ಬೆಂಗಳೂರು
ರಾಜ್ಯದ ಇತರ ನಗರಗಳು ಹಾಗೂ ಹೊರವಲಯದಲ್ಲಿ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ನಿರ್ಮಿಸುವ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ರಾಜ್ಯ ಸರ್ಕಾರ ಹೆಚ್ಚಿನ ನೆರವು ನೀಡಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಭರವಸೆ ನೀಡಿದರು.
ಬಹುತೇಕ ರಿಯಲ್ ಎಸ್ಟೇಟ್ ಉದ್ಯಮಿಗಳು ಬೆಂಗಳೂರಿನಲ್ಲಿಯೇ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿಗೆ ಮುಂದಾಗುವುದನ್ನು ಬಿಟ್ಟು ಉತ್ತರ ಕರ್ನಾಟಕ ಹೈದಾರಬಾದ್ ಕರ್ನಾಟಕ ಸೇರಿ ಇತರ ಜಿಲ್ಲೆಗಳಲ್ಲಿ ಅಭಿವೃದ್ಧಿ ಮಾಡಿದರೆ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.
ನಗರದ ಹೆಬ್ಬಾಳದ ಹೊಟೇಲೊಂದರಲ್ಲಿ ಗುರುವಾರ ಕ್ರೆಡೈ ಕರ್ನಾಟಕ ಸಂಸ್ಥೆ ಆಯೋಜಿಸಿದ್ದ ಸ್ಟೇಟ್ ಕಾನ್ ಹೌಸಿಂಗ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಅನೇಕ ನಗರಗಳಿಗೆ ವಿಮಾನಯಾನ ಸಂಪರ್ಕ ಇದೆ.ಇದನ್ನು, ರಿಯಲ್ ಎಸ್ಟೇಟ್ ಉದ್ಯಮಿಗಳು ಬಳಕೆ ಮಾಡಿಕೊಳ್ಳಬೇಕು ಎಂದರು.
ಕೆಲ ರಿಯಲ್ ಎಸ್ಟೇಟ್ ಉದ್ಯಮಿಗಳು ತನ್ನ ಗ್ರಾಹಕರಿಗೆ ವಂಚನೆ ಮಾಡುತ್ತೀರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದರ ವಿರುದ್ಧ, ಇತರೆ ಉದ್ಯಮಿಗಳೇ ಎಚ್ಚರವಹಿಸಬೇಕು.ಜೊತೆಗೆ, ವಿವಿಧ ಇಲಾಖೆಗಳ ಕಾನೂನು ನಿಯಮ ಪಾಲನೆಗೆ ಮುಂದಾಗಬೇಕು ಎಂದ ಅವರು, ಎರಡು ದಶಕಗಳಿಗೊಮ್ಮೆ ನಕ್ಷೆ ಬದಲಾವಣೆ ಬದಲಾಗಬೇಕು.ಅದೇ ರೀತಿ, ಯೋಜನೆ ಪ್ರಾಧಿಕಾರ ನಿಯಮ ಸರಳೀಕರಣವಾಗಬೇಕು ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಅವರು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕೆಲ ಕಾನೂನುಗಳು ತೊಡಕುಗಳಾಗಿವೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದ್ದು, ಈ ಸಂಬಂಧ ಸೂಕ್ತ ಕ್ರಮಕ್ಕೆ ಸರ್ಕಾರದ ಮುಂದಾಗಲಿದೆ ಎಂದರು.
ಕ್ರೆಡೈ ಸಂಸ್ಥೆ ಬೆಂಗಳೂರು ಅಧ್ಯಕ್ಷ ಕಿಶೋರ್ ಜೈನ್ ಮಾತನಾಡಿ, ಬೃಹತ್ ಕಟ್ಟಡ ಸಂಕೀರ್ಣ ನಿರ್ಮಾಣ ಸಂದರ್ಭದಲ್ಲಿ ಪಾಲಿಕೆ ಮತ್ತು ನಗರ ಸಭೆಯ ಹಳೇಯ ನಿಯಮಗಳಿಂದ ತೊಂದರೆ ಉಂಟಾಗುತ್ತಿದೆ ಪ್ರತಿಯೊಂದು ನಿವೇಶಕ್ಕೆ ಜಮೀನು ಕರಾರು ಪತ್ರ ಕೇಳಿದಾಗ, ಹಣಕಾಸ ವಹಿವಾಟು ತಗ್ಗಿ ಸರ್ಕಾರದ ಬೊಕ್ಕಸಕ್ಕೆ ತಡೆಯಾಗುತ್ತಿದೆ ಎಂದರು.
1904ರ ಅನ್ವಯ ಭೂಮಿಯ ನಕ್ಷೆ ಕೇಳುತ್ತಾರೆ.ಆದರೆ, ಈಗ ಜಾಗತೀಕರಣ ಸಾಕಷ್ಟು ಬದಲಾಗಿದೆ.ಹಾಗಾಗಿ, ನಕ್ಷೆ ಹಿನ್ನೆಲೆಯ ಕಡ್ಡಾಯ ಎನ್ನುವ ನಿಯಮ ಮತ್ತು ರೇರಾ ಕಾಯ್ದೆಯನ್ನು ಬದಲಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಕ್ರೆಡೈ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಎಂ.ಸತೀಶ್, ನಿಕಟ ಪೂರ್ವ ಅಧ್ಯಕ್ಷ ಇರ್ಫಾನ್ ರಜಾಕ್, ರಾಜ್ಯಾಧ್ಯಕ್ಷ ಅಸ್ಟೀನ್ ರೋಚ್, ಉಪಾಧ್ಯಕ್ಷ ಆರ್.ನಾಗರಾಜ್ ರೆಡ್ಡಿ, ಬಾಲಕೃಷ್ಣ ಹೆಗಡೆ, ಸೇರಿದಂತೆ ಪ್ರಮುಖರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ