ಸಿದ್ದಗಂಗಾ ಶ್ರೀಗಳನ್ನು ಮನ್ ಕಿ ಬಾತ್ ನಲ್ಲಿ ನೆನೆಸಿಕೊಂಡ ಮೋದಿ..!!

ನವದೆಹಲಿ:
 
          ಪ್ರಧಾನ ಮಂತ್ರಿಗಳು ರಾಷ್ಟ್ರದ ಗ್ರಾಮೀಣ ಜನರನ್ನು ತಲುಪಲು ಆಯ್ದುಕೊಂಡ ಏಕೈಕ ಮಾಧ್ಯಮವೆಂದರೆ ಅದೇ ಮನ್ ಕಿ ಬಾತ್ ಅದರಲ್ಲಿ ಅವರು ದೇಶದ ಮುಂದಿನ ಭವಿಷ್ಯ ಅದಕ್ಕೆ ಬೇಕಾದ ರೂಪು ರೇಶೆ ಎಲ್ಲವನ್ನು ಚರ್ಚೆ ನಡೆಸುವುಸುವುದು ಸಾಮಾನ್ಯ ಆದರೆ ಈ ಬಾರಿಯ ಮನ್ ಕಿ ಬಾತ್ ನಲ್ಲಿ ಅವರು ಕರ್ನಾಟಕ ರತ್ನ ಶ್ರೀ ಶ್ರೀ ಶ್ರೀ ಶಿವ ಕುಮಾರ ಸ್ವಾಮಿಗಳನ್ನು ನೆನಪಿಸಿಕೊಂಡಿದ್ದಾರೆ .
        ಬಸವಣ್ಣನವರು ಕಾಯಕವೇ ಕೈಲಾಸ ಎಂದು ನಂಬಿದ್ದರು,  ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಬಸವಣ್ಣನನರ ಮಾರ್ಗದಲ್ಲಿ ಸಾಗಿದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
        ಈ ವರ್ಷದಲ್ಲಿ ಮೊದಲನೆ ಬಾರಿಗೆ  ರೇಡಿಯೋ ಕಾರ್ಯಕ್ರಮ  ಮನ್  ಕೀ ಬಾತ್ ನಲ್ಲಿ ಮಾತನಾಡಿದ ನರೇಂದ್ರ ಮೋದಿ, ಜನವರಿ ತಿಂಗಳಲ್ಲಿ ನಾವು ಒಂದು ಕೆಟ್ಟ ಸುದ್ದಿ ಕೇಳಿದೆವು, ಅದು ನಡೆದಾಡುವ ದೇವರು ಎಂದೇ ಪ್ರಸಿದ್ಧರಾಗಿದ್ದ 111 ವರ್ಷ ಸಿದ್ದಗಂಗಾ ಶ್ರಿಗಳು ನಿಧನರಾಗಿದ್ದು, ಅವರು ಸಮಾಜಕ್ಕೆ ನೀಡಿದ ಕೊಡುಗೆ ಅಪಾರ, ಸಾವಿರಾರು ಮಂದಿಗೆ ಶಿಕ್ಷಣ, ಊಟ ವಸತಿ ನೀಡಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಹೇಳಿದ್ದಾರೆ.
        ಇನ್ನೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಹುಟ್ಟುಹಬ್ಬದ ಅಂಗವಾಗಿ ಜನವರಿ 23 ರಂದು ಅವರ ವಸ್ತು ಸಂಗ್ರಹಾಲಯವನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು.ಸಾರ್ವಜನಿಕರ ಒತ್ತಾಯವನ್ನು ಪೂರ್ಣಗೊಳಿಸಿದ್ದು ಸಂತೋಷ ತಂದಿದೆ ಎಂದು ಹೇಳಿದ್ದಾರೆ .
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap