ಕುಡಿಯಲು ಹಣ ಕೊಡದಿದ್ದಕ್ಕೆ ಚಾಕುವಿನಿಂದ ಇರಿದು ಕೊಲೆ..!!

ಬೆಂಗಳೂರು

    ಕುಡಿಯಲು ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಉಂಟಾದ ಜಗಳದಲ್ಲಿ ಆಕ್ರೋಶಗೊಂಡು ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದಿದ್ದ ಇಬ್ಬರು ಆರೋಪಿಗಳು ಚಿಕ್ಕಜಾಲ ಪೊಲೀಸರ ಬಲೆಗೆ ಬಿದ್ದಿದ್ದಾರೆ.

     ಮೀನಾಕುಂಟೆಯ ಹರೀಶ್ (22) ಮತ್ತು ಚಿಕ್ಕಜಾಲದ ಪೃಥ್ವಿ (23)ನನ್ನು ಬಂಧಿತ ಆರೋಪಿಗಳಾಗಿದ್ದಾರೆ.ಕೃತ್ಯದಲ್ಲಿ ಭಾಗಿಯಾಗಿ ಪರಾರಿಯಾಗಿರುವ ಮತ್ತೊಬ್ಬ ಆರೋಪಿ ಕಿರಣ್ ಬಂಧನಕ್ಕೆ ತೀವ್ರ ಶೋಧ ನಡೆಸಿದ್ದಾರೆ ಈ ಮೂವರು ಕುಡಿದ ಅಮಲಿನಲ್ಲಿ ಚಿಕ್ಕಜಾಲ ಪಲೆಕಮ್ಮನಗರದ ರಾಜ ಅವರನ್ನು ಕೊಲೆಗೈದು ಪರಾರಿಯಾಗಿದ್ದರು ಎಂದು ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ತಿಳಿಸಿದ್ದಾರೆ.

    ಕಳೆದ ಜು.6ರ ರಾತ್ರಿ 8.30ರಲ್ಲಿ ಚಿಕ್ಕಜಾಲದ ಹಾಲಿನ ಡೈರಿ ಬಳಿ ಸ್ನೇಹಿತರ ಜತೆ ರಾಜ ನಿಂತಿದ್ದ ಸ್ಥಳಕ್ಕೆ ಬಂದ ಪೃಥ್ವಿ,ಹರೀಶ್ ಮತ್ತು ಕಿರಣ್ ಕುಡಿಯಲು 1 ಸಾವಿರ ರೂ. ಕೊಡುವಂತೆ ಕೇಳಿದರು. ನನ್ನ ಬಳಿ ಹಣ ಇಲ್ಲ ಎಂದಿದ್ದಕ್ಕೆ ಗಲಾಟೆ ತೆಗೆದರು.ಪೃಥ್ವಿ ತನ್ನ ಬಳಿಯಿದ್ದ ಚಾಕುವಿನಿಂದ ತಲೆ ಭಾಗಕ್ಕೆ ಇರಿದ ಎಂದು ರಾಜ ದೂರು ನೀಡಿದ್ದ. ಪ್ರಕರಣ ದಾಖಲಿಸಿಕೊಂಡು ಪೃಥ್ವಿ ಮತ್ತು ಹರೀಶ್‍ನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ.

    ಘಟನೆ ವೇಳೆ ನಾಲ್ವರೂ ಮದ್ಯ ಸೇವಿಸಿದ್ದರು ಎಂಬುದು ಗೊತ್ತಾಗಿದೆ. ರಾಜ ಬೈಕ್‍ನಲ್ಲಿಡ್ರಾಪ್ ಕೊಡುವಂತೆ ಕ್ಯಾತೆ ತೆಗೆದಿದ್ದ.ಈ ವೇಳೆ ನನ್ನ ಕೈ ಆತನ ತಲೆ ಭಾಗಕ್ಕೆ ತಗುಲಿ ಗಾಯವಾಗಿದೆ. ಚಾಕುವಿನಿಂದ ಇರಿದಿಲ್ಲ ಎಂದು ಆರೋಪಿ ಪೃಥ್ವಿ ಹೇಳುತ್ತಿದ್ದಾನೆ. ಈ ಕುರಿತು ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link