ಕಾರ್ತಿಕ ಮಾಸದಲ್ಲಿ ಅಮಾವಾಸೆ ಆಚರಿಸುತ್ತಿರುವ ನಗರಸಭೆ..!

ತಿಪಟೂರು :

ವಿಶೇಷ ವರದಿ:ರಂಗನಾಥ್ ಪಾರ್ಥಸಾರಥಿ

       ಕಾರ್ತಿಕ ಮಾಸದಲ್ಲಿ ದಿನದ ಅವಧಿ ಕಡಿಮೆ, ರಾತ್ರಿಯೇ ದೀರ್ಫವಾಗಿರುವ ಕಾರಣದಿಂದ ಅಂಧಕಾರದ ಪ್ರಭಾವ ಜಾಸ್ತಿ ಎಂದು ನಮ್ಮ ಪೂರ್ವಿಕರು ಮನೆಯ ಮುಂದೆ ದೀಪವನ್ನು ಹಚ್ಚಿವುದು ಸಾಮಾನ್ಯವಾಗಿತ್ತು ಆದರೆ ಇಂದು ನಾಗರೀಕತೆ ವಿದ್ಯುತ್ ದೀಪಗಳು ಬಂದು ಬೀದಿ ದೀಪಗಳನ್ನು ಹಾಕುವುದು ಸಾಮಾನ್ಯವಾಗಿದೆ. ಆದರೆ ಇದಕ್ಕೆ ಹೊರತಾದ ನಗರಸಭೆಯು ಬೀದಿ ದೀಪಗಳನ್ನು ಹಾಕುವ ಗೋಜಿಗೆ ಹೋಗಲಿ ಇರುವುದನ್ನು ಸರಿಪಡಿಸಿದರೆ ಸಾಕು ನಗರದ ತುಂಬೆಲ್ಲಾ ಬೆಳಕಾಗುತ್ತದೆ.

      ನಗರದ ಬಿ.ಹೆಚ್.ರಸ್ತೆಯಲ್ಲಿ ಸಮರ್ಪಕ ಬೀದಿ ದೀಪವಿಲ್ಲ : ಜಿಲ್ಲಾ ಕೇಂದ್ರವಾಗಲು ಹವಣಿಸುತ್ತಿರುವ ಕಲ್ಪತರು ನಾಡು ತಿಪಟೂರು ನಗರಕ್ಕೆ ದೃಷ್ಟಿ ಬೊಟ್ಟಿಡುವ ಕೆಲಸವನ್ನು ನಗರಸಭೆ ಮಾಡಹೊರಟಿದೆ ಎಂದರೆ ತಪ್ಪಾಗಲಾರದು. ನಗರ ಪ್ರಾರಂಭವಾಗುವ ಈಡೇನಹಳ್ಳಿ ಗೇಟ್‍ನಿಂದ ಪ್ರಾರಂಭವಾಗಿ ಹಾಸನ ವೃತ್ತದ ವರೆಗೂ ಸುಮಾರು 138 ವಿದ್ಯುತ್ ಕಂಬಗಳಿಗೆ 276 ಎಲ್.ಇ.ಡಿ ಲೈಟ್‍ಗಳನ್ನು ಅಳವಡಿಸಲಾಗಿದ್ದು ಮೊದಲಿನಿಂದಲೂ ಸೂಕ್ತರೀತಿಯಲ್ಲಿ ಉರಿಯುತ್ತಿಲ್ಲ. ಮತ್ತು ಮುರಿದು ಬಿದ್ದುರುವ ಕಂಬಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿ ಬಂದರೂ ಸರಿಪಡಿಸುವ ಗೋಜಿಗೂ ಹೋಗದೆ ಬಿದ್ದ ಕಂಬಗಳು ಬಿದ್ದಲ್ಲಿಯೇ ಚುಕ್ಕುಹಿಡಿದು ಇಲ್ಲ ಹಾಳಾಗಿ ಕೆಲಸಕ್ಕೆ ಬಾರದಂತಾಗುತ್ತಿವೆ. ಇನ್ನು ಇರುವ 138 ಕಂಬಗಳಲ್ಲಿ ಸುಮಾರು ಅರ್ಧದಷ್ಟು ದೀಪಗಳು ಉರಿಯುತ್ತಿಲ್ಲ.

      ತಾಲ್ಲೂಕಿನ ಶಕ್ತಿಕೇಂದ್ರ ತಾಲ್ಲೂಕು ಕಛೇರಿ, ನ್ಯಾಯ ಪೀಠ ನ್ಯಾಯಾಲಯ ಮತ್ತು ದಿನನಿತ್ಯ ಆರೋಗ್ಯದ ಸಮಸ್ಯೆಯಿಂದ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳು ಇದರಿಂದ ಪರದಾಡುವಂತಾಗಿದ್ದು ಇಲ್ಲಿಂದ ಹಾಸನ ವೃತ್ತದ ಕಡೆಗೆ ಪ್ರಾರಂಭವಾಗುವ ರಸ್ತೆಯಲ್ಲಿ ಒಂದೂ ಬೀದಿದೀಪ ಉರಿಯದಿಯದೇ ಇದ್ದರೂ ಯಾವುದೇ ಕ್ರಮಕೈಗೊಳ್ಳದಿರುವುದು ತಾಲ್ಲೂಕು ಆಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ.

      ಕಾರ್ಯನಿರ್ವಹಿಸದ ಹೈಮಾಸ್ಕ್ ದೀಪಗಳು : ನಗರದ ಪ್ರವಾಸಿ ಮಂದಿರ ವೃತ್ತ, ಹಾಸನ ವೃತ್ತ, ಗಾಂಧಿನಗರ, ನಗರಸಭಾ ವೃತ್ತದಲ್ಲೂ ಇರುವ ಹೈಮಾಸ್ಕ್ ದೀಪಗಳು ಸೂಕ್ತವಾಗಿ ಕಾರ್ಯನಿರ್ವಹಿಸುತ್ತಿಲ್ಲ ಇವುಗಳು ಕೆಟ್ಟು ತಿಂಗಳುಗಳು ಕಳೆದಿವೆ. ಇನ್ನೂ ಗಾಂಧಿನಗರದ ಮಸೀದಿ ಮುಂಭಾಗದಲ್ಲಿರುವ ಹೈಮಾಸ್ಕ್ ದೀಪವು ಕೆಟು ಸುಂಆರು ವರ್ಷಗಳೇ ಕಳೆದಿವೆ, ಇದರ ಬಗ್ಗೆ ಮುಸ್ಲ್ಮಾನ ಬಾಂದವರು ನಮ್ಮ ಪವಿತ್ರ ಹಬ್ಬವಾದ ರಂಜಾನ್ ವೇಳೆಯಲ್ಲಾದರು ಸರಿಮಾಡಿಕೊಡುವಂತೆ ವಿನಂತಿಸಿಕೊಂಡರು ಇದರ ಬಗ್ಗೆ ನಗರಸಭೆ ಅಧಿಕಾರಿಗಳು ನಮಗೆ ಸರಿಮಾಡಿಸಿಕೊಟ್ಟಿಲ್ಲ ಇನ್ನು ಕತ್ತಲೆಯಲ್ಲಿ ಮತ್ತು ಹಾಳಾದ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿರಲಿ ಹಗಲಲ್ಲೂ ಓಡಾಲು ಸಾಧ್ಯವಾದ ಪರಿಸ್ಥಿತಿ ಇದ್ದರೂ ಸಹ ನಗರಸಭೆಯವರು ಹೈಮಾಸ್ಕ್ ದೀಪವನ್ನು ಸರಿಮಾಡಿಸದಿರುವುದು ಎಷ್ಟು ಸರಿ.

       ಇನ್ನೂ ಪ್ರವಾಸಿ ಮಂದಿರ ವೃತ್ತದಲ್ಲಿರುವ ಹೈಮಾಸ್ಕ್ ದೀಪವು ಒಂದು ದಿನ ಉರಿದರೆ ಉಳಿದ 6 ದಿನ ಉರಿಯುವುದಿಲ್ಲ, ಉರಿದರೂ ಮುಖ್ಯರಸ್ತೆಗೆ ಬೆಳಕು ಬೀಳದೆ ಕೇವಲ ಹಾಲ್ಕುರಿಕೆ ರಸ್ತೆ ಮತ್ತು ಕಾಸ್ಮೋಪಾಲಿಟನ್ ಕ್ಲಬ್ ಕಡೆಗೆ ಬೆಳಕು ಚೆಲ್ಲುತ್ತಿದ್ದು ರಾಷ್ಟ್ರೀಯ ಹೆದ್ದಾರಿ ಅಂದಕಾರದಲ್ಲೇ ಮುಳುಗಿದೆ.

ಕತ್ತಲೆಯಲ್ಲಿ ಪ್ರಯಾಣಿಕರು 

    ಬೆಳಿಗ್ಗೆ ಬಸ್‍ಗೆ ಬರುವ ಪ್ರಯಾಣಿಕರು ಕತ್ತಲೆಯಲ್ಲಿ ದಿನ ಬೆಳಗ್ಗೆ ಮನೆಯಿಂದ ಬರಬೇಕಾದರೆ ಕತ್ತಲೆಯಲ್ಲಿ ಹೆದರಿಕೊಂಡು ಜೀವವನ್ನು ಕೈಯಲ್ಲಿಡಿದು ಬರುವಂತಾಗಿದ್ದು ಮುಖ್ಯರಸ್ತೆಗೆ ಇರಲಿ ಬಸ್‍ನಿಲ್ದಾಣಕ್ಕೆ ಬಂದರೂ ಕತ್ತಲೆಯಲ್ಲೇ ಬಸ್‍ಗಳನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

     ಈ ದುರವಸ್ಥೆಗೆ ನಗರಸಭೆ ಅಧಿಕಾರಿಗಳು ಕಾರಣವೋ ಇಲ್ಲ ಗುತ್ತಿಗೆದಾರರು ಕಾರಣವೋ ತಿಳಿಯದಾಗಿದ್ದು ನಗರಕ್ಕೆ ಬರುವ ಪೌರಾಯುಕ್ತರು ಬದಲಾಗುತ್ತಿದ್ದಾರೆಯೇ ಹೊರತು ಬೀದಿ ದೀಪಗಳ ಪರಿಸ್ಥಿತಿ ಮಾತ್ರ ಬದಲಾಗುತ್ತಿಲ್ಲದಿರುವುದು ತಿಪಟೂರು ಸಾರ್ವಜನಿಕರ ವಿಪರ್ಯಾಸವಾಗಿದ್ದು ತಿಪಟೂರಿನ ದೊಡ್ಡ ಹಬ್ಬವಾದ ಗಣಪತಿ ಜಾತ್ರೆಯ ಹೊತ್ತಿಗಾದರೂ ಸರಿಪಡಿಸಿಕೊಟ್ಟು ಗಣಪತಿಯ ಆಶಿರ್ವಾದವನ್ನು ಪಡೆಯುವಂತಾಗಲಿ ಎಂದು ಸಾರ್ವಜನಿಕರ ಆಗ್ರಹವಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap