ಮುಕಂಬಾವಿ ಚೌಡೇಶ್ವರಿ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆ

ಹರಿಹರ 

        ಹರಿಹರದ ಚೌಡಮ್ಮ ನಗರದದಲ್ಲಿರುವ ಶ್ರೀ ಗುರು ರೇವಣಸಿದ್ದ ಆಶ್ರಮದಲ್ಲಿ ಜ.20ಹಾಗೂ 21ರಂದು ಮುಕಂಬಾವಿ ಚೌಡೇಶ್ವರಿ ದೇವಿಯ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ, ದೇವಸ್ಥಾನದ ಉದ್ಘಾಟನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದು ಆಶ್ರಮದ ಮಂಜುನಾಥ ಗುರುಗಳು ತಿಳಿಸಿದರು.

       ನಗರದ ರಚನಾ ಕ್ರೀಡಾ ಕ್ಲಬ್‍ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜ.20ರಂದು ನಗರದ ಹೊಸಪೇಟೆ ಬೀದಿಯಲ್ಲಿರುವ ಗ್ರಾಮದೇವತಾ ದೇವಸ್ಥಾನದಿಂದ ಊರಮ್ಮ ಹಾಗೂ ದುರುಗಮ್ಮ ದೇವಿಯ ಉತ್ಸವ ಮೂರ್ತಿಗಳೊಂದಿಗೆ ಮುಕಂಬಾವಿ ಚೌಡೇಶ್ವರಿ ದೇವಿಯ ಶಿಲಾಮೂರ್ತಿಗಳನ್ನು ಮೆರವಣಿಗೆಯಲ್ಲಿ ಕರೆ ತರಲಾಗುತ್ತದೆ ಎಂದು ತಿಳಿಸಿದರು.

        ಜ.21ರಂದು ಬೆಳಿಗ್ಗೆ 5-30ರಿಂದ ಬ್ರಾಹ್ಮಿ ಮೂಹರ್ತದಲ್ಲಿ ಶ್ರೀ ಗಣೇಶನ ಪ್ರಾರ್ಥನೆ, ಸುದರ್ಶನ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಪಂಚಕಳಸ, ಅಷ್ಟ ದಿಕ್ಪಾಲಕರ ಸ್ಥಾಪನೆ ನೆರವೇರಿಸಲಾಗುವುದು. ದಸರಿಘಟ್ಟದ ಆದಿ ಚುಂಚನಗಿರಿ ಮಠದ ಚಂದ್ರಶೇಖರನಾಥ ಸ್ವಾಮೀಜಿಯ ಸಾನಿಧ್ಯದಲ್ಲಿ ಮಲೆಬೆನ್ನೂರಿನ ಶ್ಯಾಮಸುಂದರ್ ಜೋಯೀಸರು ಹಾಗು ಸಂಗಡಿಗರಿಂದ ವಿವಿಧ ಪೂಜೆಗಳು ಹಾಗೂ ಪ್ರಾಣ ಪ್ರತಿಷ್ಠಾಪನೆ ವಿಧಿ ವಿಧಾನಗಳು ನಡೆಯಲಿವೆ. 11ಕ್ಕೆ ಮಹಾ ಮಂಗಳಾರತಿ, ಗಣ್ಯರಿಗೆ ಸನ್ಮಾನ ಹಾಗೂ ಪ್ರಸಾದ ವಿನಿಯೋಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

       ಅಧ್ಯಕ್ಷತೆಯನ್ನು ಶ್ರೀ ಮಂಜುನಾಥ ಗುರುಗಳು ಮತ್ತು ಧರ್ಮದರ್ಶಿಗಳು ಭಾಗವಹಿಸುವರು. ವಿಶೇಷ ಅಹ್ವಾನಿತರಾಗಿ ಸಚಿವರಾದ ಎಸ್.ಆರ್.ಶ್ರೀನಿವಾಸ್, ಸಂಸದ ಜಿ.ಎಂ.ಸಿದ್ದೇಶ್, ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ, ಎಸ್.ರಾಮಪ್ಪ, ಮಾಜಿ ಶಾಸಕ ಬಿ.ಪಿ.ಹರೀಶ್,ಹೆಚ್.ಎಸ್.ಶಿವಶಂಕರ್ ಹಾಗೂ ಜಿ.ಪಂ.ಸ್ಥಾಯಿ ಸಮಿತಿಯ ಅಧ್ಯಕ್ಷ ವಾಗೀಶ್ ಸ್ವಾಮಿ, ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಜಾತ ರೇವಣಸಿದ್ದಪ್ಪ, ಹಾಗೂ ನಗರಸಭೆ ಸದಸ್ಯರು ಮುಂತಾದವರು ಭಾಗಹಿಸಲಿದ್ದಾರೆ ಎಂದು ಹೇಳಿದರು.

         ಶ್ರೀ ಮುಕಂಬಾವಿ ಚೌಡೇಶ್ವರಿ ದೇವಿಯ ಪ್ರೇರಣೆಯಂತೆ ಈ ದೇವಸ್ಥಾನವು ನಿರ್ಮಿಸಲಾಗುತ್ತದೆ. ಈ ದೇವಸ್ಥಾನವು ಸುಮಾರು 300ವರ್ಷಗಳ ಇತಿಹಾಸವಿದ್ದು, ಪಕ್ಕದಲ್ಲಿ ಬಾವಿ ಮತ್ತು ದೇವಿಯ ಸ್ಥಾನವಿದ್ದು, 1999ನೇ ಇಸವಿಯಿಂದ ಸುಮಾರು 20ವರ್ಷಗಳಿಂದ ಆ ಜಾಗದಲ್ಲಿ ಪೂಜೆಯನ್ನು ಮಾಡುತ್ತಾ ಅಭಿವೃದ್ಧಿ ಪಡಿಸಿದ್ದೇನೆ ಎಂದು ಹೇಳಿದರು. ಹಾಗೂ ಈ ದೇವಿಯ ಅನುಗ್ರಾಹದಿಂದ ಸಾಕಷ್ಟು ಪವಾಡಗಳು ಮತ್ತು ಭಕ್ತರಿಗೆ ಅನುಕೂಲವಾಗಿವೆ. ದೇಶ-ವಿದೇಶಗಳಲ್ಲಿ ಕೂಡ ಈ ಅಮ್ಮನ ಭಕ್ತರು ಇದ್ದಾರೆ ಎಂದು ತಿಳಿಸಿದರು.

         ಈ ದೇವಿಯ ವಿಶೇಷತೆ ಏನೆಂದರೆ, ಅಮ್ಮನ ಹೆಸರಿನಲ್ಲಿ ಯಾರಾದರೂ ಹಣ ಸಂಗ್ರಹಿಸಿದ್ದರೆ, ಪಾರ್ಶಿ ಒಡೆಯುತ್ತದೆ ಎಂದು ಶ್ರೀ ಮಂಜುನಾಥ ಗುರುಗಳು ಗೋಷ್ಠಿಯಲ್ಲಿ ತಿಳಿಸಿದರು.ಇತ್ತೀಚಿನ ದಿನಗಳಲ್ಲಿ ವಾಮಚಾರ್ ಹೆಚ್ಚಾಗಿದ್ದು, ಇಂತಹ ಕೃತ್ಯ ಕೆಲಸಗಳನ್ನು ತಡೆಗಟ್ಟುವುದು, ಭಕ್ತರ ಬೇಡಿಕೆಗಳು ಈಡೇರಿಸುವುದು ಹಾಗೂ ಕಷ್ಟವನ್ನು ನಿವಾರಣೆ ಮಾಡುವುದರ ಮೂಲಕ ಸಾಕಷ್ಟು ಪವಾಡಗಳು ಜರುಗಿವೆ ಎಂದು ಹೇಳಿದರು.

        ಈ ಜಾಗವು 15 ಗುಂಟೆ ಇದ್ದು, ಇದರಲ್ಲಿ ನೂತನ ದೇವಿಯ ದೇವಸ್ಥಾನದ ಕಟ್ಟಡ ನಿರ್ಮಾಣವಾಗಿದ್ದು, ಹಾಗೂ ಮುಂದಿನ ದಿನಗಳಲ್ಲಿ ಸಮುದಾಯ ಭವನವು ಕೂಡ ನಿರ್ಮಿಸಲಾಗುವುದು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ರೇವಣಸಿದ್ದ ಆಶ್ರಮದ ಟ್ರಸ್ಟ್‍ನ ಶಿವರಾಜ್ ಮದ್ನೆ, ಬಸವರಾಜ್ ಮದ್ನೆ, ಮದವಿ ಮಂಜುನಾಥ, ಬಸವರಾಜಯ್ಯ ಹೀರೆಮಠ್ ಮುಂತಾದವರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap