ಬೀದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆಗೆ ನಗರಪಾಲಿಕೆ ಕೆಲಸ ಮಾಡಬೇಕು :ಡಿ.ಸಿ

 ತುಮಕೂರು

    ಮಹಾನಗರ ಪಾಲಿಕೆ ಅಡಿಯಲ್ಲಿ ಅನುಷ್ಠಾನಗೊಳ್ಳುತ್ತಿರುವ ಡೇ-ನಲ್ಮ್ ಯೋಜನೆಯ ಬೀದಿ ವ್ಯಾಪರಸ್ತರಿಗೆ ಬೆಂಬಲ ಕಾರ್ಯಕ್ರಮದಡಿ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳಾದ ಡಾ|| ಕೆ. ರಾಕೇಶ್‍ಕುಮಾರ್ ರವರ ಅಧ್ಯಕ್ಷತೆಯಲ್ಲಿ ಇಂದು ಕರೆಯಲಾಗಿತ್ತು.

    ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಬೀದಿಬದಿ ವ್ಯಾಪಾರಿಗಳ ಜೀವನೋಪಾಯ ಸಂರಕ್ಷಣೆ ಮತ್ತು ನಿಯಂತ್ರಣ ಕಾಯಿದೆ-2014 ಹಾಗೂ ನಿಯಮಗಳು 2019ರಂತೆ ಬೀದಿ ವ್ಯಾಪಾರಿಗಳಿಗೆ ಪುನರ್‍ವಸತಿ ಕಲ್ಪಿಸಿ ಜೀವನೋಪಾಯವನ್ನು ಸಂರಕ್ಷಣೆ ಮಾಡುವಂತ ಕೆಲಸವನ್ನು ತುಮಕೂರು ನಗರಪಾಲಿಕೆ ಮಾಡಬೇಕೆಂದು ಸೂಚಿಸಿದರು, ಬೀದಿಬದಿ ವ್ಯಾಪಾರಿಗಳ ವಲಯಗಳ ಗುರುತು, ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಈಗಾಗಲೇ 3 ವೆಂಡಿಂಗ್ ಜೋನ್‍ಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳುವ ಕೆಲಸವಾಗುತ್ತಿದ್ದು ಸಮೀಕ್ಷೆಯಲ್ಲಿ ಸಿಗದಿರುವ ಬೀದಿವ್ಯಾಪಾರಿಗಳನ್ನು ಗುರುತಿಸಲು ನಿಯಮಾನುಸಾರ ಸಮೀಕ್ಷೆಯನ್ನು ಕಾಲಕಾಲಕ್ಕೆ ಕೈಗೊಳ್ಳಬೇಕು ಈ ಹಿಂದೆ ನೀಡಿರುವ 1502 ಗುರುತಿನ ಚೀಟಿಗಳನ್ನು ಕಾಯಿದೆಯಲ್ಲಿ ಉಲ್ಲೇಖಿಸಿರುವಂತೆ ನವೀಕರಣ ಮಾಡಬೇಕು, ಬೀದಿ ವ್ಯಾಪಾರಿಗಳಿಗೆ ಪೋಲಿಸ್ ಇಲಾಖೆಯಿಂದ ಆಗುತ್ತಿರುವ ಪಿಟ್ಟಿ ಕೇಸ್‍ಗಳನ್ನು ಈ ಕೊರೊನಾ ಸಂದರ್ಭದಲ್ಲಿ ಹಾಕದಂತೆ ಪೋಲಿಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಎಂ.ಜಿ ರಸ್ತೆ ಬೀದಿ ವ್ಯಾಪಾರಿಗಳಿಗೆ ಸ್ಮಾರ್ಟ್‍ಸಿಟಿ ಕಾಮಗಾರಿ ಮುಗಿಯುವವರೆಗೆ ಸಬ್ ರಸ್ತೆಗಳಲ್ಲಿ ಪುನರ್ ವಸತಿ ಕಲ್ಪಿಸಬೇಕು. ಪ್ರಧಾನಮಂತ್ರಿ ಸ್ವಾನಿಧಿ ಯೋಜನೆಯಲ್ಲಿ ಜಿಲ್ಲೆಯಲ್ಲಿರುವ ಬೀದಿ ವ್ಯಾಪಾರಸ್ತರಿಗೆ ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಒದಗಿಸಲು ಸ್ಥಳೀಯ ಸಂಸ್ಥೆಗಳು ಹೆಚ್ಚು ಪ್ರಗತಿಯನ್ನು ಸಾಧಿಸಬೇಕೆಂದರು.

    ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಶುಭ, ನಗರಪಾಲಿಕೆ ಆಯುಕ್ತರಾದ ರೇಣುಕಾ, ಪಟ್ಟಣ ವ್ಯಾಪಾರ ಸಮಿತಿಯ ಸದಸ್ಯರಾದ ಎನ್.ಕೆ ಸುಬ್ರಮಣ್ಯ, ಎ,ನರಸಿಂಹಮೂರ್ತಿ ವಾಸೀಂ ಅಕ್ರಂ, ಮುತ್ತುರಾಜು, ಜಗದೀಶ್, ಲೀಡ್ ಬ್ಯಾಂಕ್ ಮ್ಯಾನೇಜರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ನಗರ ಪೋಲಿಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್, ನಗರಪಾಲಿಕೆ ವೈದ್ಯಾಧಿಕಾರಿ ಡಾ.ನಾಗೇಶ್, ಸಮುದಾಯ ಸಂಘಟನಾ ಅಧಿಕಾರಿ ಹಾಗೂ ನಗರಪಾಲಿಕೆ ಸದಸ್ಯರಾದ ಸೈಯದ್‍ನಯಾಜ್ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link