ತುಮಕೂರು : ಕಡಬದಲ್ಲಿ ಅತ್ಯಧಿಕ ಮಳೆ…!

ತುಮಕೂರು
    ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 8 ಗಂಟೆಯವರೆಗಿನ 24 ಗಂಟೆಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯ ವಿವಿಧೆಡೆ ಗಮನಾರ್ಹವಾಗಿ ಮಳೆ ಆಗಿದ್ದು, ಗುಬ್ಬಿ ತಾಲ್ಲೂಕಿನ ಕಡಬದಲ್ಲಿ 102.6 ಮಿಲಿ ಮೀಟರ್‍ಗಳಷ್ಟು ಮಳೆ ಬಂದಿದೆ. ಇದು ಈ 24 ಗಂಟೆಗಳ ಅವಧಿಯಲ್ಲಿ ಇಡೀ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಪ್ರಮಾಣದ್ದಾಗಿದೆ. 
    ಜಿಲ್ಲೆಯ ವಿವಿಧ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ಪ್ರಮಾಣ ಮಿಲಿ ಮೀಟರ್‍ಗಳಲ್ಲಿ ಈ ಕೆಳ ಕಂಡಂತಿದೆ:-
ತುಮಕೂರು ತಾಲ್ಲೂಕು:-
ನಗರದ ರೈಲು ನಿಲ್ದಾಣ-24, ಕಸಬ-12.2, ಹೆಬ್ಬೂರು-54.4, ಊರ್ಡಿಗೆರೆ-8.3, ಬೆಳ್ಳಾವಿ-1.1, ಹಿರೇಹಳ್ಳಿ-6, ನೆಲಹಾಳ್-24.4.
ಗುಬ್ಬಿ ತಾಲ್ಲೂಕು:- ಕಸಬ-89, ನಿಟ್ಟೂರು- 88.3, ಕಡಬ- 102.6.ಕುಣಿಗಲ್ ತಾಲ್ಲೂಕು:- ಕಸಬ-24, ಕೆ.ಎಚ್.ಹಳ್ಳಿ-24.2.
ತಿಪಟೂರು ತಾಲ್ಲೂಕು:- ಹೊನ್ನವಳ್ಳಿ-52.1, ಹಾಲ್ಕುರಿಕೆ-35.4.ಚಿಕ್ಕನಾಯಕನಹಳ್ಳಿ ತಾಲ್ಲೂಕು:- ಬೋರನಕಣಿವೆ-90.4, ಹುಳಿಯಾರು- 48.4, ಕಸಬ-48, ಶೆಟ್ಟಿಕೆರೆ-39.4.ತುರುವೇಕೆರೆ ತಾಲ್ಲೂಕು:- ಸಂಪಿಗೆ-88, ದಂಡಿನಶಿವರ-72.2, ಮಾಯಸಂದ್ರ-62.2, ಕಸಬ-55.4, ದಬ್ಬೇಗಟ್ಟ-20.ಮಧುಗಿರಿ ತಾಲ್ಲೂಕು:- ಮಿಡಿಗೇಶಿ-35, ಬಡವನಹಳ್ಳಿ-32.
ಶಿರಾ ತಾಲ್ಲೂಕು:- ಹುಣಸೇಹಳ್ಳಿ-68, ಚಿಕ್ಕನಹಳ್ಳಿ-52.2, ಬುಕ್ಕಾಪಟ್ಟಣ-46.2, ಕಳ್ಳಂಬೆಳ್ಳ-33.
ಸರಾಸರಿ ಮಳೆ
     ಇದೇ 24 ಗಂಟೆಗಳ ಅವಧಿಯಲ್ಲಿ ತುಮಕೂರು ಜಿಲ್ಲೆಯಲ್ಲಿ ದಾಖಲಾಗಿರುವ ಸರಾಸರಿ ಮಳೆ ಪ್ರಮಾಣ 27.58 ಮಿಲಿಮೀಟರ್‍ಗಳಷ್ಟು ಆಗಿದ್ದು, ತಾಲ್ಲೂಕುವಾರು ಸರಾಸರಿ ಮಳೆ ಪ್ರಮಾಣ ಮಿ.ಮೀ.ಗಳಲ್ಲಿ ಈ ಕೆಳಕಂಡಂತಿದೆ:-
ತುಮಕೂರು-18.6, ಗುಬ್ಬಿ-57.3, ಕುಣಿಗಲ್-13.1, ತಿಪಟೂರು-31.9, ಚಿಕ್ಕನಾಯಕನಹಳ್ಳಿ-38, ತುರುವೇಕೆರೆ-59.6, ಮಧುಗಿರಿ- 16.7, ಶಿರಾ-28.7, ಕೊರಟಗೆರೆ-7.9, ಪಾವಗಡ-4.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link