ಕೊರಟಗೆರೆ 
ಕಳೆದ 30 ವರ್ಷಗಳಿಂದ ರಾಮ ಮಂದಿರ ನಿರ್ಮಾಣ ಮಾಡುತ್ತೇವೆಂದು ಅಹಿಂದು ಕೆಲಸದಲ್ಲಿ ಬಿಜೆಪಿ ಪಕ್ಷ ತೋಡಗಿದ್ದು ಅದರೊಂದಿಗೆ ಪ್ರದಾನ ಮಂತ್ರಿ ನರೇಂದ್ರ ಮೋದಿ ಅದಿಕಾರಕ್ಕೆ ಬಂದ ನಂತರ ಹಿಂದೂ ಧರ್ಮದ ಪ್ರತೀಕವಾದ ಶುಭ್ರವಾದ ಕೇಸರಿ ಬಣ್ಣಕ್ಕೆ ರಕ್ತದ ಕಲೆಯನ್ನು ಹಚ್ಚಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಉಸ್ತುವಾರಿ ಪ್ರೋ.ರಾಧಾಕೃಷ್ಣ ತಿಳಿಸಿದರು.
ಪಟ್ಟಣದ ಮಾಜಿ ತಾ.ಪಂ. ಅಧ್ಯಕ್ಷ ಕೆ.ಬಿ.ಲೋಕೆಶ್ ರವರ ಗೃಹದಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲಿ ಮಾತನಾಡಿ ರಾಮ ಹಟ್ಟಿದೇ ಬಿಲ್ಲನ್ನು ಮುರಿಯೋದಿಕ್ಕೆ ಕೊದಂಡ ರಾಮನ ಪೋಟೊ ಹಾಕಿಕೊಂಡಿರುವ ಬಿಜೆಪಿ ಪಕ್ಷ ರಾಮ ಮಂದಿರ ಕಟ್ಟುತ್ತೇವೆಂದು ಜನರಿಗೆ ಸುಳ್ಳು ಹೇಳಿಕೊಂಡು ಚುನಾವಣೆಯಲ್ಲಿ ಪ್ರನಾಳಿಕೆಯಾಗಿ ಇಟ್ಟುಕೊಂಡು ಅಹಿಂದು ಕೆಲಸದಲ್ಲಿ ಪಕ್ಷ ತೋಡಿಗಿರುವ ಪ್ರದಾನ ಮಂತ್ರಿ ಮೋದಿಯವರು ಮತಾಂದತೆಯ ಮೂಲಕ ಅಧಿಕಾರಕ್ಕೆ ಬಂದ ಪಾಕಿಸ್ಥಾನದ ಇಮ್ರಾನ್‍ಖಾನ್ ಮತ್ತು ಭಾರತದ ಮೋದಿಗೆ ಸಾಮ್ಯತೆ ಇರುವುದರಿಂದಲೇ ಇಮ್ರಾನ್ ಮತ್ತೆ ಮೋದಿ ಪ್ರಧಾನಿಯಾಗಲಿ ಎಂದು ತಿಳಿಸಿದರು.
ಚುನಾವಣಾ ಬಾಂಡ್‍ನಿಂದ ಸ್ವೀಕರಿಸುವ ಹಣದ ಪರದರ್ಶಕತೆ ವಿಚಾರದಲ್ಲಿ ಮೋದಿಯವರ ಬಣ್ಣ ಬಯಲಾಗಲಿದೆ ಎಂದ ಅವರು ನೆಲ, ಜಲ, ಬಾಷೆ ಮತ್ತು ಹಿಂದು ಧರ್ಮದ ಬಗ್ಗೆ ಯಾರೂ ಪ್ರಶ್ನಿಸುವಂತಿಲ್ಲ ಎಂದು ಹೇಳಿ ಗುಜರಾತ್ ರಾಜ್ಯದಿಂದ ಗಡೀಪಾರು ಆಗಿರುವ ಅಮೀದ್ ಷಾ ಜೊತೆ ಸೇರಿ ರಾಷ್ಟ್ರವನ್ನು ಲೋಟಿ ಮಾಡುತ್ತಿರುವ ಮೋದಿ ರವರಿ ಬಗ್ಗೆ ಯುವ ಜನಾಂಗ ಎಚೆತ್ತುಕೊಂಡು ಪ್ರಶ್ನಿಸುವ ಮನೋಭಾವ ಬೇಳಿಸಿಕೋಳ್ಳಬೇಕು
ಈ ನಿಟ್ಟಿದಲ್ಲಿ ಪತ್ರಕರ್ತರು ಯುವಕರಿಗೆ ಮಾಹಿ ನೀಡಬೇಕು ಎಂದು ತಿಳಿಸಿದ ಅವರು ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರದಾನ ಮಂತ್ರಿ ಹೆಚ್.ಡಿ.ದೇವೇಗೌಡರವರು 3 ಲಕ್ಷ ಮತಗಳ ಅಂತರದಲ್ಲಿ ಗೆಲುವು ಖಚಿತವಾಗಿದ್ದು ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆಗೆ ನೀರಾವರಿಗೆ ಹೆಚ್ಚು ಅಧ್ಯತೆ ನೀಡುವರು ಎಂದರು. ಕೌಶಲ್ಯಾಭಿವೃಧ್ದಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ ಸಮ್ಮಿಶ್ರ ಪಕ್ಷಗಳ ಅಭ್ಯರ್ಥಿ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರವರು ತುಮಕೂರು ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಹಾಗೂ ಶೈಕ್ಷಣಿಕವಾಗಿ ಹೆಚ್ಚು ಆದ್ಯತೆ ನೀಡಲು ಈ ಗಾಗಲೇ ಹಲವಾರು ರೀತಿಯ ಯೋಜನೆಗಳನ್ನು ರೂಪಿಸಿರುವ ದೇವೇಗೌಡ ರಿಗೆ ಬೆಂಬಲ ನೀಡುವ ಮೂಲಕ ಕೇಂದ್ರದಲಿ ಯುವನಾಯಕ ರಾಹುಲ್ ಗಾಂದಿಯನ್ನು ಪ್ರದಾನ ಮಂತ್ರಿ ಮಾಡಬೇಕಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಕಾನೂನು ರಾಜ್ಯ ಘಟಕದ ಉಪಾಧ್ಯಕ್ಷ ಅಹಮದ್ ಮಾತನಾಡಿ ಬಿಜೆಪಿಗೆ 1500 ಕೋಟಿ ಹಣ ದೇಣೆಗೆ ಬಂದಿದೆ ಇದನ್ನು ಯಾರು ಕೊಟ್ಟರು ಎನ್ನುವ ವಿಚಾರನ್ನು ಮತದಾರರಿಗೆ ಮತ್ತು ಮಾಧ್ಯಮದವರಿಗೆ ತಿಳಿಯದಂತೆ ಬಿಜೆಪಿ ವಂಚಿಸುತ್ತಿದೆ, ಚುನಾವಣೆ ಸಂದರ್ಭದಲ್ಲಿ ಪಕ್ಷದ ಚುನಾವಣಾ ವ್ಯಚ್ಚಕ್ಕೆ ದೇಣಿಗೆ ನೀಡುವವರು ಆದಾಯದ ಮೂಲಕವನ್ನು ಘೋಷಿಸುವ ಅವಶ್ಯಕತೆಯಿಲ್ಲ ಎನ್ನುವ ಬಿಲ್‍ನ್ನುಫಾಸ್ ಮಾಡಿದ್ದರು ಆದರೆ ಹೈಕೋರ್ಟ್ ಇದನ್ನು ತಡೆ ಹಿಡಿದಿದೆ ಎಂದ ಅವರು ನಾವೆಲ್ಲರೂ ಅದನ್ನು ಪ್ರಶ್ನಿಸುವ ಪೌವೃತ್ತಿಯನ್ನು ಬಳಸಿಕೊಳ್ಳಬೇಕು ಎಂದು ತಿಳಿಸಿದ ಅವರು ಹಿರಿಯರನ್ನು ಗೌರವಿಸುವುದು ನಮ್ಮ ಭಾರತೀಯ ಸಂಸ್ಕತಿ ಆಗಿದೆ, ಆದರೆ ವಾಜಪೇಯಿಯನ್ನು ಅವಮಾನಿ ಸಿದ ಮೋದಿಗೆ ಜನರು ಚುನಾವಣೆಯಲಿ ತಕ್ಕ ಪಾಠ ಕಲಿಸುತ್ತಾರೆ ತಮಿಳುನಾಡು ರಾಜ್ಯದಿಂದ 111 ಮಂದಿ ರೈತರು ಮೋದಿಯ ವಿರುದ್ದ ಸ್ಪರ್ದೆಗೆ ನಿಂತಿರುವುದೇ ಸಾಕ್ಷಿ ಯಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಕೆ.ಬಿ ಲೋಕೇಶ್, ಮುಖಂಡರಾದ ಗೋವಿಂದೇಗೌಡ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








