ಲೋಕಸಭಾ ಚುನಾವಣೆ ಮತ ಎಣಿಕೆ: ಮೊಬೈಲ್ ಬಳಕೆ ನಿಷೇಧ

ತುಮಕೂರು

       ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಮೇ 23ರಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿರುವ ಮತ ಎಣಿಕಾ ಕೊಠಡಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಕೆ.ಚನ್ನಬಸಪ್ಪ ಅವರು ಸೂಚಿಸಿದರು.

      ನಗರದ ಬಾಲಭವನದಲ್ಲಿ ಎಣಿಕೆ ಮೇಲ್ವಿಚಾರಕರು/ಸಹಾಯಕರು ಹಾಗೂ ಮೈಕ್ರೋ ಅಬ್ಸರ್ವರ್‍ಗಳಿಗಾಗಿ ಏರ್ಪಡಿಸಿದ್ದ ಮತ ಎಣಿಕೆ ವಿಧಾನ ತರಬೇತಿ ಕಾರ್ಯಕ್ರಮದಲ್ಲಿಂದು ಮಾತನಾಡಿದ ಅವರು ಮತ ಎಣಿಕಾ ವೀಕ್ಷಕರನ್ನು ಹೊರತುಪಡಿಸಿ ಮತ ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ/ಸಿಬ್ಬಂದಿಗಳು ಮತ ಎಣಿಕಾ ಕೊಠಡಿಗೆ ಮೊಬೈಲ್‍ಗಳನ್ನು ಕೊಂಡೊಯ್ಯುವಂತಿಲ್ಲ.

       ಪ್ರತಿ ಮತ ಎಣಿಕೆ ಟೇಬಲ್‍ಗೆ ಒಬ್ಬ ಎಣಿಕೆ ಮೇಲ್ವಿಚಾರಕರು, ಒಬ್ಬ ಎಣಿಕೆ ಸಹಾಯಕರು ಮತ್ತು ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗಿದ್ದು, ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಕಾರ್ಯನಿರ್ವಹಿಸಬೇಕು. ಅಲ್ಲದೇ ಮೇಲ್ವಿಚಾರಕರು/ಸಹಾಯಕರು ಹಾಗೂ ಅಬ್ಸರ್ವರ್‍ಗಳು ಮತ ಎಣಿಕೆ ಕೊಠಡಿಗೆ ಬರುವಾಗ ಕಡ್ಡಾಯವಾಗಿ ಐ.ಡಿ.ಕಾರ್ಡ್‍ಗಳನ್ನು ಧರಿಸಿರಬೇಕು. ತಪ್ಪಿದಲ್ಲಿ ಅಂತಹವರಿಗೆ ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಸೂಚಿಸಿದರು.

       ಮತ ಎಣಿಕಾ ಸಿಬ್ಬಂದಿ/ಅಧಿಕಾರಿಗಳು ತಮಗೆ ನಿಯೋಜಿಸಿರುವ ಟೇಬಲ್ ಹೊರತುಪಡಿಸಿ ಬೇರೆ ಟೇಬಲ್‍ಗಾಗಲೀ, ಬೇರೆ ಕೊಠಡಿಗಾಗಲೀ ಹೋಗಲು ಅವಕಾಶವಿರುವುದಿಲ್ಲ ಹಾಗೂ ಯಾವುದೇ ಏಜೆಂಟರ್ ಪರ ಕಾರ್ಯನಿರ್ವಹಿಸುವಂತಿಲ್ಲ. ನಿಯಮವನ್ನು ಉಲ್ಲಂಘಿಸಿದವರನ್ನು ಮತ ಎಣಿಕಾ ಕೇಂದ್ರದಿಂದ ಹೊರಗೆ ಕಳುಹಿಸಲಾಗುವುದು ಮತ್ತು ಕಾನೂನು ರೀತ್ಯಾ ಶಿಸ್ತು ಕ್ರಮ ಕೈಗೊಳ್ಳಲಾಗುವುದು .

      ಎಣಿಕಾ ಕಾರ್ಯದಲ್ಲಿ ರ್ಯಾಂಡಮ್ ಆಗಿ ಮರು ಪರಿಶೀಲನೆ ಮಾಡುವುದು ಅಬ್ಸರ್ವರ್‍ಗಳ ಕರ್ತವ್ಯವಾಗಿದ್ದು, ಅಂಚೆ ಮತ ಪತ್ರ ಎಣಿಕೆ ಮಾಡುವಾಗ ಮೈಕ್ರೋ ಅಬ್ಸರ್ವರ್‍ಗಳು ಎಆರ್‍ಓಗಳಿಗೆ ಎಣಿಕಾ ವರದಿ ನೀಡಬೇಕು ಎಂದು ಅವರು ತಿಳಿಸಿದರು. ಅಂಚೆ ಮತ ಪತ್ರಗಳಲ್ಲಿ ಮೊದಲು ಘೋಷಣಾ ಪತ್ರವನ್ನು ಗಮನಿಸಬೇಕಲ್ಲದೆ ಪತ್ರಾಂಕಿತ ಅಧಿಕಾರಿಯ ಸಹಿ ಕಡ್ಡಾಯವಾಗಿ ಇರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ಲಕೋಟೆ ಮತ್ತು ಸೀಲ್‍ಗಳನ್ನು ಪರಿಶೀಲಿಸಲು ಅಭ್ಯರ್ಥಿ/ಏಜೆಂಟರ್‍ಗಳಿಗೆ ಅವಕಾಶವಿದ್ದು, ಕಂಟ್ರೋಲ್ ಯೂನಿಟ್ ಸೂಟ್‍ಕೇಸ್ ಮತ್ತು ಅಡ್ರೆಸ್ ಟ್ಯಾಗ್, ವಿಶೇಷ ಟ್ಯಾಗ್‍ಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದು ಅವರು ನಿರ್ದೇಶನ ನೀಡಿದರು.

     ಮತ ಎಣಿಕೆ ಮಾಹಿತಿಯನ್ನು ಕೌಂಟಿಂಗ್ ಸೂಪರ್‍ವೈಸರ್‍ಗಳು ದಾಖಲಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಬ್ಯಾಲೆಟಿಂಗ್ ಯೂನಿಟ್‍ಗಳನ್ನು ಹೊರಗೆ ತರಬಾರದು. ಹಳದಿ ಹಾಗೂ ಪಿಂಕ್ ಬಣ್ಣದ ನಮೂನೆ-17(ಸಿ)ಯಲ್ಲಿಯೇ ಮತ ಎಣಿಕಾ ಮಾಹಿತಿಯನ್ನು ಎಂಟ್ರಿ ಮಾಡಬೇಕು ಎಂದು ಅವರು ಸೂಚಿದರು.

        ರಾಜ್ಯಮಟ್ಟದ ತರಬೇತಿದಾರರಾದ ರಿಜ್ವಾನ್‍ಭಾಷಾ, ಗೋಪಾಲ್ ಅವರು ತರಬೇತಿ ನೀಡಿದರು. ಸಭೆಯಲ್ಲಿ ಉಪವಿಭಾಗಾಧಿ ಕಾರಿಗಳಾದ ಶಿವಕುಮಾರ್ ಹಾಗೂ ಪೂವಿತ, ತಹಶೀಲ್ದಾರ್ ನಾಗರಾಜು, ಜಿಲ್ಲಾಧಿಕಾರಿ ಕಛೇರಿಯ ಸಹಾಯಕ ಮೋಹನ್, ಮೇಲ್ವಿಚಾರಕರು/ ಸಹಾಯಕರು, ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap