ತ್ರಿಶೂರ್:
ಎರಡನೆ ಬಾರಿಗೆ ಪ್ರಧಾನಿ ಪಟ್ಟಕ್ಕೇರಿದ ನರೇಂದ್ರ ಮೋದಿ ಅವರು ಇಂದು ಗುರುವಾಯೂರಿನ ಶ್ರೀಕೃಷ್ಣನ ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ತಾವರೆ ಹೂವುಗಳ ತುಲಾಭಾರ ಸೇವೆ ಸಲ್ಲಿಸಿದ್ದಾರೆ.
ತಮಿಳುನಾಡಿನಿಂದ ತರಿಸಲಾಗಿದ್ದ ಕಮಲದ ಹೂವುಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಬಳಿಕ ಕದಳಿ ಬಾಳೆ, ಹಾಲು ಪರಮಾನ್ನ , ತುಪ್ಪ ಮತ್ತು ಶೇಷ ವಸ್ತ್ರ ಸಮರ್ಪಿಸಿದ ಮೋದಿ ಕೃಷ್ಣನ ಆಶೀರ್ವಾದ ಪಡೆದರು ಅವರೊಂದಿಗೆ ದೇವಸ್ವಂ ಮಂಡಳಿಯ ಸದಸ್ಯರು, ಕೇರಳದ ಪ್ರಮುಖ ಬಿಜೆಪಿ ಮುಖಂಡರು ದೇವಾಲಯಕ್ಕೆ ಆಗಮಿಸಿದ್ದರು.