ಮೋದಿ ಪುನಃ ಪ್ರಧಾನಿಯಾಗುವುದು ಖಚಿತ : ಸೋಮಣ್ಣ

ಮಧುಗಿರಿ

      ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗುವುದು ಶೇ.100 ರಷ್ಟು ಖಚಿತ ಎಂದು ಮಾಜಿ ವಸತಿ ಸಚಿವ ಹಾಗೂ ಶಾಸಕ ವಿ. ಸೋಮಣ್ಣ ಅಭಿಪ್ರಾಯಪಟ್ಟರು.ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಕಾರ್ಯತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾದ ನಂತರ ಈ ದೇಶವು ಸಮಗ್ರ ಅಭಿವೃದ್ದಿಯತ್ತ ಸಾಗಿದೆ.

      ಮುಂದಿನ ದಿನಗಳಲ್ಲಿ ವಿಶ್ವದಲ್ಲೇ ಭಾರತವು ಮುಂಚೂಣಿಯಲ್ಲಿರಲಿದೆ. ಈಗ ಮೋದಿಜಿಯವರನ್ನು ಪಾಕಿಸ್ತಾನವು ಕೂಡ ಒಪ್ಪುತ್ತಿದು ದೇಶ-ವಿದೇಶದ ಜನರು ಇವರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ರೈತರಿಗೆ, ಜನಸಾಮನ್ಯರಿಗೆ, ಮಹಿಳೆಯರಿಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದಾರೆ. ನಮ್ಮ ದೇಶಕ್ಕೆ ಅವರು ಅನಿವಾರ್ಯ ವಾಗಿದ್ದಾರೆ ಎಂದರು.

       ಜಿಲ್ಲೆಯಲ್ಲಿ ಮುದ್ದಹನುಮೆಗೌಡರಿಗೆ ಸ್ಪರ್ಧೆ ಮಾಡಲು ಅವಕಾಶ ನೀಡದ ದೇವೆಗೌಡರು, ತಮ್ಮ ಕುಟುಂಬದವರನ್ನು ರಾಜಕೀಯಕ್ಕೆ ತರಲು ಹರಸಾಹಸ ಪಡುತ್ತಿದ್ದಾರೆ. ಈ ವಯೋಮಾನದಲ್ಲಿ ಅವರು ಜನ ಸೇವೆ ಮಾಡುವುದು ಅಸಾಧ್ಯ ಹಾಗೂ ವಿಪರ್ಯಾಸ. ಪಕ್ಷ ಯಾವುದೇ ಇರಲಿ ಅಭಿವೃದ್ದಿ ಕಾರ್ಯವನ್ನು ಎಲ್ಲರೂ ಮೆಚ್ಚ ಬೇಕು. ಈ ನಿಟ್ಟಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಕ್ಷೇತ್ರದಾದ್ಯಂತ ಹಲವು ಪ್ರಗತಿಪರ ಕಾರ್ಯಗಳನ್ನು ಕೈಗೊಂಡಿದ್ದಾರೆ.

        ಅವರು ಮಾಡಿರುವ ಅಭಿವೃದ್ದಿ ಶ್ಲಾಘನೀಯ ಎಂದರು.ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಶಿವಪ್ರಸಾದ್, ತಾಲ್ಲೂಕು ಅಧ್ಯಕ್ಷ ರಮೇಶ್ ರೆಡ್ಡಿ, ಮುಖಂಡರಾದ ಜ್ಯೋತಿನಾಗರಾಜ್, ತಿಮ್ಮಾರೆಡ್ಡಿ, ಶ್ರೀನಿವಾಸ್, ನರಸಿಂಹಗೌಡ, ಮೂಡ್ಲಿ ಗಿರೀಶ್, ರಂಗನಾಥ್ ಇನ್ನಿತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link