ಕೇಂದ್ರದಿಂದ ಅತ್ಯಂತ ನಿರಾಶಾದಾಯಕ ಬಜೆಟ್ : ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ‌ಸರ್ಕಾರದ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದ್ದು, ದೇಶದ ಪ್ರಗತಿ ಬಗ್ಗೆ ಮುಂದಿನ ದಿನಗಳಲ್ಲಿ ಆಸೆ ಇಟ್ಟುಕೊಳ್ಳದ ಪರಿಸ್ಥಿತಿ ಸೃಷ್ಟಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.

   ಕೇಂದ್ರ ಬಜೆಟ್‌ ಕುರಿತು ನಗರದಲ್ಲಿಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಕೇವಲ ಅಂಕಿ ಅಂಶಗಳ ಬಜೆಟ್. ಕಳೆದ ಐದು ವರ್ಷಗಳಲ್ಲಿ ಘೋಷಣೆ ಆಗಿರುವ ಎಷ್ಟೋ ಯೋಜನೆಗಳು ಜಾರಿಯೇ ಆಗಿಲ್ಲ. ಹಣ ಹಂಚಿಕೆಯಲ್ಲಿಯೂ ಭಾರಿ ಕಡಿತವಾಗಿದೆ. ಜಲಮಿಷನ್‌ಗೆ ಮೀಸಲಿಟ್ಟಿರುವ ಹಣದಿಂದ ಯಾವುದೇ ಜನರಿಗೆ ಅನುಕೂಲ ಆಗುವುದಿಲ್ಲ.

    ಕೆಲವೊಂದು ಯೋಜನೆಗಳಿಗೆ ಹೊಸ ಹೆಸರು ಇಟ್ಟಿರಬಹುದು ಅಷ್ಟೆ ಎಂದರು. ಕಿಸಾನ್ ಉಡಾನ್ ಹೆಸರಲ್ಲಿ ರೈತರನ್ನು ಆಕಾಶದ ಮೇಲೆ ಓಡಾಡಿಸುತ್ತಾರೆಯೇ ಎಂದು ವ್ಯಂಗ್ಯವಾಡಿದ ಅವರು, ಯುವಕರಿಗೆ ಯಾವ ರೀತಿ ಉದ್ಯೋಗ ಕೊಡುತ್ತೇವೆ ಎಂದು ಹೇಳಿಲ್ಲ. ಇಂಟರ್ನ್ ಶಿಪ್ ಕೊಡುವುದಾಗಿ ಹೇಳಿದ್ದಾರೆ, ಆದರೆ ಅವರಿಗೆ ಉದ್ಯೋಗ ಕೊಡುವುದು ಯಾರು? ಎಂದು ಪ್ರಶ್ನಿಸಿದರು.

    ಈ ಬಜೆಟ್ ಕುಸಿಯುತ್ತಿರುವ ದೇಶದ ಆರ್ಥಿಕ ವ್ಯವಸ್ಥೆಯನ್ನು ಸರಿಪಡಿಸುವುದಿಲ್ಲ. ಬದಲಿಗೆ ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗುತ್ತದೆ. ಭೂ ಸ್ವಾಧೀನ ಮಾಡಿಕೊಂಡು ಯಾರಿಗೆ ಬೇಕಾದರೂ ಭೂಮಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಇದು ಮತ್ತೊಂದು ರೀತಿಯ ಪೌರತ್ವ ತಿದ್ದುಪಡಿ ಕಾಯ್ದೆಯಂತಾಗುತ್ತದೆ ಎಂದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link