಕಿಂತ ತಮ್ಮ ತಮ್ಮ ಮೊಬೈಲ್‍ನಲ್ಲಿ ಚಿತ್ರೀಕರಿಸಲು ಎಲ್ಲರೂ ಕೈಮುಗಿಯುವುದನ್ನು ಮರೆತರು ಆದರೆ ದೇವಿಯ ಮಹಿಯೆಯೋ ಅಥವಾ ಭಕ್ತರ ಮೊಬೈಲ್ ವ್ಯಾಮೋಹವೋ ಎಂಬು ತಿಳಿಯದೆ ಕಣ್ಣು ಮುಂದೆ ನಡೆಯುವುದನ್ನು ಬಿಟ್ಟು ಎಲ್ಲರಕೈಲೂ ಮೊಬೈಲ್ ಹಿಡಿದು ನಮಸ್ಕಾರ ಮುದ್ರೆಯೆ ಮಧ್ಯೆ ಮಬೈಲ್ ಹಿಡಿದು ದೇವಿಗೆ ಜೈಕಾರ ಹಾಕಿದಂತಿತ್ತು.
ಇದರ ಮದ್ಯೆಯೂ ಹಸಿಯಾದ ಕಾರೆಮುಳ್ಳಿನ ರಾಶಿಯ ಮೇಲೆ ವಿಜಯದಶಮಿಯು ಅತ್ಯಂತ ವೈಭವ ಮತ್ತು ಭಕ್ತಿ ಪರಾಕಾಷ್ಠೆಯಿಂದ ನಡೆಯಿತು ಬಂದವರೆಲ್ಲರೂ ಅಲ್ಲಿಯೇ ಹಿರಿಯರಿಗೆ ಶಮಿ ಪತ್ರೆಯನ್ನು ಕೊಟ್ಟು ಆಶಿರ್ವಾದ ಪಡೆಯುತ್ತಿದ್ದರು, ಇಂದು ದೇವಿಗೆ ಕಡಲೇ ಕಾಯಿಯನ್ನು ಬಳಸಿ ಅಲಂಕಾರವನ್ನು ಮಾಡಲಾಗಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ