ಅಂಧ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ

ಹುಳಿಯಾರು

            ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕøತಿಕ ಸಂಘ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕ 1 ಮತ್ತು 2 ರ ಅಡಿಯಲ್ಲಿ ಸುಗಮ ಸಂಗೀತ ಕಾರ್ಯಕ್ರಮವನ್ನು ಕಾಲೇಜಿನ ಬಯಲು ಆಲಯದಲ್ಲಿ ಏರ್ಪಡಿಸಲಾಗಿತ್ತು.
ಸಮೀಪದ ಶ್ರೀರಾಮಪುರದಲ್ಲಿರುವ ಸುರಕ್ಷಾ ಚಾರಿಟಬಲ್ ಟ್ರಸ್ಟ್‍ನ ಶ್ರೀನಿವಾಸ್ ಮತ್ತು ತಂಡದವರು ಈ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

            ಕಾರ್ಯಕ್ರಮದಲ್ಲಿ ಜನಪದಗೀತೆ, ಭಾವಗೀತೆ, ದೇಶಭಕ್ತಿಗೀತೆಗಳನ್ನು ತಬಲ, ಕೀಬೋರ್ಡ್ ಮುಂತಾದ ಪಕ್ಕವಾದ್ಯಗಳೊಂದಿಗೆ ಅಂಧ ಕಲಾವಿದರಾದ ಚನ್ನವೀರೇಶ್, ನೇತ್ರಾ, ಶಿವಮ್ಮ, ಗೌರಿ ಸುಶ್ರಾವ್ಯವಾಗಿ ಹಾಡಿದರು. ಟ್ರಸ್ಟ್‍ನ ಮುಖ್ಯಸ್ಥರಾದ ಶ್ರೀನಿವಾಸ್ ಅವರು ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಅಂಧ ವಿದ್ಯಾರ್ಥಿಗಳಿಗೆ ಶಿಕ್ಷಣ, ವಸತಿ, ಸಂಗೀತ ತರಬೇತಿ, ಕಂಪ್ಯೂಟರ್ ತರಬೇತಿ, ಸ್ವಾವಲಂಬಿಯಾಗಿ ಓಡಾಡುವ ತರಬೇತಿ ಮುಂತಾದ ಸೌಲಭ್ಯಗಳನ್ನು ನೀಡುತ್ತಿದ್ದು, ಪ್ರತಿವರ್ಷ ಕಾಲೇಜಿನಲ್ಲಿ ತಮ್ಮ ಸಂಸ್ಥೆಯ ಕಲಾವಿದರಿಂದ ಒಂದೊಂದು ಕಾರ್ಯಕ್ರಮವನ್ನು ಕೊಡಿಸಬೇಕೆಂದು ಕೇಳಿಕೊಂಡರು.

            ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಅವರು ಮಾತನಾಡಿ, ಪ್ರತಿಯೊಬ್ಬರೂ ಸಂಗೀತವನ್ನು ಕೇಳುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇಂದಿನ ಅಬ್ಬರದ ಚಲನಚಿತ್ರ ಗೀತೆಗಳೊಂದಿಗೆ ಸುಗಮ ಸಂಗೀತವನ್ನೂ ಕೇಳುವ ಅಭ್ಯಾಸ ರೂಢಿಸಿಕೊಂಡರೆ ನಮ್ಮ ವ್ಯಕ್ತಿತ್ವದಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ಕಾಣಬಹುದು ಎಂದರು.

            ಹಿಂದೂಸ್ಥಾನಿ, ಕರ್ನಾಟಿಕ್ ಸಂಗೀತವನ್ನು ಗಜಲ್, ಶಾಹಿರಿ, ವಚನಗಳು, ಕೀರ್ತನೆಗಳು, ದಾಸರ ಪದಗಳು ಹೀಗೆ ಯಾವುದೇ ಪ್ರಕಾರಗಳ ಮೂಲಕ ಪ್ರವೇಶ ಪಡೆಯಬಹುದು ಎಂದು ಹೇಳಿದರು.

            ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿ ವಿ.ನಾಗೇಶ್ ಮತ್ತು ವಿದ್ಯಾರ್ಥಿನಿ ಕೆ.ಪ್ರೇಮ ಪಕ್ಕವಾದ್ಯಗಳೊಂದಿಗೆ ಹಾಡಿದರು. ಕಲಾವಿದರಿಗೆ ಪ್ರೋತ್ಸಾಹಧನವಾಗಿ ಪ್ರಾಚಾರ್ಯರು, ಬೋಧಕ-ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗಿದ್ದ 3600 ರೂಗಳನ್ನು ನೀಡಲಾಯಿತು.

           ವಿದ್ಯಾರ್ಥಿ ಸಾಂಸ್ಕತಿಕ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಹೆಚ್.ಬಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ರೇಣುಕಾಮೂರ್ತಿ ಕಲಾವಿದರ ಪರಿಚಯ ಮಾಡಿಕೊಟ್ಟರು. ಕರಣ್.ಕೆ.ಮೂರ್ತಿ ವಂದಿಸಿದರು. ಸಿದ್ಧರಾಜು ಸಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಬೋಧಕ-ಬೋಧಕೇತರ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link