ದಾವಣಗೆರೆ :
ನಗರದ ಮಂಡಕ್ಕಿಭಟ್ಟಿ ಪ್ರದೇಶದಲ್ಲಿ 32.36 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ ನಿರ್ಮಿಸಿರುವ ಅತ್ಯಾಧುನಿಕ ಶೌಚಾಲಯವನ್ನು ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಭಾನುವಾರ ಲೋಕಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ, ದಾವಣಗೆರೆ ಸ್ಮಾರ್ಟ್‍ಸಿಟಿಗೆ ಆಯ್ಕೆಯಾದ ಬಳಿಕ ಸ್ಮಾರ್ಟ್‍ಸಿಟಿಯ ಪ್ರಥಮ ಯೋಜನೆ ಆರಂಭಗೊಂಡಿದ್ದು, ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಸ್ಮಾರ್ಟ್‍ಸಿಟಿ ಯೋಜನೆಯಡಿ 32.36 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಈ ಅತ್ಯಾಧುನಿಕ ಶೌಚಾಲಯಗಳಲ್ಲಿ 2 ಬ್ಲಾಕ್ ನಿರ್ಮಿಸಿ 1 ಪುರುಷರು, ಮತ್ತೊಂದು ಮಹಿಳೆಯರಿಗೆ ಮೀಸಲಿಟ್ಟು, ಎರಡು ಬ್ಲಾಕ್ ನಲ್ಲಿ 5 ಸ್ನಾನದ ಕೋಣೆಗಳು, 4 ಶೌಚಾಲಯ ಕೋಣೆಗಳು ಇವೆ. ಶೌಚಾಲಯಗಳ ನಿರ್ವಹಣೆಗಾಗಿ ಗುತ್ತಿಗೆ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾದ ಶ್ರೀಮತಿ ಶೋಭಾ ಪಲ್ಲಾಗಟ್ಟೆ, ಮಹಾಪೌರರಾದ ಕೆ.ಚಮನ್ ಸಾಬ್, ಸದಸ್ಯರುಗಳಾದ ಎ.ಬಿ.ರಹೀಂಸಾಬ್, ಅಲ್ತಾಫ್ ಹುಸೇನ್, ಡೂಡಾ ಮಾಜಿ ಅಧ್ಯಕ್ಷ ಅಯೂಬ್ ಪೈಲ್ವಾನ್, ಕಾರ್ಯಪಾಲಕ ಅಭಿಯಂತರರಾದ ಗುರುಪಾದಯ್ಯ , ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್, ಹೈಡೆಕ್ ಸಂಸ್ಥೆಯ ಶ್ರೀನಾಥ್ ರೆಡ್ಡಿ , ಚಂದ್ರಶೇಖರ್, ಮಂಡಕ್ಕಿ ಭಟ್ಟಿ ಸಂಘದ ಕಾರ್ಯದರ್ಶಿ ಎಂ.ಆರ್.ಸಿದ್ದಿಕ್, ಮುಖಂಡರಾದ ಜಾಕೀರ್, ದಾದಾಪೀರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ