ಲೋಕಸಭಾ ಚುನಾವಣೆ: ಮೈತ್ರಿ ಕೂಟಕ್ಕೆ ಬೆಂಬಲ

ತುಮಕೂರು

         ದೇಶದ ಇಂದಿನ ಅರಾಜಕ ಪರಿಸ್ಥಿತಿಗೆ ಬಿಜೆಪಿ ನೇತೃತ್ವದ ಎನ್.ಡಿ.ಎ. ಸರ್ಕಾರವೇ ಕಾರಣವಾಗಿದ್ದು, ದೇಶವು ಸರ್ವಾಧಿಕಾರದತ್ತ ದಾಪುಗಾಲಿಡುತ್ತಿದೆ. ಇಂತಹ ಸಂದರ್ಭದಲ್ಲಿ ಫ್ಯಾಸಿಸ್ಟ್ ಮನೋಭಾವದ ಸರ್ಕಾರವನ್ನು ತೊಲಗಿಸುವುದಕ್ಕಾಗಿ ಜಾತ್ಯಾತೀತ ಪಕ್ಷವನ್ನು ಬೆಂಬಲಿಸುವುದೇ ಅತಿ ಅಗತ್ಯವಾಗಿದೆ.

         ಈ ದೇಶವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವೆವು ಎಂಬ ಬೊಗಳೆ ಬಿಡುತ್ತಾ ಅಧಿಕಾರಕ್ಕೇರಿದ ಬಿಜೆಪಿ ಸರ್ಕಾರ ತಾನು ಜನರಿಗೆ ನೀಡಿದ ಭರವಸೆಯನ್ನೆಲ್ಲಾ ಮರೆಯಿತು. ಸುಂದರ ಆಶ್ವಾಸನೆಗಳಿಂದ ಕೂಡಿದ ಸುಂದರ ಶೈಲಿಯ ಭಾಷಣದಿಂದಲೇ ಜನರಿಗೆ ಮಂಕುಬೂದಿ ಎರಚಿ ಅಧಿಕಾರಕ್ಕೇರಿದ ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆ ಇಡೀ ದೇಶವೇ ಕಂಗಾಲಾಗುವ ಸ್ಥಿತಿ ತಲುಪಿತು. ಆರ್ಥಿಕ ಸ್ಥಿತಿಯೂ ತಳಮಟ್ಟಕ್ಕೆ ಕುಸಿಯಿತು.

         ಇಲ್ಲಿನ ಜನಸಾಮಾನ್ಯರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು, ರೈತರು ತೀವ್ರ ಕಿರುಕುಳ ಅನುಭವಿಸಬೇಕಾಗಿ ಬಂತು. ದೇಶದಲ್ಲಿ ಕೋಮು ವೈಷಮ್ಯವು ದಿನೇ ದಿನೇ ವ್ಯಾಪಕವಾಯಿತು. ದೇಶದ ಪ್ರಸಕ್ತ ರಾಜಕೀಯ ಸನ್ನಿವೇಶದಲ್ಲಿ ಸಂವಿಧಾನ ಉಳಿವಿಗಾಗಿ ಜಾತ್ಯಾತೀತ ಮತಗಳ ವಿಭಜನೆಯನ್ನು ತಡೆಯುವುದಕ್ಕೋಸ್ಕರ ಕರ್ನಾಟಕ ರಾಜ್ಯದಲ್ಲಿ ವೆಲ್ಫೇರ ಪಾರ್ಟಿಯು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ ಎಂದು ರಾಜ್ಯ ಚುನಾವಣಾ ಸಮಿತಿಯು ನಿರ್ಧರಿಸಿದೆ.

         ರಾಜ್ಯದಲ್ಲಿ ಒಟ್ಟು 28 ಕ್ಷೇತ್ರಗಳ ಪೈಕಿ 27ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಸಂಪೂರ್ಣವಾಗಿ ಬೆಂಬಲಿಸಲಾಗುವುದು ಎಂದು ತೀರ್ಮಾನಿಸಿದೆ. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷವನ್ನು ಬೆಂಬಲಿಸಲಾಗುವುದೆಂದು ಶೀಘ್ರವೇ ತಿಳಿಸಲಾಗುವುದು ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾಧ್ಯಕ್ಷರಾದ ತಾಜುದ್ದೀನ್ ಷರೀಫ್ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap