ಬೆಂಗಳೂರು
ಆರ್.ಆರ್.ನಗರದಲ್ಲಿ ಶಾಂತಿಕದಡುವ ಕೆಲಸ ನಡೆಯುತ್ತಿದೆ. ಜನರನ್ನು ಭಯಭೀತರನ್ನಾಗಿಸುವ ಕೆಲಸ ಮಾಡುತ್ತಿದ್ದಾರೆ. ಹೀಗೆ ಜನರನ್ನು ಹೆದರಿಸಿ ಬೆದರಿಸಿ ಭಯಬೀತಿಗೊಳಿಸುವುದು ಮಾಜಿ ಶಾಸಕ ಮುನಿರತ್ನ ಅವರ ಹವ್ಯಾಸ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನ ಜನರನ್ನು ಬೆದರಿಸಿ ಅವರು ಮತಗಟ್ಟೆಗೆ ಬರದಂತೆ ತಡೆಯುತ್ತಿದ್ದಾರೆ. ಕೊಲೆಗಳಾಗುತ್ತವೆ ಎಂದು ಹೆದರಿಸುತ್ತಿದ್ದಾರೆ ಜನ ತುಂಬಾ ಭಯದಲ್ಲಿದ್ದಾರೆ.ಆರ್.ಆರ್.ನಗರದಲ್ಲಿ ಮುಕ್ತ ವಾತಾವರಣ ಇಲ್ಲ. ತಮಗೆ ಜನರು ಮತ ಹಾಕದಿದ್ದರೆ ಸುಮ್ಮನಿರುವುದಿಲ್ಲ ಎಂದು ಬೆದರಿಕೆಯೊಡ್ಡುತ್ತಿದ್ದಾರೆಂದರು.
ಕಳೆದ ಬಾರಿಯೂ ವೋಟರ್ ಐಡಿ ಅಕ್ರಮವೆಸಗಿದ್ದಾರೆ. ಕೋರ್ಟ್ ನಲ್ಲಿ ಅವರ ವಿರುದ್ಧ ಕೇಸ್ ಇನ್ನೂ ಇದೆ. ಈಬಗ್ಗೆ ಚುನಾವಣೆ ಆಯೋಗಕ್ಕೆ ತಿಳಿಸಿದ್ದೇವೆ ಎಂದು ಸುರೇಶ್ ಹೇಳಿದರು.ಮುನಿರತ್ನರಿಂದ ಉಚಿತ ಸೆಟ್ ಟಾಪ್ ಬಾಕ್ಸ್ ಹಂಚಿಕೆ ಕುರಿತು ಕೆಪಿಸಿಸಿ ಕಾನೂನು ಘಟಕ ಪರಿಶೀಲಿಸುತ್ತಿದೆ. ಈ ಸಂಬಂಧ ಸಹ ದೂರು ನೀಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಡಿಕೆಶಿ ವಿರುದ್ಧ ಕೇಸ್ ದಾಖಲು ಮಾಡಲಾಗುವುದು ಎಂಬ ಮುನಿರತ್ನ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಸುರೇಶ್,ನೂರು ಕೇಸ್ ಮುನಿರತ್ನ ಕೊಟ್ಟರೂ ಹೆದರುವುದಿಲ್ಲ.ಬಿಜೆಪಿಯವರೇ ಮುನಿರತ್ನನನ್ನು ನೀಚ ಎಂದಿದ್ದಾರೆ. ಮತದಾರರ ಚೀಟಿ ಮುದ್ರಿಸುತ್ತಾನೆ ಎಂದು ಪ್ರಧಾನಿಯೇ ಹೇಳಿದ್ದಾರೆ.ಇದಕ್ಕಿಂತ ಇನ್ನೇನು ಬೇಕು. ಮುನಿರತ್ನ ವಿರುದ್ಧ ದಾಖಲೆ ಬಿಡುಗಡೆ ಮಾಡುವುದಾಗಿ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.
ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಶಾಂತಿಕದಡುವ ಕೆಲಸ ನಾವು ಮಾಡುತ್ತಿಲ್ಲ.ಚುನಾವಣೆಯಲ್ಲಿ ನಾವು ಮುನಿರತ್ನನಂತೆ ಯಾವುದೇ ಅಕ್ರಮ ನಡೆಸುತ್ತಿಲ್ಲ. ಕೇಂದ್ರ,ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ.ಈಗ ಕೇಂದ್ರ ಪಡೆಯೂ ಆರ್.ಆರ್.ನಗರದಲ್ಲಿದ್ದು,
ಅಕ್ರಮ ನಡೆದಿದ್ದರೆ ತನಿಖೆ ಮಾಡಲಿ.ಅವರದೇ ಸರ್ಕಾರವಿದೆ,ಅವರದೇ ಪೆÇಲೀಸ್ ಇದೆ.ಯಾವ ತನಿಖೆಯನ್ನು ಬೇಕಾದರೂ ಮಾಡಿಕೊಳ್ಳಲಿ ಎಂದರು.ಮುನಿರತ್ನ ಸೆಟ್ ಟಾಪ್ ಬಾಕ್ಸ್ ವಿತರಣೆ ಬಗ್ಗೆ ಮಾಹಿತಿ ಇಲ್ಲ ಎಂದು ರಾಮಲಿಂಗಾರೆಡ್ಡಿ ಸುದ್ದಿಗಾರರಿಗೆ ಹೇಳಿದರು.
ಡಿಕೆಶಿ ಒಕ್ಕಲಿಗ ಜಾತಿ ಒಡೆಯುತ್ತಿದ್ದಾರೆಂಬ ಮುನಿರತ್ನ ಹೇಳಿಕೆಗೆ ಕಿಡಿಕಾರಿದ ಮಾಜಿ ಸಚಿವ ಚೆಲುವರಾಯಸ್ವಾಮಿ,ಡಿಕೆಶಿ ಎಲ್ಲಿಯೂ ಒಡೆಯುತ್ತಿಲ್ಲ.ಮೊದಲ ದಿನದಿಂದಲೂ ಅವರೆಲ್ಲಿಯೂ ಜಾತಿ ಪ್ರಸ್ತಾಪಿಸಿಲ್ಲ.ಸಿದ್ದರಾಮಯ್ಯನವರು ಎಲ್ಲಾದರೂ ಜಾತಿ ತಂದಿದ್ದಾರೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನೇಕ ಚುನಾವಣೆಯನ್ನು ಮಾಡಿದ್ದಾರೆ.ಈಗ ಉಪಚುನಾವಣೆಯನ್ನೂ ಎದುರಿಸುತ್ತಿದ್ದಾರೆ. ಅವರು ಯಾವುದೇ ಜಾತಿಕಾರ್ಡ್ ಫ್ಲೇ ಮಾಡುತ್ತಿಲ್ಲ. ಬಿಜೆಪಿಯವರು ಉದ್ದೇಶಪೂರ್ವಕವಾಗಿ ಹೇಳುತ್ತಿದ್ದಾರೆ. ಸಣ್ಣ ಪುಟ್ಟ ಪಾರ್ಟಿಗಳು ಇದನ್ನು ಮಾಡಬಹುದೇನೋ ಆದರೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷ . ಕಾಂಗ್ರೆಸ್ ಎಲ್ಲಾ ಸಮುದಾಯಗಳ ಪಕ್ಷ.ಹಾಗಾಗಿ ಜಾತಿ ಕಾರ್ಡ್ ಬಳಸುವುದಿಲ್ಲ ಎಂದರು.
ಸಿದ್ದರಾಮಯ್ಯ ಅವಧಿಯಲ್ಲಿ ಎಲ್ಲಾ ಜಾತಿಗಳಿಗೂ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು.ಉಳುವನೇ ಭೂಮಿ ಒಡೆಯ ಎಂದು ಎಲ್ಲಾ ಜಾತಿಯವರಿಗೂ ಕಾಂಗ್ರೆಸ್ ಕಾನೂನು ತಂದಿತ್ತು. ಎಲ್ಲಾ ಸಮಾಜದ ಹಿತಕಾಪಾಡುವುದು ಕಾಂಗ್ರೆಸ್ ದೃಷ್ಟಿಕೋನವಾಗಿದೆ.ಮುನಿರತ್ನ ಈಗತನ್ನ ಅಸ್ತಿತ್ವ ಉಳಿಸಿಕೊಳ್ಳಲು ಇಲ್ಲಸಲ್ಲದ ಹೇಳಿಕೆ ಕೊಟ್ಟುರಾಜಕಾರಣ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.
ಶಾಂತಿ ಕದಡುವುದು ಗಲಾಟೆ ಮಾಡುವುದು ಬಿಜೆಪಿಯವರೇ ಹೊರತು ಕಾಂಗ್ರೆಸ್ ಅಲ್ಲ. ಮುನಿರತ್ನ ಮೇಲೆ ಎಲ್ಲಾ ಆರೋಪಗಳಿವೆ. ಹೊಡೆಸಿಕೊಳ್ಳುವ ಮೊದಲೇ ಎಫ್ ಐಆರ್ ಹಾಕಿಸುತ್ತಾರೆ. ಚುನಾವಣೆಗೆ ಏನೂ ಬೇಕೋ ಆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಾರದರ್ಶಕ ಚುನಾವಣೆ ನಡೆಸುತ್ತಿದೆ ಎಂದು ಚೆಲುವರಾಯಸ್ವಾಮಿ ಹೇಳಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
