ಮೈದಾಳ ಕೆರೆ: ಒಡೆದು ಹಾಕಿದ್ದ ತೂಬು ದುರಸ್ತಿ

ತುಮಕೂರು


      ತುಮಕೂರು ತಾಲ್ಲೂಕು ಮೈದಾಳ ಗ್ರಾಮದಲ್ಲಿ ಒಡೆದು ಹಾಕಲಾಗಿದ್ದ ಕೆರೆಯ ಕೋಡಿಯನ್ನು ತುಮಕೂರು ಮಹಾನಗರ ಪಾಲಿಕೆ ವತಿಯಿಂದ ದುರಸ್ತಿಗೊಳಿಸಿ, ಅಲ್ಲಿರುವ ನೀರನ್ನು ಸಂರಕ್ಷಿಸಲು ತುಮಕೂರು ಮಹಾನಗರ ಪಾಲಿಕೆಯು ಕ್ರಮ ಕೈಗೊಂಡಿದೆ.
      ಇತ್ತೀಚೆಗೆ ಮೈದಾಳ ಕೆರೆಯ ಕೋಡಿಯನ್ನು ಯಾರೋ ಕೆಲವರು ಒಡೆದು ಹಾಕಿದ್ದುದರಿಂದ ಕೆರೆಯ ನೀರು ಹೊರಕ್ಕೆ ವ್ಯರ್ಥವಾಗಿ ಹರಿದುಹೋಗಿತ್ತು. ಅಕ್ಕಪಕ್ಕದ ಜಮೀನುಗಳಲ್ಲಿ ನೀರು ಹರಿಯಿತು. ಹಳ್ಳಕೊಳ್ಳಗಳಲ್ಲಿ ನೀರು ತುಂಬಿಕೊಂಡಿತು. ಅಲ್ಲಿಂದ ಹರಿಯುತ್ತ ಬಂದ ನೀರು ತುಮಕೂರಿನ ಶೆಟ್ಟಿಹಳ್ಳಿ ಸಮೀಪದ ಜಮೀನುಗಳಿಗೂ ಹರಿದುಬಂದಿತ್ತು. ಹೀಗೆ ನೀರು ಅವ್ಯವಸ್ಥಿತವಾಗಿ ಹರಿದು ದೊಡ್ಡಪ್ರಮಾಣದಲ್ಲಿ ವ್ಯರ್ಥವಾಗಿತ್ತು. ಈ ರೀತಿ ಕೆರೆಯ ಕೋಡಿಯನ್ನು ಒಡೆದುಹಾಕಲು ರಾಜಕೀಯ ಕುಮ್ಮಕ್ಕು ಕಾರಣವೆಂದು ಹೇಳಲಾಗಿತ್ತು.
        ಪಲೀಸರಿಗೆ ದೂರು ಮೈದಾಳ ಕೆರೆಯ ನೀರನ್ನು ತುಮಕೂರು ನಗರದಲ್ಲೂ ಕುಡಿಯುವ ಉz್ದÉೀಶಕ್ಕೆ ಬಳಸುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಮಹಾನಗರ ಪಾಲಿಕೆಯು ಈ ಬಗ್ಗೆ ವಿಶೇಷ ಆಸ್ಥೆ ವಹಿಸಿತು. ತೂಬು ದುರಸ್ತಿಗೆ ಒಡನೆಯೇ ಕ್ರಮ ಜರುಗಿಸಿದೆ. ಜೊತೆಗೆ ಕೆರೆಯ ತೂಬು ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾನಗರ ಪಾಲಿಕೆಯು ಕ್ಯಾತಸಂದ್ರ ಪೆÇಲೀಸ್ ಠಾಣೆಗೆ ದೂರು ಸಲ್ಲಿಸಿದೆ. 
         ಪ್ರಸ್ತುತ ಮೈದಾಳ ಕೆರೆಯಲ್ಲಿ ಲ`À್ಯವಿರುವ ನೀರನ್ನು “ಕುಡಿಯುವ ಉz್ದÉೀಶಕ್ಕೆ” ಮಾತ್ರ ಬಳಸಬಹುದಾಗಿದೆ. ಸದರಿ ನೀರನ್ನು ತುಮಕೂರು ನಗರಕ್ಕೆ ಮಹಾನಗರ ಪಾಲಿಕೆಯು ಬಳಸಿಕೊಳ್ಳುತ್ತದೆ. ಇದಲ್ಲದೆ ಗ್ರಾಮೀಣ ನೀರು ಸರಬರಾಜು ಇಲಾಖೆ ಮೂಲಕ “ಬಹುಗ್ರಾಮ ಕುಡಿಯುವ ನೀರಿನ ಯೋಜನೆ”ಯಡಿ ಸುತ್ತಲಿನ 22 ಗ್ರಾಮಗಳಿಗೆ ನೀರನ್ನು ಬಳಸಲಾಗುತ್ತದೆ. 
        ಲ`À್ಯ ಮಾಹಿತಿ ಪ್ರಕಾರ “1924 ರಿಂದಲೂ ಮೈದಾಳ ಕೆರೆಯ ನೀರು ತುಮಕೂರು ನಗರಕ್ಕೆ ಬಳಕೆಯಾಗುತ್ತಿದೆ. ಮೈದಾಳ ಕೆರೆಯಿಂದ ಬರುವ ನೀರನ್ನು ತುಮಕೂರಿನ ವಿದ್ಯಾನಗರದ `ನೀರು ಶುದ್ಧೀಕರಣ ಘಟಕ’ (ವಾಟರ್ ವಕ್ರ್ಸ್)ಕ್ಕೆ ಹರಿಸಿ, ಅಲ್ಲಿ ಶುದ್ಧೀಕರಿಸಿ ನಗರದ ವಿವಿ`À ವಾರ್ಡ್‍ಗಳಿಗೆ, ಬಡಾವಣೆಗಳಿಗೆ ಸರಬರಾಜು ಮಾಡಲಾಗುತ್ತಿದೆ. ಪ್ರಸ್ತುತ ಪ್ರತಿನಿತ್ಯ ಸುಮಾರು 15 ಲಕ್ಷ ಲೀಟರ್‍ಗಳಷ್ಟು ನೀರು ಮೈದಾಳ ಕೆರೆಯಿಂದ ಸರಬರಾಜಾಗುತ್ತಿದ್ದು, ಆ ನೀರನ್ನು ತುಮಕೂರು ನಗರದ ವಿವಿ`À ಬಡಾವಣೆಗಳಿಗೆ ಕ್ರಮವಾಗಿ ವಿತರಣೆ ಮಾಡಲಾಗುತ್ತಿದೆ.
 
        ಇದರಿಂದ ಹೇಮಾವತಿ ನೀರಿನ ಮೇಲಿರುವ ಒತ್ತಡ ಅಷ್ಟರಮಟ್ಟಿಗೆ ಕಡಿಮೆಯಾದಂತೆ ಆಗುತ್ತಿದೆ ಹಾಗೂ ಬುಗುಡನಹಳ್ಳಿಯ “ಹೇಮಾವತಿ ಜಲಸಂಗ್ರಹಾಗಾರ”ದಲ್ಲಿರುವ ಹೇಮಾವತಿ ನೀರನ್ನು ಇನ್ನೂ ಕೆಲವು ದಿನಗಳು ಹೆಚ್ಚಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ” ಎಂದು ಹೇಳಲಾಗಿದೆ.
        ಮೈದಾಳ ಗ್ರಾಮದಲ್ಲೂ ಪ್ರಸ್ತುತ ಕುಡಿಯುವ ನೀರಿಗೆ ಸಮಸ್ಯೆ ಇದೆ. ಕೊಳವೆ ಬಾವಿಗಳಲ್ಲಿ ನೀರು ಲಭಿಸುತ್ತಿಲ್ಲ. ಮೈದಾಳದಲ್ಲಿ ಹೊಸದಾಗಿ 1300 ಅಡಿಗಳಷ್ಟು ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಲಭಿಸುತ್ತಿಲ್ಲ. ಹೀಗಾಗಿ ಮೈದಾಳ ಗ್ರಾಮಕ್ಕೂ ಕುಡಿಯುವ ನೀರಿಗೆ ಈ ಕೆರೆಯ ನೀರೇ ಆ`Áರವಾಗಿದೆ” ಎಂದು ಮೂಲಗಳು ಹೇಳುತ್ತಿವೆ.

Recent Articles

spot_img

Related Stories

Share via
Copy link
Powered by Social Snap