ಬೆಂಗಳೂರು
ಸ್ವಯಂ ಸೇವಾ ಸಂಸ್ಥೆ(ಎನ್‍ಜಿಒ)ಯೊಂದರಲ್ಲಿ ಹಣ ಹೂಡಿಕೆ ಮಾಡಿದರೆ ಒಂದೇ ವರ್ಷದಲ್ಲಿ ಹಣ ದುಪ್ಪಟ್ಟು ಮಾಡಿಕೊಡುವುದಾಗಿ ಹೇಳಿ ಮಹಿಳೆಯರಿಂದ 1 ಕೋಟಿಗೂ ಅಧಿಕ ಹಣವನ್ನು ಪಡೆದು ಐನಾತಿ ಮಹಿಳೆಯೊಬ್ಬಳು ವಂಚನೆ ನಡೆಸಿ ಪರಾರಿಯಾಗಿರುವ ಕೃತ್ಯ ಹಲಸೂರಿನಲ್ಲಿ ನಡೆದಿದೆ.
ಎಚ್.ಆರ್ ಕನ್ಸಲ್ಟೆನ್ಸಿಯ ಸಲೋಮಿ ರಾಬರ್ಟ್ ಎಂಬ ಮಹಿಳೆ ಎನ್‍ಜಿಓ ಮತ್ತು ಖಾಸಗಿ ಕಂಪನಿ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾಗಿ ಹೇಳಿ ಹಣ ಪಡೆದು ವಂಚನೆ ನಡೆಸಿದ್ದು ಆಕೆಗಾಗಿ ಶೋಧ ನಡೆಸಲಾಗಿದೆ.
ದೊಮ್ಮಲೂರು ಲೇಔಟ್‍ನಲ್ಲಿ ವಾಸವಿರುವ ಕಲ್ಪನಾ, ರೂಪಾ, ರಾಜೇಶ್ವರಿ ಸೇರಿದಂತೆ ಇತರನ್ನು ಪರಿಚಯ ಮಾಡಿಕೊಂಡು, ವಿಶ್ವಾಸ ಗಿಟ್ಟಿಸಿದ್ದಳು.ಎನ್‍ಜಿಓ ಮತ್ತು ಖಾಸಗಿ ಕಂಪನಿ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದ್ದಾಗಿಯೂ ಹೇಳಿದ್ದಳು.
ಸಲೋಮಿಯ ಬಿಸಿನೆಸ್ ಪಾಲುದಾರ ಸ್ಯಾಮ್ ಕ್ರಿಸ್ಟೋಫರ್, ವೆಂಕಟಲಕ್ಷ್ಮೀ, ಶಾನ್ ಕುಮಾರ್ ಸೇರಿದಂತೆ ಇನ್ನಿತರರು ಸೇರಿಕೊಂಡು ಶ್ರಾವಣಿ ಮತ್ತು ಇತರ ಮಹಿಳೆಯರಿಗೆ ತಮ್ಮ ಕಂಪನಿಯಲ್ಲಿ ಹಣ ಹೂಡಿಕೆ ಮಾಡುವಂತೆ ಮನವೊಲಿಸಿದ್ದರು. ನಮ್ಮಲ್ಲಿ ಹೂಡಿಕೆ ಮಾಡಿದರೆ ಒಂದೇ ವರ್ಷಕ್ಕೆ ಹಣ ದುಪ್ಟಟ್ಟು ಕೊಡಿಸುತ್ತೇವೆ ಎಂದು ನಂಬಿಸಿದ್ದರು.
ಸಲೋಮಿ ಮಾತು ನಂಬಿದ ಮಹಿಳೆಯರು, ನಿಧಾನವಾಗಿ ಹಣ ನೀಡಲು ಆರಂಭಿಸಿದ್ದು, 1.28 ಕೋಟಿ ರೂನೀಡಿದ್ದರು. ಹಣ ಪಡೆದ ಒಂದು ವರ್ಷಕ್ಕೆ ಸರಿಯಾಗಿ ಹೂಡಿಕೆ ಮಾಡಿದ ಮೊತ್ತಕ್ಕೆ ದುಪ್ಪಟ್ಟು ಹಣವನ್ನು ಹೂಡಿಕೆದಾರರು ನಿರೀಕ್ಷಿಸಿದ್ದರು. ಆದರೆ, ಹಣ ಕೊಡಲು ಸಲೋಮಿ ನಿರಾಕರಿಸುತ್ತಿದ್ದಳು. ಹಣ ಮರಳಿಸುವಂತೆ ಕೇಳಿದರೆ ಬೆದರಿಸಲು ಆರಂಭಿಸಿದ ಸಲೋಮಿ, ಪೆÇಲೀಸರಿಗೆ ತಿಳಿಸಬೇಡ ಎಂದಿದ್ದಳು. ಅಂತಿಮವಾಗಿ ಮಹಿಳೆಯರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
