ಮೈತ್ರಿ ಸರ್ಕಾರಕ್ಕೆ ಜನತೆಯಿಂದ ತಕ್ಕ ಪಾಠ : ಯಡಿಯೂರಪ್ಪ

ಬೆಂಗಳೂರು

        ಅಧಿಕಾರಕ್ಕೆ ಬಂದ ಇಪ್ಪತ್ನಾಲ್ಕು ಗಂಟೆಗಳಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದ ಕುಮಾರಸ್ವಾಮಿ ಮಾತಿಗೆ ತಪ್ಪಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆ ಉಪಚುನಾವಣೆಗಳಲ್ಲಿ ಇದೇ ಕಾರಣಕ್ಕಾಗಿ ಜನ ಅವರಿಗೆ ಜನ ಪಾಠ ಕಲಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

      ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿದ್ದಕುಮಾರಸ್ವಾಮಿ ಮಾತುತಪ್ಪಿದ್ದಾರೆ. ರೈತರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅನ್ಯಾಯವೆಸಗಿದ್ದು, ಲೋಕಸಭಾಚುನಾವಣೆ ಹಾಗೂ ಎರಡು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಜನತಕ್ಕ ಪಾಠ ಕಲಿಸಲಿದ್ದಾರೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಪುನರುಚ್ಚರಿಸಿದ್ದಾರೆ.

      ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮಹಾನ್ ಮಾನವತಾವಾದಿ ಬಸವಣ್ಣನವರ ಜಯಂತಿಯನ್ನುಇಂದು ನಾಡಿನಉದ್ದಗಲಕ್ಕೂ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ. ನಾಡಿನ ಸಮಸ್ತ ಜನತೆಗೆ ಬಸವೇಶ್ವರಜಯಂತಿ ಶುಭಾಶಯ ಕೋರುತ್ತೇನೆಎಂದರು.

       ರೈತರಿಗೆ ಋಣ ಮುಕ್ತ ಪ್ರಮಾಣಪತ್ರ ಕೊಡುತ್ತೇವೆ ಎಂದಿದ್ದವರು ಈಗ ವರಸೆ ಬದಲಿಸಿದ್ದಾರೆ. ಸಾಂತ್ವನ ಪತ್ರಕೊಡುವುದಾಗಿ ಹೇಳುತ್ತಿದ್ದಾರೆ. ಇದು ಸಿಎಂ ಕುಮಾರಸ್ವಾಮಿಅನ್ನದಾತರಿಗೆ ಮಾಡಿದದೊಡ್ಡ ಮೋಸ. ಇದನ್ನು ನಾವು ಖಂಡಿಸುತ್ತೇವೆ. ರೈತ ಸಮುದಾಯದಜೊತೆಇವರುಚೆಲ್ಲಾಟಆಡ್ತಿದ್ದಾರೆ ವಾಗ್ದಾಳಿ ನಡೆಸಿದರು.

       ಇನ್ನು ಚಿಂಚೋಳಿ ಉಪ ಚುನಾವಣೆ ಪ್ರಚಾರದ ನಿಮಿತ್ತ ಕಲಬುರಗಿಕಡೆ ಹೋಗಿದ್ದೆ. ಕಲಬುರಗಿಯಲ್ಲಿಜನ ನೀರಿಗಾಗಿ ಕಷ್ಟ ಪಡ್ತಿರೋದನ್ನು ನೋಡಿದರೆಕಣ್ಣಲ್ಲಿ ನೀರು ಬರುತ್ತೆ. ಅಧಿಕಾರಿಗಳು, ಸಚಿವರುಕುಡಿಯೋ ನೀರಿನ ಸಮಸ್ಯೆ, ಬರಗಾಲದಕಡೆ ಗಮನ ಕೊಡುತ್ತಿಲ್ಲ. ಹೇಳೋರು ಕೇಳೋರು ಯಾರೂಇಲ್ಲ, ಈ ಬಗ್ಗೆ ಗಮನ ಹರಿಸೋಕೆ ಸಿಎಂಗೆ ಬಿಡುವಿಲ್ಲ. ಕುಡಿಯುವ ನೀರಿಗೆ ಹಾಹಾಕಾರಉಂಟಾಗಿದೆ. ಬಾವಿಯಲ್ಲಿಒಂದುಕೊಡ ನೀರುತೆಗೆಯಲು ಹೆಣ್ಣು ಮಕ್ಕಳು ಎಷ್ಟು ಕಷ್ಟ ಪಡ್ತಿದ್ದಾರೆಅಂತ ಮಾಧ್ಯಮಗಳಲ್ಲಿ ನೀವೆಲ್ಲಾ ತೋರಿಸಿದ್ದೀರಿ. ಪರಿಸ್ಥಿತಿ ಹೀಗಿದ್ದರೂಟ್ಯಾಂಕರ್ ಮೂಲಕವೂ ನೀರುಕೊಡ್ತಿಲ್ಲಎಂದುಯಡಿಯೂರಪ್ಪ ಸರ್ಕಾರದ ವಿರುದ್ಧಗುಡುಗಿದರು.

       ಜಾನುವಾರುಗಳಿಗೆ ಗೋಶಾಲೆ, ಮೇವು ಬ್ಯಾಂಕ್ಗಳನ್ನು ಆರಂಭಿಸಿಲ್ಲ. ಸಿಎಂ ಕಣ್ಣು ಮುಚ್ಚಿಕೊಂಡುಕೂತಿದ್ದಾರೆ. ಕೂಡಲೇ ಈ ಬಗ್ಗೆ ಕ್ರಮಕೈಗೊಂಡು, ಹಣ ಬಿಡುಗಡೆ ಮಾಡಬೇಕು. ಎರಡು ಮೂರು ದಿನದಲ್ಲಿ ಸುಧಾರಣೆ ಮಾಡದೇಇದ್ದರೆರಾಜ್ಯಾದ್ಯಂತ ಬಿಜೆಪಿ ಹೋರಾಟ ಮಾಡುತ್ತದೆಎಂದುಎಚ್ಚರಿಕೆ ನೀಡಿದರು.

        ಸರ್ಕಾರಅಂತೂ ಸತ್ತಿದೆ. ಅಧಿಕಾರಿಗಳಿಗೆ ಏನಾಗಿದೆಈಗಲಾದರೂತಕ್ಷಣ ಬರ ವೀಕ್ಷಣೆ ಮಾಡಲಿ, ಕೇಂದ್ರಯಾವುದೇ ನೆರವು ನೀಡಲು ಸಿದ್ಧವಿದೆ. ಆದರೆ ಈ ಸರ್ಕಾರರಾಜಕೀಯದೊಂಬರಾಟದಲ್ಲಿ ನಿರತವಾಗಿದೆಎಂದು ಮೈತ್ರಿ ಸರ್ಕಾರದ ವಿರುದ್ದ ಯಡಿಯೂರಪ್ಪ ಕಿಡಿಕಾರಿದರು.

         ತುಮಕೂರಿನಲ್ಲೂ ಕಾಂಗ್ರೆಸ್ ಮತಗಳು ಬಿಜೆಪಿಗೆ ಬಂದಿವೆ ಎಂದು ಮಾಜಿ ಶಾಸಕ ಸುರೇಶ್‍ಗೌಡ ಹೇಳಿಕೆ ವಿಚಾರಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಯಡಿಯೂರಪ್ಪ, ಫಲಿತಾಂಶಕ್ಕೆಇನ್ನೇನು ಕೆಲವೇ ದಿನಗಳು ಬಾಕಿ ಇದೆ. ತುಮಕೂರಲ್ಲೂ ಬಿಜೆಪಿ ಗೆಲ್ಲೋ ವಿಶ್ವಾಸಇದೆಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link