ಬೆಂಗಳೂರು
ಬರುವ ಫೆ.25ರಿಂದ ಮೂರು ದಿನಗಳ ಕಾಲ ನಗರದಲ್ಲಿ ಏಷ್ಯಾದ ವಾಣಿಜ್ಯ ಮತ್ತು ಕೈಗಾರಿಕಾ ಉದ್ಯಮಗಳ ಶೃಂಗಸಭೆ ನಡೆಯಲಿದ್ದು ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ
ಶೃಂಘಸಭೆಯ ಸಂಬಂಧ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಶ್ರೀಲಂಕಾ ವಾಣಿಜ್ಯ ಹಾಗೂ ಕೈಗಾರಿಕೆಗಳ ಮಹಾಮಂಡಳಿ ನಡುವಿನ ಏಷಿಯನ್ ಒಪ್ಪಂದಕ್ಕೆ ಸಹಿ ಹಾಕಿದವು.
ನಗರದ ಕೆಜಿ ರಸ್ತೆಯ ಎಫ್ ಕೆಸಿಸಿಐ ಪ್ರಧಾನ ಕಚೇರಿಯಲ್ಲಿ ಎಫ್ ಕೆಸಿಸಿಐನ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಹಾಗೂ ಇಂಡಿಯಾ ಏಷಿಯನ್ ಶ್ರೀಲಂಕಾದ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಅಧ್ಯಕ್ಷ ಎಸ್.ಸುಂದರ ರಾಜನ್ ಸಹಿ ಮಾಡಿದರು.
ನಂತರ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಧಾಕರ್ ಎಸ್.ಶೆಟ್ಟಿ ಅವರು,ಫೆಬ್ರವರಿ ತಿಂಗಳಿನಲ್ಲಿನಡೆಯುವ ಸಭೆ ಹಿನ್ನೆಲೆಯಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವೆ ಒಪ್ಪಂದ ಮಾಡಿಕೊಳ್ಳುವ ಮೂಲಕ 10 ದೇಶಗಳು ಇದರಲ್ಲಿ ಭಾಗವಹಿಸಲು ಸೂಚಿಸಿದವು. ಈ ಸಭೆಯಲ್ಲಿ ಜಗತ್ತಿನ 26ಕ್ಕೂ ಹೆಚ್ಚು ದೇಶಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಇದರಿಂದಾಗಿ ಭಾರತಕ್ಕೆ 50 ಸಾವಿರ ಕೋಟಿಗಳಷ್ಟು ಬಂಡವಾಳ ಹರಿದು ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ