ಮೂರು ವರ್ಷವಾದರೂ ಕಾರ್ಯಾರಂಭವಾಗದ ಶುದ್ದ ಕುಡಿಯುವ ನೀರಿನ ಘಟಕ

ಕೊಟ್ಟೂರು

    ಪಟ್ಟಣದ 4ನೇ ವಾರ್ಡ್ ಅಂಗನವಾಡಿ ಶಾಲೆ ಸಮೀಪ ನಿರ್ಮಿಸಿರುವ ಶುದ್ದ ಕುಡಿಯುವ ನೀರಿನ ಘಟಕ ಕಳೆದ ಮೂರು ವರ್ಷಗಳಿಂದ ನಿರುಪಯುಕ್ತವಾಗಿದೆ.ಶಾಸಕರ ಅನುದಾದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಕಾದ ಉಪಕರಣಗಳನ್ನು 3 ವರ್ಷವಾದರೂ ಅಳವಡಿಸಿರುವುದಿಲ್ಲ.

   ಶಾಸಕ ಭೀಮಾನಾಯ್ಕ ಮೂರು ವರ್ಷಗಳ ಹಿಂದೆ ಇದನ್ನು ಉದ್ಘಾಟಿಸಿದ್ದನ್ನು ಬಿಟ್ಟರೆ ಘಟಕ ಕಾರ್ಯಾರಂಭವಾಗಿಲ್ಲ ಎಂದು ಸ್ಥಳೀಯರು ಹೇಳುತ್ತರೆ.

ಈ ವಾರ್ಡನ ಜನತೆಗೆ ಈ ಶುದ್ದ ಕುಡಿಯುವ ನೀರಿನ ಘಟಕ ಇದ್ದೂ ಇಲ್ಲದಂತ್ತಿದೆ. ಅದು ಪ್ರಾರಂಭವೇ ಆಗಿಲ್ಲ. ಯಾಕೆ ಉಪಕರಣಗಳನ್ನು ಜೋಡಿಸಿಲ್ಲ, ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ನೀರಿನ ವ್ಯವಸ್ಥೆ ಮಾಡಿಲ್ಲ ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಇಲ್ಲಿನ ಜನರು ಗಲಾಟೆ ಮಾಡಿದಾಗ, ಪಟ್ಟಣ ಪಂಚಾಯ್ತಿಯವರು ಒಂದೊಂದೇ ಸಲಕರಣೆಗಳನ್ನು ಜೋಡಿಸಿ ಪುನ: ಇತ್ತ ತಿರುಗಿ ನೋಡಿಲ್ಲ.

ಘಟಕಕ್ಕೆ ಇನ್ನೂ ಪೈಪ್ ಲೈನ್ ಆಗಿಲ್ಲ. ಫಿಲ್ಟರ್ ಕುರಿಸಿಲ್ಲ. ಈ ಭಾಗದ ಜನರಿಗೆ ಶುದ್ದ ಕುಡಿಯುವ ನೀರು ಯಾವಾಗ ಬರುತ್ತೆಂದು ಕಾತರದಿಂದ ಕಾಯುತ್ತಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap