ಬೆಂಗಳೂರು
ದೊಡ್ಡಬಳ್ಳಾಪುರದ ಜಾಲಿಗೆರೆ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯೊಬ್ಬರ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಗುರುತು ಸಿಗದಂತೆ ಮುಖ ಜಜ್ಜಿ ದುಷ್ಕರ್ಮಿಗಳು ಪರಾರಿಯಾಗಿರುವ ದುರ್ಘಟನೆ ದೊಡ್ಡಬೆಳವಂಗಲ ಪೆÇಲೀಸ್ ಠಾಣಾ ವ್ಯಾಪ್ಯಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಗೆ ಸುಮಾರು 40 ವರ್ಷದವರು ಎಂದು ಗುರುತಿಸಲಾಗಿದೆ.ಸದ್ಯಕ್ಕೆ ಅವರ ಹೆಸರು ವಿಳಾಸ ಪತ್ತೆಯಾಗಿಲ್ಲ ವ್ಯಕ್ತಿಯನ್ನು ಗುರುತು ಸಿಗದಂತೆ ತಲೆ ಮೇಲೆ ಕಲ್ಲು ಹಾಕಿ ಮುಖ ಜಜ್ಜಿ ಕೊಲೆ ಮಾಡಲಾಗಿದೆ.ಜಾಲಿಗೆರೆ ಅರಣ್ಯ ಪ್ರದೇಶದಲ್ಲಿದನ ಮೇಯಿಸಲು ಹೋದವರಿಗೆ ಬಂಡೆಗಳ ಮಧ್ಯೆ ಕೊಳೆತು ನಾರುತ್ತಿದ್ದ ಶವ ಕಣ್ಣಿಗೆ ಬಿದ್ದಿದ್ದು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.ಸುದ್ದಿ ತಿಳಿದ ತಕ್ಷಣವೇ ದೊಡ್ಡ ಬೆಳವಂಗಲ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮೃತ ದೇಹದ ಕೊರಳಲ್ಲಿ ಚಿನ್ನದ ಸರ ಮತ್ತು ಉಂಗುರ ಹಾಗೆಯೇ ಇದ್ದು, ವೈಯಕ್ತಿಕ ಕಾರಣಕ್ಕೆ ಕೊಲೆ ಮಾಡಿರುವ ಸಾಧ್ಯತೆ ಇದೆ.ಗುರುತು ಸಿಗಬಾರದು ಅನ್ನುವ ಕಾರಣಕ್ಕೆ ಬೇರೆಡೆ ಕೊಲೆ ಮಾಡಿ ಜಾಲಿಗೆರೆ ಅರಣ್ಯದಲ್ಲಿ ಶವ ಬಿಸಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.ಮೃತದೇಹದ ಶರ್ಟ್ ಜೇಬಿನಲ್ಲಿ ನೆಲಮಂಗಲದ ಬಳಿ ಬಸ್ನಲ್ಲಿರುವ ಓಡಾಡಿರುವ ಬಸ್ ಟಿಕೆಟ್ ಸಿಕ್ಕಿದ್ದು, ಅದರ ಜಾಡಿನ ಹಿಡಿದು ಪ್ರಕರಣ ದಾಖಲಿಸಿರುವ ದೊಡ್ಡಬೆಳವಂಗಲ ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








