ನಾಡಿದ್ದು ಕಾಲಿಡಲಿರುವ ಮುಂಗಾರು ಮಳೆ

ಬೆಂಗಳೂರು:

     ಪ್ರಸ್ತುತ ವರ್ಷ ರಾಜ್ಯದಲ್ಲಿ ಪೂರ್ವ ಮುಂಗಾರು ಉತ್ತಮವಾಗಿದೆ.ಕಳೆದ ಒಂದು ವಾರದಿಂದ ಬಿಟ್ಟು ಬಿಟ್ಟು ಮಳೆ ಬೀಳುತ್ತಿದ್ದು ಅಲ್ಲಲ್ಲಿ ಹಾನಿ ಉಂಟಾದ ಘಟನೆಗಳು ಕೇಳಿ ಬಂದಿದೆ.

    ನಾಳೆಯಿಂದಲೇ ಕೇರಳಕ್ಕೆ ಮುಂಗಾರು ಮಳೆ ಪ್ರವೇಶ ಪಡೆಯಲಿದ್ದು, ನಾಡಿದ್ದು ರಾಜ್ಯಕ್ಕೆ ಕಾಲೂರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ಜೂನ್ 1ಕ್ಕೆ ಆರಂಭವಾಗಬೇಕಿದ್ದ ಮುಂಗಾರು ಮಳೆ ಒಂದು ವಾರ ತಡವಾಗಿ ಆರಂಭವಾಗುತ್ತಿದೆ.ದಕ್ಷಿಣ ಭಾರದಲ್ಲಿ ಶೇ.97ರಷ್ಟು ಸಾಮಾನ್ಯ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

     ಇನ್ನು ಎರಡು ದಿನಗಳ ಬಳಿಕ ಮುಂಗಾರು ಮಳೆ ರಾಜ್ಯದ ಕರಾವಳಿಗೆ ಕಾಲಿಡಲಿದೆ. ಮುಂದಿನ ವಾರದಲ್ಲಿ ದಕ್ಷಿಣ ಒಳನಾಡು,ಉತ್ತರ ಒಳನಾಡಿನಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಜ್ಞ ರಾಜಾರಾಮ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link