ಚಿತ್ರದುರ್ಗ:
ಸಂತೆಹೊಂಡ ಹಿಂಭಾಗದ ರಸ್ತೆಯಲ್ಲಿರುವ ಮೈ ಸ್ಪಿರಿಟ್ಸ್ ಎಂ.ಆರ್.ಪಿ. ಮದ್ಯದಂಗಡಿಯಲ್ಲಿ ಬಳಸುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಕಪ್ ಹಾಗೂ ಕವರ್‍ಗಳನ್ನು ನಗರಸಭೆಯವರು ಮಂಗಳವಾರ ವಶಪಡಿಸಿಕೊಂಡು ಮದ್ಯದಂಗಡಿಗೆ ಬೀಗ ಜಡಿದಿದ್ದಾರೆ.ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದ್ದರೂ
ನಿಯಮ ಉಲ್ಲಂಘಿಸಿ ಮಾರಾಟ ಮಾಡುತ್ತಿದ್ದ ಮೈ ಸ್ಪಿರಿಟ್ಸ್ ಎಂ.ಆರ್.ಪಿ. ಮದ್ಯದಂಗಡಿ ಮೇಲೆ ನಗರಸಭೆ ಪೌರಾಯುಕ್ತರಾದ ಚಂದ್ರಪ್ಪ ಹಾಗೂ ಪರಿಸರ ಇಂಜಿನಿಯರ್ ಜಾಫರ್ ಇವರುಗಳು ಧಾಳಿ ನಡೆಸಿ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ವಶಪಡಿಸಿಕೊಂಡು ಬೀಗ ಹಾಕಿದರು.ಇದರ ಮುಂಭಾಗವೇ ಇರುವ ಬಾಲಾಜಿ ವೈನ್ಸ್‍ನಲ್ಲಿಯೂ ಪ್ಲಾಸ್ಟಿಕ್ ಕಪ್ ಮತ್ತು ಕವರ್‍ಗಳು ಕಂಡು ಬಂದಿದ್ದರಿಂದ ಒಂದು ಸಾವಿರ ರೂ.ದಂಡ ವಿಧಿಸಲಾಯಿತು.ಹೆಲ್ತ್ ಇನ್ಸ್‍ಪೆಕ್ಟರ್‍ಗಳಾದ ಸರಳ, ಭಾರತಿ, ಮಂಜುನಾಥ್ ಧಾಳಿಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
