ರೋಲಿಂಗ್ ಶಟರ್ ಮುರಿದು ಮೊಬೈಲ್ ಕಳ್ಳತನ ಮಾಡುತ್ತಿದ್ದ ಮೂವರ ಬಂಧನ..!!

ಬೆಂಗಳೂರು

       ರೋಲಿಂಗ್ ಶಟರ್ ಮುರಿದು ಅಂಗಡಿಗೆ ನುಗ್ಗಿ 50 ಹೆಚ್ಚು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವೈಟ್‍ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ ಕೆ.ಆರ್. ಮಾರುಕಟ್ಟೆಯ ಬಾಲರಾಜ್ (29), ಮಹದೇವಪುರದ ಸಂಜಯ್ ಕುಮಾರ್ (28)ಹಾಗೂ ಪ್ರದೀಪ್ ಸಿಂಗ್ (31) ಬಂಧಿತ ಆರೋಪಿಗಳಾಗಿದ್ದು ಬಂಧಿತರಿಂದ ಲಕ್ಷಾಂತರ ಮೌಲ್ಯದ ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಅಬ್ದುಲ್ ಅಹದ್ ತಿಳಿಸಿದ್ದಾರೆ

        ಕಳವು ಮಾಡಿದ ಬೈಕ್‍ನಲ್ಲಿ ಬಂದಿದ್ದ ಆರೋಪಿಗಳು ವೈಟ್‍ಫೀಲ್ಡ್‍ನ ಮೊಬೈಲ್ ಅಂಗಡಿಯೊಂದರ ರೋಲಿಂಗ್ ಶಟರ್ ಮುರಿದು ಒಳನುಗ್ಗಿ 50 ಮೊಬೈಲ್‍ಗಳನ್ನು ಕಳವು ಮಾಡಿ ಬ್ಯಾಗ್‍ನಲ್ಲಿ ತುಂಬಿಕೊಂಡು ಪರಾರಿಯಾಗಿ ಪಟ್ಟಂದೂರು ಅಗ್ರಹಾರದ ಸ್ಮಶಾನಕ್ಕೆ ತಂದು ಸಮಾಧಿಯೊಂದರ ಹಿಂದೆ ಬಚ್ಚಿಟ್ಟು ಪರಾರಿಯಾಗಿದ್ದರು.

        ಮೊಬೈಲ್ ಕಳವು ಪ್ರಕರಣ ದಾಖಲಿಸಿ ಸ್ಥಳಕ್ಕೆ ಭೇಟಿ ನೀಡಿದ ಪೆÇಲೀಸರು ಪರಿಶೀಲನೆ ನಡೆಸಿದಾಗ ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಕಳ್ಳರ ಕೃತ್ಯ ಸೆರೆಯಾಗಿತ್ತು. ಕಳ್ಳರ ಅಸ್ಪಷ್ಟವಾದ ಚಹರೆಯ ಭಾವಚಿತ್ರವನ್ನು ಠಾಣೆಯ ಇತರ ಸಿಬ್ಬಂದಿಗೂ ನೀಡಿ, ಪತ್ತೆಹಚ್ಚುವಂತೆ ಸೂಚಿಸಲಾಗಿತ್ತು. ಆರೋಪಿಗಳ ಮುಖಚಹರೆ ಗಮನಿಸಿದಾಗ ನಗರದಲ್ಲಿ ಈ ಹಿಂದೆ ನಡೆದಿದ್ದ ಕೆಲ ಬೈಕ್ ಕಳ್ಳತನ, ಮನೆಗಳ್ಳತನ ಪ್ರಕಣರದಲ್ಲಿ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಪೆÇಲೀಸರಿಗೆ ಅನುಮಾನ ವ್ಯಕ್ತವಾಗಿತ್ತು.

       ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಬೈಕ್ ಕಳ್ಳತನ ಪ್ರಕರಣವೊಂದು ದಾಖಲಾಗಿತ್ತು. ಕೃತ್ಯ ನಡೆದ ಸ್ಥಳದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಕಳ್ಳರ ಮುಖಚಹರೆ ಸ್ಪಷ್ಟವಾಗಿ ಕಂಡು ಬಂದಿತ್ತು.ಇದನ್ನಿಟ್ಟುಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.

      ಪಟ್ಟಂದೂರ್ ಅಗ್ರಹಾರದಲ್ಲಿ ಈ ಮೂವರು ಆರೋಪಿಗಳೂ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕದಿಯಲು ಯತ್ನಿಸುತ್ತಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮೊಬೈಲ್ ಅಂಗಡಿಗೆ ಕನ್ನ ಹಾಕಿದ ಬಗ್ಗೆ ಬಾಯ್ಬಿಟ್ಟಿದ್ದಾರೆ ಎಂದು ವೈಟ್‍ಫೀಲ್ಡ್ ಪೊಲೀಸರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ