ಚಿತ್ರದುರ್ಗ
ಶಿಕ್ಷಕರು ಅಂದು ಕಡಿಮೆ ಸಂಬಳ ಪಡೆದು ಹೆಚ್ಚು ಕಲಿಸುತ್ತಿದ್ದರು ಆದರೆ ಇಂದು ಹೆಚ್ಚು ಸಂಬಳ ಪಡೆದು ಕಡಿಮೆ ಕಲಿಸುತ್ತಿದ್ದಾರೆ ಅಲ್ಲದೆ ಕೈ ಮುಗಿದು ಮಕ್ಕಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆ ಬಂದಿರುವುದು ನಮ್ಮ ದುರಂತ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ನಗರದ ಸಂತ ಜೋಸೆಫರ ಕಾನ್ವೆಂಟ್ ಕನ್ನಡ ಮಾಧ್ಯಮಿಕ ಶಾಲೆಯಲ್ಲಿ 1988ರಲ್ಲಿ 7ನೇ ತರಗತಿ ಓದಿದ ಹಳೆಯ ವಿದ್ಯಾರ್ಥಿಗಳ ಬಳಗದಿಂದ ಶನಿವಾರದಂದು ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದೆ ಕನ್ನಡದಲ್ಲಿ ಕಲಿಯುವವರು ಹೆಚ್ಚಿದ್ದರು ಆದರೆ ಇಂದು ಕನ್ನಡವೇ ಬೇಡ ಎನ್ನುತ್ತಿದ್ದಾರೆ. ಇಂದು ವೇದಿಕೆ ಮೇಲೆ ಇರುವವರೆಲ್ಲ ಮಹಿಳಾ ಶಿಕ್ಷಕಿಯರೇ. ಶಾಲೆಗಳಲ್ಲಿ ಮಹಿಳಾ ಶಿಕ್ಷಕರು ಇರಬೇಕು. ಮಹಿಳಾ ಶಿಕ್ಷಕರಲ್ಲಿ ತಾಯ್ತನ ಇರುತ್ತದೆ. ಇಂದು ತಾಯ್ತನ ಇರುವ ಶಿಕ್ಷಕರು ಬೇಕು ಎಂದರು.
ಪ್ರಮುಖವಾಗಿ ರಾಜ್ಯದ ಪ್ರತಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘ ಮಾಡಬೇಕಿದೆ, ಅವು ಸಕ್ರಿಯವಾಗಿ ಶಾಲೆಯ ಅಗತ್ಯಗಳನ್ನು ಪೂರೈಸುವ ದೆಸೆಯಲ್ಲಿ ಕೆಲಸ ಮಾಡಿ ತಮ್ಮ ಋಣ ತೀರಿಸಬಹುದ
ಎಂದ ಅವರು ನಾವು ಬ್ರಿಟಿಷರನ್ನು ಬೈಯಬಾರದು, ಅವರು ಕಲಿಸಿದ ಇಂಗ್ಲಿಷ್ ಇಂದು ನಮ್ಮನ್ನು ಸಾಕುತ್ತಿದೆ.ಇಂದು ಶಿಕ್ಷಣ ಕಲಿಸುವ ಸಂಸ್ಥೆಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಹೆಚ್ಚು ಕೆಲಸ ಮಾಡಿವೆ ಎಂದು ತಿಳಿಸಿದರು.ಇದು ಅಪರೂಪದ ಧರ್ಮ. ಸುಂದರ ಕರ್ನಾಟಕದಲ್ಲಿ ಸುಂದರ ಭಾಷೆ ಕನ್ನಡ. ಇದರ ಶಕ್ತಿ ತೋರಿಸಿರೋದು ಕ್ರಿಶ್ಚಿಯನ್ ಮತ್ತು ಬ್ರಿಟಿಷರು. ಇವರನ್ನು ತೆಗೆದು ಹಿಂದುಗಳ ಹೆಸರು ಇಡೋದು ತಪ್ಪು ಎಂದರು. ನಿಮ್ಮ ಮೂವತ್ತು ವರ್ಷಗಳ ಗೆಳೆತನವನ್ನು ನೀವು ಮೆಲುಕುಹಾಕಿ ಎಂದರು.
ಸಂತ ಜೋಸೆಫರ ಕಾನ್ವೆಂಟ್ ಶಾಲೆಯ ವ್ಯವಸ್ಥಾಪಕರಾದ ರೆ.ಸಿಸ್ಟರ್ ಗ್ಲೋರಿಯದಾಸ್ ಹಾಗೂ ಮುಖ್ಯೋಪಾಧ್ಯಾಯಿನಿ ರೆವರೆಂಡ್ ಸಿಸ್ಟರ್ ಇ. ಹೃದಯರಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೌರವಾರ್ಪಣೆ:
ಇದೇ ವೇಳೆ 1988ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಶಿಕ್ಷಕಿಯರಾದ ಎಚ್.ಎನ್.ಚೂಡಾಮಣಿ, ಪೌಲಿನ್ ಫ್ರಾಂಕ್, ಬೆನೆಡಿಕ್ಟ ಪಿಂಟೊ, ಫಾತೀಮಾ ಮೇರಿ ಅವರನ್ನು ಹಳೆಯ ವಿದ್ಯಾರ್ಥಿಗಳು ಸನ್ಮಾನಿಸಿದರು.
ವೇದಿಕೆಮೇಲೆ ಹಿರಿಯ ವಿದ್ಯಾರ್ಥಿಗಳ ಸಂಘದ ಕೃಷ್ಣಮೂರ್ತಿ, ರೂಪ ಉಪಸ್ಥಿತರಿದ್ದರು. ಡಾ.ಶಿವನಾಯ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ 30 ವರ್ಷಗಳ ತಮ್ಮ ಗೆಳೆತನದ ಅನುಭವ ಹಂಚಿಕೊಂಡರು. ಗಾಯಕ ನಾಗೇಂದ್ರ ಸ್ವಾಗತಿಸಿದರು, ಯತೀಶ್ ಸ್ವಾಗತಿಸಿದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
