ತುಮಕೂರು
ಪ್ರಕೃತಿ ಮತ್ತು ಮಾನವ ನಿರ್ಮಿತ ಪರಿಸರದಿಂದ ಉಂಟಾಗುವ ವಿಕೋಪವನ್ನು ಪರಿಹರಿಸಲು ಸಿದ್ದರಿರುವ ಎಲ್ಲಾ ಸ್ವಯಂ ಸೇವಕರು ಈ ಸಮಾಜದ ಬಹು ದೊಡ್ಡ ಆಸ್ತಿ ಆಗಾಗಿ ರೆಡ್ ಕ್ರಾಸ್ ಮತ್ತು ಸ್ಕೌಟ್ ಅಂಡ್ ಗೈಡ್ಸ್‍ನ ಮೂಲಕ ಈ ದಿನ ತರಬೇತಿ ಪಡೆದು ಮಾಡುವ ಸೇವೆ ಶ್ಲಾಘನೀಯ ಎಂದು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ವೈ.ಎಸ್.ಸಿದ್ದೇಗೌಡ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಯುವ ರೆಡ್ ಕ್ರಾಸ್ ಘಟಕ, ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತುಮಕೂರು ಶಾಖೆ ವತಿಯಿಂದ ವಿಶ್ವವಿದ್ಯಾನಿಲಯ ವ್ಯಾಪ್ತಿಯಲ್ಲಿನ ಯುವ ರೆಡ್ ಕ್ರಾಸ್ ಘಟಕ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ಕಾರ್ಯಕ್ರಮ ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಈ ಸಾಲಿನ ಕಾರ್ಯಕ್ರಮಗಳ ಕ್ರಿಯಾಯೋಜನೆ ಕುರಿತಾದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಪ್ರತಿನಿತ್ಯ ಸಂಕಿರಣ ಮತ್ತು ಕ್ಲಿಷ್ಟಕರವಾದ ವಾತವರಣ ಸೃಷ್ಟಿಯಾಗುತ್ತದೆ, ಇದಕ್ಕೆ ಶಿಕ್ಷಣ ವ್ಯವಸ್ಥೆ ಬದಲಾಗಿ ಶಿಕ್ಷಣ ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳು ಕೇವಲ ಕೊಠಡಿ ಕಲಿಕೆಗೆ ಸೀಮಿತವಾಗಿರದೆ ಪ್ರಾಯೋಗಿಕವಾಗಿ ಆಯಾ ಜ್ಞಾನ ಕ್ಷೇತ್ರಕ್ಕೆ ವಿಸ್ತರಣೆಗೊಳ್ಳುವ ಅವಶ್ಯಕತೆ ಇದೆ . ಇದಕ್ಕೆ ಈಗಾಗಲೇ ವಿಶ್ವವಿದ್ಯಾನಿಲಯಗಳ ಧನ ಸಹಾಯ ಆಯೋಗ ಶಿಕ್ಷಣದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಸಿದ್ದತೆ ಮಾಡಿಕೊಳ್ಳುತಿದೆ.
ಇದರಲ್ಲಿ ಮೌಲ್ಯಯುತ ಶಿಕ್ಷಣದ ಜೊತೆಗೆ ವೈಚಾರಿಕ ಅಂಶಗಳು ಒಳಗೊಂಡು ಹೆಚ್ಚು ಕೌಶಲ್ಯ ನೈಪುಣ್ಯತೆಗಳನ್ನು ಸಾಧಿಸಬಹುದಾಗಿದೆ ಈ ತೆರೆನಾದ ಶಿಕ್ಷಣವನ್ನು ರೆಡ್ ಕ್ರಾಸ್ ಭಾರತ್ ಸ್ಕೌಟ್ ಅಂಡ್ ಗೈಡ್ಸ್ ಶಿಸ್ತು ಬದ್ದವಾಗಿ ಪ್ರತಿಫಲಾಪೇಕ್ಷೆ ಇಲ್ಲದೆ ರಕ್ತದಾನ ವಿಪತ್ತು ನಿರ್ವಹಣೆ ಕ್ಷೇತ್ರಗಳಲ್ಲಿ ಸಕ್ರಿಯವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿಗಳಾದ ಎಸ್ ನಾಗಣ್ಣನವರು ಮಾತನಾಡಿ, ಭಾರತ ಸಂವಿಧಾನ 15ನೇ ವಿಧಿಯ ಉಲ್ಲೇಖದನ್ವಯ ಮೌಲ್ಯಯುತ ಅಂಶಗಳ ಆಶಯದಂತೆ ಭಾರತೀಯ ರೆಡ್ ಕ್ರಾಸ್ ಮತ್ತು ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ. ತುಮಕೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಮತ್ತು ವಿವಿಧ ಕಾಲೇಜುಗಳಲ್ಲಿನ ಯುವ ರೆಡ್ ಕ್ರಾಸ್ ಘಟಕಗಳು ಆಸಕ್ತಿದಾಯಕವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಮದರು.
ಪಠ್ಯ ಚಟುವಟಿಕೆಗಳೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಬೋಧಕ ಮತ್ತು ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಕೊಳ್ಳುವುದರಿಂದ ವ್ಯಕ್ತಿತ್ವ ವಿಕಸನ ಸೃಜನ ಶೀಲ ಬೌದ್ಧಿಕ ಚಿಂತನೆಗಳು ವೃದ್ಧಿಯಾಗುತ್ತವೆ ಆದ್ದರಿಂದ ಸೇವಾ ಮನೋಭಾವ ರೂಡಿಸಿಕೊಳ್ಳಲು ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ರಾಷ್ಟ್ರೀಯ ಸೇವಾ ಯೋಜನೆ, ಎನ್.ಸಿ.ಸಿ, ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗಳು ಶಿಕ್ಷಣದ ಮಹತ್ವವನ್ನ ಹೆಚ್ಚಿಸಿವೆ.
ರಾಜ್ಯದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಅತಿ ಹೆಚ್ಚು ಯುವ ರೆಡ್ ಕ್ರಾಸ್ ಘಟಕದ ಸದಸ್ಯರನ್ನು ನೊಂದಾವಣಿ ಮಾಡಿಸಿದ್ದು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಿ ರಾಜ್ಯ ಮಟ್ಟದಲ್ಲಿ ಉತ್ತಮ ಹೆಸರುಗಳಿಸಿದೆ. ಇದನ್ನು ಮತ್ತಷ್ಟು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಜವಬ್ದಾರಿ ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಕಾರ್ಯಕ್ರಮಾಧಿಕಾರಿಗಳ ಮೇಲೆ ಅವಲಂಭಿತವಾಗಿರುತ್ತದೆ. ಆದ್ದರಿಂದ ಈ ಅಧಿಕಾರಿಗಳು ನಿಸ್ವಾರ್ಥ ಮತ್ತು ಪ್ರಾಮಾಣಿಕವಾಗಿ ತಮ್ಮ ಜವಬ್ದಾರಿಗಳನ್ನು ನಿರ್ವಹಿಸಿ ಸದೃಢ ಸಮಾಜಕ್ಕೆ ಯುವಪೀಳಿಗೆಯಲ್ಲಿ ಸೇವಾ ಮನೋಭಾವನೆಯನ್ನು ವೃದ್ಧಿಸಬೇಕೆಂದು ತಿಳಿಸಿದರು.
ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ನ ರಾಜ್ಯ ಕಾರ್ಯದರ್ಶಿಯಾದ ಗಂಗಪ್ಪಗೌಡ ಮಾತನಾಡಿ, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿ ಸಮುದಾಯ ಕೇವಲ ಅಂಕಗಳಿಸಲು ಸೀಮಿತವಾಗಿದ್ದು ನೈತಿಕ ಮತ್ತು ಸಮಾಜಿಕ ಜವಬ್ದಾರಿಯನ್ನು ಮರೆತಿರುವುದು ದುರಾದೃಷ್ಟಕರ. ಬಡವರು ಮತ್ತು ಶ್ರೀಮಂತರು, ವಯಸ್ಸಾದವರು ಮತ್ತು ವಯಸ್ಕರುಸರ್ವರ ಸಮನ್ವಯತೆಯೊಂದಿಗೆ ಸರ್ವಾಂಗೀಣ ಅಭಿವೃದ್ಧಿಯಾಗುವ ಮತ್ತು ಮೌಲ್ಯಯುತ ಶಿಕ್ಷಣದ ಅವಶ್ಯಕತೆ ಇದೆ ಇದಕ್ಕೆ ಪೂರಕವಾಗಿ ಎನ್.ಎಸ್.ಎಸ್, ಎನ್.ಸಿ.ಸಿ. ರೆಡ್ ಕ್ರಾಸ್, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್‍ಗಳಂತಹ ಪಠ್ಯೇತರ ಅಂಶಗಳು ವಿದೈರ್ಥಿಗಳಿಗೆ ನೈಜ ಬೋಧನೆ ಕಲಿಸಲಿವೆ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕರಾದ ಪ್ರೊ. ಪರಶುರಾಮ್ ಭಾರತೀಯ ಸ್ಕೌಟ್ಸ್ ಅಂಡ್ ಗೈಡ್ಸ್,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಮಾಜದಿಂದ ಹಿಂದುಳಿದ ವಿಕಲಚೇತನರು, ಬುದ್ದಿಮಾಂದ್ಯರು ಕಿವುಡ, ಮೂಗ ಮಕ್ಕಳು, ಪ್ರಕೃತಿ ವಿಕೋಪಕ್ಕೆ ಒಳಗಾದ ನಿರಾಶ್ರಿತರು ಇನ್ನ್ನೂ ಮುಂತಾದವರಿಗೆ ಸಿ.ಎಸ್.ಆರ್ ಮತ್ತು ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆಗಳಿಂದ ನಿಧಿ ಸಂಗ್ರಹಿಸಿ ಅವಶ್ಯಕ ಸಾಧನ ಸಲಕರಣೆಗಳನ್ನು ಪೂರೈಸಲಾಗುತ್ತಿದೆ.
ರಕ್ತ ನಿಧಿಕೇಂದ್ರಗಳಿಗೆ ಉಚಿತವಾಗಿ ರಕ್ತದಾನ ಮಾಡಲು ಯುವಜನರಲ್ಲಿ ಪ್ರೇರಣೆ ತುಂಬುತ್ತಿರುವುದು ನಮ್ಮ ಭಾರತೀಯ ರೆಡ್ ಕ್ರಾಸ್ ಸಮಸ್ಥೆಯ ಪ್ರಮುಖ ಕಾರ್ಯಗಳಲ್ಲಿ ಒಂದಾಗಿದೆ. ಈ ಸಾಲಿನ ಕ್ರಿಯಾ ಯೋಜನೆ ಕುರಿತು ವಿವರವಾದ ಮಾಹಿತಿ ನೀಡುತ್ತಾ ಕಾಲೇಜಿನ ಘಟಕಗಳಲ್ಲಿ ಕಾರ್ಯಕ್ರಮಾಧಿಕಾರಿಗಳು ತಪ್ಪದೇ ನಾಮಫಲಕ ಅಳವಡಿಸಿ, ವಿದ್ಯಾರ್ಥಿಗಳ ನೋಂದಣಿಯನ್ನು ಮಾಡಿಸುವುದರ ಜೊತೆಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ನಿಗಧಿಪಡಿಸಿದ ಪರಿಸರ, ಸಾರ್ವಜನಿಕ ಸೇವೆ ಮತ್ತು ಪ್ರಮುಖ ದಿನಾಚರಣೆಗಳನ್ನು ಆಚರಿಸುವುದು, ಹಾಗೆಯೇ ಪೂರ್ವ ಸಿದ್ಧತೆಯೊಂದಿಗೆ ಕಾರ್ಯಕ್ರಮವನ್ನು ಆಯೋಜಿಸಬೇಕೆಂದು ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ರಾಜ್ಯ ನಿರ್ದೇಶಕರಾದ ಶಕೀಬ್ ಉಪಸ್ಥಿತರಿದ್ದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿಗಳಾದ ವೇಣುಗೋಪಾಲ್, ಸುರೇಂದ್ರ ಶಾ, ಪಿ.ಹುಚ್ಚಯ್ಯ , ಆಂಜನಪ್ಪ, ಸುಭಾಷಿಣಿ ಉಪಸ್ಥಿತರಿದ್ದರು.







