ಅಡ್ಡ ಗಟ್ಟಿ ಚಾಕುವಿನಿಂದ ಇರಿದು ಕೊಲೆ

ಬೆಂಗಳೂರು

     ಬೈಕ್‍ನಲ್ಲಿ ಹೋಗುತ್ತಿದ್ದ ಮೀನು ವ್ಯಾಪಾರಿಯೊಬ್ಬರನ್ನು ಅಡ್ಡ ಗಟ್ಟಿದ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದು ಅವರ ಬಳಿ ಇದ್ದ
2.80 ಲಕ್ಷ ರೂಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

      ತಮಿಳುನಾಡು ಮೂಲದ ಪ್ರಭು ಅವರು ಮೀನು ಮಾರಾಟಗಾರರಿಗೆ ಮೀನು ಪೂರೈಸಿದ್ದ ಹಣ ಸಂಗ್ರಹಿಸಿ ಅದನ್ನು ಬ್ಯಾಗ್‍ನಲ್ಲಿಟ್ಟು ಭಾನುವಾರ ರಾತ್ರಿ ಬೈಕ್‍ನಲ್ಲಿ ಹೋಗುತ್ತಿದ್ದರು. ಬೈಕ್ ಸೆಂಟ್ರಲ್ ಸ್ಟ್ರೀಟ್‍ನ ಬಿಆರ್‍ವಿ ಜಂಕ್ಷನ್ ಬಳಿ ತಲುಪಿದಾಗ ಇಬ್ಬರು ದರೋಡೆಕೋರರು ಅವರನ್ನು ಅಡ್ಡಗಟ್ಟಿ, ಚಾಕುವಿನಿಂದ ಅವರ ಬಲಗೈಗೆ ಇರಿದು 2.80 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಪೊಲೀಸರು ಆರೋಪಿಯ ಪತ್ತೆಗೆ ಬಲೆಬೀಸಿದ್ದಾರೆ.

ಡ್ರಾಪ್ ಕೇಳಿ ಕಾರು ದೋಚಿದ

      ನಾಗವಾರ ಸಿಗ್ನಲ್ ಬಳಿ ನಿನ್ನೆ ರಾತ್ರಿ ಡ್ರಾಪ್ ಕೇಳಿ ಕಾರಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಅಪಘಾತದ ನೆಪ ಮಾಡಿ ಕಾರನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

        ನಾಗವಾರದ ಬಳಿ ರಾತ್ರಿ ಸ್ನೇಹಿತರಾದ ವೇಲು ಹಾಗೂ ಜೋಸೆಫ್ ಮದ್ಯಪಾನ ಮಾಡಿ ಊಟ ಮುಗಿಸಿ ಮನೆಗೆ ಹೋರಟಿದ್ದು ಸ್ನೇಹಿತ ಜೋಸೆಫ್ ಅವರನ್ನು ಎಚ್‍ಬಿಆರ್ ಲೇಔಟ್‍ಗೆ ಡ್ರಾಪ್ ಮಾಡಿದ ವೇಲು ವಾಪಸ್ ಬರುವ ವೇಳೆ ಅಂಗಡಿಯೊಂದರ ಬಳಿ ಕಾರು ನಿಲ್ಲಿಸಿ ಸಿಗರೇಟ್ ಕೊಂಡು ಸೇದುತ್ತಾ ನಿಂತಿದ್ದಾರೆ.

        ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಬಂದ ಸುಮಾರು 25 ವರ್ಷದ ತಮಿಳು ಯುವಕನೊಬ್ಬ ನಾಗವಾರ ಸಿಗ್ನಲ್‍ಗೆ ಬಿಡುವಂತೆ ಡ್ರಾಪ್ ಕೇಳಿದ್ದಾನೆ. ವೇಲುಗೆ ಅಯ್ಯೋ ಅನ್ನಿಸಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ. ನಾಗವಾರ ಸಿಗ್ನಲ್ ಬಂದಾಗ ವೇಲು ಕಾರ್ ನಿಲ್ಲಿಸಿದ್ದಾರೆ. ಆಗ ಯುವಕ ಸರ್ ಮುಂದೆ ಈರಣ್ಣನಪಾಳ್ಯ ಬಳಿ ಇಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾನೆ.

        ವೇಲು ಈರಣ್ಣನಪಾಳ್ಯದ ಕಡೆ ಕಾರು ಚಲಾಯಿಸುತ್ತಿದ್ದಾಗ ಯುವಕ ಸಾರ್, ಯಾರೋ ಕಾರಿಗೆ ಡಿಕ್ಕಿ ಹೊಡೆದರು ಎಂದು ಹೇಳಿದ್ದಾನೆ. ಆಗ ವೇಲು ಕಾರ್ ನಿಲ್ಲಿಸಿ ಕೆಳಗೆ ಇಳಿದು ನೋಡಲು ಹೋಗಿದ್ದಾರೆ. ಈ ಸಂದರ್ಭದಲ್ಲಿ ಡ್ರೈವರ್ ಸೀಟಿಗೆ ಬಂದು ಕಾರನ್ನು ಯೂಟರ್ನ್ ಮಾಡಿ ವೇಗವಾಗಿ ಕಾರ್ ಸಮೇತ ಯುವಕ ಪರಾರಿಯಾಗಿದ್ದಾನೆ.ಈ ಸಂಬಂಧ ವೇಲು ನೀಡಿರುವ ದೂರು ದಾಖಲಿಸಿರುವ ಹೆಣ್ಣೂರು ಪೊಲೀಸರು ದುಷ್ಕರ್ಮಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link