ಬೆಂಗಳೂರು
ಅಶ್ಲೀಲ ಸಂದೇಶ ಕಳುಹಿಸಿದ ಆಂಗ್ಲ ನಿಯತಕಾಲಿಕೆಯ ವ್ಯಂಗ್ಯಚಿತ್ರಗಾರನೊಬ್ಬನ ವಿರುದ್ಧ ದೂರು ದಾಖಲಿಸಿರುವ ನಟಿ, ರೂಪದರ್ಶಿಯೊಬ್ಬರು ಆತ ಕಳುಹಿಸಿದ್ದ ಸಂದೇಶಗಳನ್ನು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೃತ್ತಿ ಪರ ಪತ್ರಕರ್ತ ಎಂದು ಹೇಳಿಕೊಂಡು ದೊಡ್ಡ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ನಂಬಿಸಿ ಫೇಸ್ಬುಕ್ನಲ್ಲಿ ಪರಿಚಯ ಮಾಡಿಕೊಂಡು ಸ್ನೇಹಿತರಾದ ಕೂಡಲೇ ಮೆಸೆಂಜರ್ನಲ್ಲಿ ಸಂದೇಶ ಕಳುಹಿಸಿದ್ದ ಎಂದು ಸಂತ್ರಸ್ತೆಯು ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಅವಾಚ್ಯ ಶಬ್ಧದಿಂದ ನಿಂದಿಸಿ ಕೀಳುಮಟ್ಟದ ಪದ ಬಳಸಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದು ಇದರಿಂದ ಬೇಸರಗೊಂಡ ನಾನು ಪೆÇಲೀಸರಿಗೆ ದೂರು ನೀಡುತ್ತೇನೆ ಎಂದು ಎಚ್ಚರಿಕೆ ನೀಡಿದರೂ ಅದಕ್ಕೆ ಜಗ್ಗದ ಈತ ಮತ್ತೆ ಸಂದೇಶ ಕಳುಹಿಸಿದ್ದ.ಆತನಿಗೆ ತಕ್ಕ ಪಾಠ ಕಲಿಸಲು ಆತ ಕಳುಹಿಸಿದ್ದ ಅಶ್ಲೀಲ ಸಂದೇಶಗಳ ಸ್ಕ್ರೀನ್ಶಾಟ್ಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದು ಅವುಗಳು ವೈರಲ್ಆಗಿವೆ.
ಸಂತ್ರಸ್ತೆ ಹಂಚಿಕೊಂಡಿರುವ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು, ಆರೋಪಿಗೆ ತಕ್ಕ ಶಿಕ್ಷೆ ಆಗಬೇಕೆಂದು ಕಮೆಂಟ್ ಮಾಡುತ್ತಿದ್ದಾರೆ.ರೂಪದರ್ಶಿಯು ಈ ಪೋಸ್ಟ್ ಹಂಚಿಕೊಂಡ ಬೆನ್ನಲ್ಲೇ ವ್ಯಂಗ್ಯಚಿತ್ರಗಾರ ಸಂತ್ರಸ್ಥೆಯು ಕಳುಹಿಸಿದ್ದ ಕೆಲವು ವಾಟ್ಸಾಪ್ ಸಂದೇಶಗಳನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾನೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಟಿ ಸುನಿಲ್ ಕುಮಾರ್ ಹಾಗೂ ಸೈಬರ್ ಕ್ರೈಂ ಗೆ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಮಾಡಲು ಮುಂದಾಗಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








