ಪೌರಕಾರ್ಮಿಕರು ಸರ್ಕಾರದಿಂದ ನೀಡಿರುವ ಸುರಕ್ಷತಾ ಕವಚದ ವಸ್ತುಗಳನ್ನು ಹಾಕಿಕೊಂಡು ಸ್ವಚ್ಚತೆ ಮಾಡಬೇಕು-ಶಾಸಕ ಎಸ್.ವಿ ರಾಮಚಂದ್ರ

ಜಗಳೂರು:

          ಪೌರಕಾರ್ಮಿಕರು ಪಟ್ಟಣಕ್ಕೆ ಬೆಳಕು ನೀಡುವ ಜ್ಯೋತಿಗಳಿದ್ದಂತೆ, ಸರ್ಕಾರದಿಂದ ನೀಡಿರುವ ಸುರಕ್ಷತಾ ಕವಚದ ವಸ್ತುಗಳನ್ನು ಹಾಕಿಕೊಂಡು ಸ್ವಚ್ಚತೆ ಮಾಡಬೇಕು ಎಂದು ಶಾಸಕ ಎಸ್.ವಿ ರಾಮಚಂದ್ರ ಬಣ್ಣಿಸಿದರು.

         ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಪೌರಕಾರ್ಮಿಕರ ದಿನಾಚರಣೆಯ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

         ಪಟ್ಟಣ ಸ್ವಚ್ಚ ಮಾಡುವ ತಾವುಗಳು ತಮ್ಮ ಆರೋಗ್ಯವನ್ನು ಶುಚಿಯಾಗಿಟ್ಟುಕೊಳ್ಳಬೇಕು. ಬೇಕಾ ಬಿಟ್ಟಿ ಕೆಲಸ ಮಾಡಿ ಅನಾರೋಗ್ಯಕ್ಕೆ ತುತ್ತಾಗದಂತೆ ಮುಂಜಾಗ್ರತೆವಹಿಸಬೇಕು ಎಂದು ಸಲಹೆ ನೀಡಿದರು. 15 ಜನ ಹಿರಿಯ ಪೌರಕಾರ್ಮಿಕರಿಗೆ ವಸತಿ ಸೌಲಭ್ಯ ನೀಡಲಾಗುವುದು, ಉಳಿದವರಿಗೆ ಹಂತ ಹಂತವಾಗಿ ಕೊಡಲಾಗುವುದು, ಭಯ ಪಡದೆ ಕೆಲಸ ಮಾಡಿ ನಿಮ್ಮ ಜತೆಯಲ್ಲಿ ನಾವಿರುತ್ತೇವೆ. ನಿಮಗೆ ಅಧಿಕಾರಿ, ಸಿಬ್ಬಂದಿಗಳಿಂದ ತೊಂದರೆಯಾದರೆ ನನ್ನ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು. ಇದೇ ವೇಳೆ 40 ಮಂದಿ ಪೌರಕಾರ್ಮಿಕರಿಗೆ ಸನ್ಮಾನಿಸಲಾಯಿತು.

        ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀಧರ್‍ಮೂರ್ತಿ, ಮುಖ್ಯಾಧಿಕಾರಿ ಕಂಪಳಮ್ಮ, ಟಿಎಚ್‍ಒ ನಾಗರಾಜ್, ಆರೋಗ್ಯ ನಿರೀಕ್ಷಕ ಕಿಫಾಯಿತ್, ಪ.ಪಂ ಸದಸ್ಯರಾದ ಆರ್. ತಿಪ್ಪೇಸ್ವಾಮಿ, ರವಿ, ಲುಕ್ಮಾನ್ ಸಾಬ್, ದೇವರಾಜ್, ಓಬಣ್ಣ, ಶಂಷೀರ್, ನಿರ್ಮಲ ಹನುಮಂತಪ್ಪ, ಪಾಪಣ್ಣ, ಮುಖಂಡರಾದ ಜಿ.ಎಚ್ ಶಂಭುಲಿಂಗಪ್ಪ, ಹಟ್ಟಿ ತಿಪ್ಪೇಸ್ವಾಮಿ, ನಾಗಲಿಂಗಪ್ಪ ಸೇರಿದಂತೆ ಮತ್ತಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap