ಕೊರಟಗೆರೆ
ಸಮಾಜದಲ್ಲಿತುಳಿತಕ್ಕೊಳಗಾಗಿರುವ ಮಡಿವಾಳ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸರ್ಕಾರದ ಸವಲತ್ತು ಪಡೆದು ಶೈಕ್ಷಣಿಕವಾಗಿಅಭಿವೃದ್ದಿ ಹೊಂದಿದಾಗ ಮಾತ್ರ ಸಾಧ್ಯಎಂದು ತಹಶೀಲ್ದಾರ್ ನಾಗರಾಜು ತಿಳಿಸಿದರು.
ಅವರು ಪಟ್ಟಣದತಾಲೂಕುಕಛೇರಿಯ ಸಭಾಂಗಣದಲ್ಲಿತಾಲೂಕು ಆಡಳಿತ ಮತ್ತು ತಾಲೂಕು ಮಡಿವಾಳ ಸಂಘ ಏರ್ಪಡಿಸಿದ್ದ ಮಡಿವಾಳ ಮಾಚಿದೇವಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಾವಿರಾರು ವರ್ಷಗಳಿಂದ ಸಾಮಾಜಿಕ ತುಳಿತ್ತಕ್ಕೊಳಗಾದ ಮಡಿವಾಳ ಸಮುದಾಯ ಶೈಕ್ಷಣಿಕಗುಣಮಟ್ಟ ಹೆಚ್ಚಿದಾಗ ಮಾತ್ರಅಭಿವೃದ್ದಿ ಹೊಂದಲು ಸಾದ್ಯಎಂದರು.
ಮಡಿವಂತಿಕೆ ಸಂದರ್ಬದಲ್ಲಿಶೂದ್ರರಿಗೆ ಶಿಕ್ಷಣ ನಿಷೇದಿಸಲ್ಪಟ್ಟುದುರ್ಬಲರ ಶೋಷಣೆ, ಜಾತೀಯತೆ, ಮೇಲು ಕೀಳು ತಾರತಮ್ಮ, ಅಸ್ಪ್ರುಶ್ಯತೆ, ಮೂಡನಂಬಿಕೆಗಳ ಸೃಷ್ಟಿ ಯಿಂದ ಶಿಕ್ಷಣದಿಂದ ವಂಚಿತರಾದಕಾಲದಲ್ಲಿಗುರು ಮಲ್ಲಿಕಾರ್ಜುನಯ್ಯ ಸ್ವಾಮೀಗಳಿಂದ ಅಕ್ಷರಜ್ಞಾನ ಸಕಲ ಶಾಸ್ತ್ರಗಳನ್ನು ಕಲಿತ ಮಾಚಿದೇವರ ನೇರ ನುಡುಗಳಿಂದ ಸಮಾಜದಲ್ಲಿಕಾಯಕ ಮಾಡದ ಸೋಮಾರಿಗಳನ್ನು ಬಡವರನ್ನು ಶೋಷಿಸುವರನ್ನು ದುರ್ಗುಣವುಳ್ಳವರ ಬಗ್ಗೆ ನಿರ್ಲಕ್ಷತೋರಿಅರಸುತನ ಮೇಲಲ್ಲ-ಅಗಸತನ ಕೀಳಲ್ಲ ಎಂದುದನ್ನುಜನಕ್ಕೆ ಸಾರಿದ ಮಹಾನ್ ವ್ಯಕ್ತಿಯ ಸಮುದಾಯದ ಮುಖಂಡರುತಮ್ಮ ಸಮುದಾಯವನ್ನು ಒಗೂಡಿಸಿ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ತಮ್ಮ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿಆರ್ಥಿಕವಾಗಿಅಭಿವೃಧ್ದಿ ಹೊಂದುವಂತೆ ತಿಳಿಸಿದರು.
ಮಡಿವಾಳ ಸಮಾದನತಾಲೂಕುಅಧ್ಯಕ್ಷ ವೀರಕ್ಯಾತಪ್ಪ ಮಾತನಾಡಿ ಸಮಾಜದಲ್ಲಿ ನಿರ್ಲಕ್ಷೈಕ್ಕೊಳಗಾಗಿರುವ ಮಡಿವಾಳ ಜನಾಂಗ ಸಮಾಜಿಕವಾಗಿ, ಶೈಕ್ಷಣಿಕ, ಔದ್ಯೋಗಿಕ, ರಾಜಕೀಯವಾಗಿ ಮುಂದೆಬರಬೇಕಾದರೆ ಸರ್ಕಾರ ಮಡಿವಾಳ ಸಮುದಾಯದ ಬೇಡಿಕೆಯಾದಅನ್ನಪೂರ್ಣಮ್ಮ ವರದಿ ಜಾರಿಮಾಡಬೇಕು ಎಂದು ಒತ್ತಾಯಿಸಿದ ಅವರು ಇಲಾಖಾ ಅದಿಕಾರಿಗಳು ಮಡಿವಾಳ ಸಮುದಾಯಕ್ಕೆ ಸರ್ಕಾರದಿಂದದೋರೆಯುವ ಸವಲತ್ತುಗಳ ಬಗ್ಗೆ ತಿಳಿಸಬೇಕು ಹಾಗೂ ತಾಲೂಕು ಆಡಳಿತ ಮಡಿವಾಳ ಸಮುದಾಯತಮ್ಮ ಕುಲಕಸುಬು ಮಾಡಲುಡೋಬಿಘಾಟ್ ನಿರ್ಮಾಣಮಾಡಿಕೊಂಡುವ ಮೂಲಕ ಜನಾಂಗದ ಕುಲಕಸುಬಿಗೆ ಮಾನ್ಯತೆ ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಪ.ಪಂ.ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್, ಕಂದಾಯಇಲಾಖೆಯ ಅದಿಕಾರಿಗಳಾದ ಶ್ರೀರಂಗಯ್ಯ, ನರಸಿಂಹಮೂರ್ತಿ, ಎ.ಜೆ.ರಾಜು, ತಾ.ಪಂ.ಇಲಾಖೆಯರಮೇಶ್, ಸಮುದಾಯದ ಮುಖಂಡರಾದ ಹನುಮಂತರಾಯಪ್ಪ, ಗೋಪಾಲಯ್ಯ, ರಮೇಶ್, ತಿಮ್ಮರಾಜು, ಪುಟ್ಟರಾಜು, ಶ್ರೀನಿವಾಸಯ್ಯ, ಗೋವಿಂದರಾಜು ಸೇರಿದಂತೆಇನ್ನಿತರರು ಉಪಸ್ಥಿತರಿದ್ದರು.